ಕುಂದಾಪುರ: ಹೆಚ್ಚುತ್ತಿರುವ ನಗ-ನಗದು ಕಳವು
ವಾರದೊಳಗೆ 4 ಕಳ್ಳತನ ಪ್ರಕರಣ ಪತ್ತೆಗೆ ವಿಶೇಷ ತಂಡ ರಚನೆಗೆ ಆಗ್ರಹ
Team Udayavani, Feb 15, 2021, 3:20 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕಳೆದೊಂದು ವಾರದಲ್ಲಿ ನಗರ ಸೇರಿದಂತೆ ಕುಂದಾಪುರ ಉಪ ವಿಭಾಗದಲ್ಲಿ 4 ಕಳ್ಳತನ ಪ್ರಕರಣಗಳು ನಡೆದಿವೆ. ಅದರಲ್ಲೂ 3 ಪ್ರಕರಣಗಳಲ್ಲಿ ನಗ- ನಗದು ಕಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಫೆ.6ರಂದು ಶಾಸ್ತ್ರಿ ಸರ್ಕಲ್ ಬಳಿ ಉಪನ್ಯಾಸಕಿಯೊಬ್ಬರ 40 ಸಾವಿರ ರೂ. ಕಳವಾಗಿತ್ತು. ಈ ಕೃತ್ಯದಲ್ಲಿ ಮಹಿಳಾ ಗ್ಯಾಂಗ್ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಫೆ. 11ರಂದು ಹೆಮ್ಮಾಡಿ ಸಮೀಪ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ವೃದ್ಧೆಯೊಬ್ಬರ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಫೆ.13ರಂದು ಕುಂದಾಪುರದ ಹೊಸ ಬಸ್ ನಿಲ್ದಾಣ ಸಮೀಪದ ವಿದ್ಯಾ ಬುಕ್ ಹೌಸ್ ಬಳಿ ಪುಸ್ತಕ ಖರೀದಿಯ ಸೋಗಿನಲ್ಲಿ ಬಂದ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಆ ಮಳಿಗೆಯ ಮಾಲಕರ ಕಾರಿನಲ್ಲಿದ್ದ 20 ಸಾವಿರ ರೂ. ಕಳವುಗೈದಿದ್ದ.
ದೇಗುಲದ ಘಂಟೆ ಕಳವು :
ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಸುತ್ತ ಅಳವಡಿಸಿರುವ ಅಂದಾಜು 1 ಟನ್‌ಗೂ ಮಿಕ್ಕಿದ ಸುಮಾರು 500ರಿಂದ 600ಕ್ಕೂ ಹೆಚ್ಚಿನ ಕಂಚಿನ ಘಂಟೆಗಳು, ಭಕ್ತರೊಬ್ಬರು ನೀಡಿದ ಸುಮಾರು 106 ಕೆ.ಜಿ. ತೂಕದ ಒಂದು ದೊಡ್ಡ ಘಂಟೆ ಕಳವಾಗಿದ್ದು, ಇದರ ಒಟ್ಟು ಮೌಲ್ಯ 11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಳ್ಳರ ಪತ್ತೆಗೆ ಆಗ್ರಹ :
ಕುಂದಾಪುರ ಉಪ ವಿಭಾಗ ವ್ಯಾಪ್ತಿ ಯಲ್ಲಿ ಕಳೆದೊಂದು ವಾರದೊಳಗೆ 4 ಕಳ್ಳತನ ಪ್ರಕರಣಗಳು ನಡೆದಿದ್ದು, ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಕಳ್ಳರ ಪತ್ತೆಯಾಗಿಲ್ಲ. ಹೀಗೇ ಬಿಟ್ಟರೆ ಇದು ಹೆಚ್ಚುವ ಆತಂಕ ಜನರಲ್ಲಿದ್ದು, ಶೀಘ್ರ ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಕಳ್ಳರನ್ನು ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶೀಘ್ರ ವಿಶೇಷ ತಂಡ :
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ತನಿಖೆಗಳು ನಡೆದಿವೆ. ಆದರೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.
ಈ ಪ್ರಕರಣಗಳನ್ನು ಭೇದಿಸಲು ಶೀಘ್ರ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗುವುದು ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಕೆ. ಶಂಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.