Kundapura: ಎಂಟು ಗಂಟೆ ಕಾಲ ನಡೆದ ಕುಂದಾಪುರ ಪುರಸಭೆ!

ಅಜೆಂಡಾದಲ್ಲಿ  92 ವಿಷಯ; ಆದರೂ ಪ್ರಮುಖ ವಿಷಯ ಇಲ್ಲ ಎಂದು ಆಕ್ಷೇಪ

Team Udayavani, Nov 14, 2024, 2:48 PM IST

5

ಕುಂದಾಪುರ: ಹದಿನೆಂಟು ತಿಂಗಳ ಬಳಿಕ ಮಂಗಳವಾರ ನಡೆದ ಇಲ್ಲಿನ ಪುರಸಭೆಯ ಸಾಮಾನ್ಯ ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಗಿ ರಾತ್ರಿ 7 ಗಂಟೆವರೆಗೆ ನಡೆಯಿತು. 92 ವಿಷಯಗಳನ್ನು ಅಜೆಂಡಾದಲ್ಲಿ ಇಡಲಾಗಿತ್ತು. ಹಾಗಿದ್ದರೂ ಪ್ರಮುಖ ವಿಷಯಗಳನ್ನು ಅಜೆಂಡಾದಲ್ಲಿ ಇಟ್ಟಿಲ್ಲ ಎಂದು ಸದಸ್ಯರು ಅಸಮಾಧಾನ ಸೂಚಿಸಿದರು. ಮಾತಾಡಲು ಅವಕಾಶ ದೊರೆಯಲಿಲ್ಲ, ವಾರ್ಡ್‌ನ ಸಮಸ್ಯೆಗಳ ಕುರಿತು ಪ್ರಸ್ತಾವಿಸಲು ಸಾಧ್ಯವಾಗಲಿಲ್ಲ ಎಂದು ಸದಸ್ಯರು ಅಲವತ್ತುಕೊಂಡರು.

ಅಧ್ಯಕ್ಷ ಮೋಹನದಾಸ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆ ನೆಪದಲ್ಲಿ ಪೌರಕಾರ್ಮಿಕರನ್ನು ಕರೆಸಿ ತಾಲೂಕು ಕಚೇರಿಯ ಶೌಚಾಲಯ ತೊಳೆಸಲಾಗುತ್ತದೆ. ಹೋಗದೇ ಇದ್ದರೆ ನೋಟಿಸ್‌ ನೀಡುತ್ತೇವೆ ಎಂದು ಹೆದರಿಸಲಾಗುತ್ತದೆ, ಇದು ಸರಿಯಲ್ಲ ಎಂದು  ಚಂದ್ರಶೇಖರ ಖಾರ್ವಿ ಹೇಳಿದರು. ಆಗ ಸ್ಪಂದಿಸಿದ ಅಧ್ಯಕ್ಷರು ಇನ್ನು ಕಳುಹಿಸದಂತೆ ಸೂಚಿಸಿದರು.

ಕಂದಾಯ ಅಧಿಕಾರಿ ತನಗೆ ಅವಮಾನವಾಗುವಂತೆ ಮಾತನಾಡಿದ್ದಾರೆ ಎಂದು ರಾಘವೇಂದ್ರ ಖಾರ್ವಿ ಹೇಳಿದಾಗ  ಈ ಬಗ್ಗೆ ಚರ್ಚೆ ನಡೆದು ಮಹಿಳೆಯ ಬಗ್ಗೆ ಈ ರೀತಿ ಮಾತಾಡುವುದು ಸರಿಯಲ್ಲ ಎಂದು ವೀಣಾ ಭಾಸ್ಕರ ಅಧಿಕಾರಿ ಪರ ಸಹಾನುಭೂತಿ ತೋರಿಸಿದರು.

ಪ್ರವಾಸೋದ್ಯಮ ಬೋಟಿಂಗ್‌
ಕೋಡಿ ಭಾಗದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಅನಧಿಕೃತ ಬೋಟಿಂಗ್‌ ನಡೆಸ ಲಾಗುತ್ತಿದೆ. ಪುರಸಭೆ ಶುಲ್ಕ ವಿಧಿಸಬೇಕು ಎಂದು ದೇವಕಿ ಸಣ್ಣಯ್ಯ ಹೇಳಿದರು. ಎಲ್ಲ ನಿಯಮಗಳನ್ನೂ ಪಾಲಿಸಿ, ಅನುಮತಿ ಪಡೆದೇ ಬೋಟಿಂಗ್‌ ನಡೆಸಲಾಗುತ್ತಿದೆ, ಸಮುದ್ರ ವ್ಯಾಪ್ತಿಯಲ್ಲಿ ಚಲಿಸುವುದಕ್ಕೆ ಪುರಸಭೆ ಅನುಮತಿ ಬೇಕಿಲ್ಲ, ಪ್ರವಾ ಸೋದ್ಯಮ, ಬಂದರು ಇಲಾಖೆಯದ್ದು ಸಾಕು ಎಂದು ಗಿರೀಶ್‌ ಹೇಳಿದರು.

ಅನುದಾನ
ಪುರಸಭೆಯಲ್ಲಿ ಉಳಿಕೆ ಅನುದಾನದಲ್ಲಿ ಕಾಮಗಾರಿ ನಡೆಸಲು ಪ್ರಸ್ತಾವನೆ ಕೇಳ ಲಾಯಿತು. ಎಷ್ಟು ಅನುದಾನ ಎಂದು ಅನೇಕ ಬಾರಿ ಸದಸ್ಯರು ಕೇಳಿದರೂ ಅಧಿಕಾರಿಗಳು ಹೇಳಿರಲಿಲ್ಲ. ಬಳಿಕ 1.7 ಕೋ.ರೂ. ಎಂದರು. ಕುಡ್ಸೆಂಪ್‌ ಲೋನ್‌ ಬಾಕಿಯಿದ್ದು ಕಟ್ಟುವ ಬಗ್ಗೆ, ಕಟ್ಟಡ ಬಾಡಿಗೆಯಿಂದ ಬಂದ ಹಣ ಇತರ ಕೆಲಸಗಳಿಗೆ ಬಳಸುವಂತಿಲ್ಲ, ಕಟ್ಟಡಗಳ ನಿರ್ಮಾಣಕ್ಕೇ ಬಳಸಬೇಕಿದ್ದರ ಬಗ್ಗೆ ಚರ್ಚೆ ನಡೆಯಿತು. ಹೊರಗುತ್ತಿಗೆ ಆಧಾರದ 2 ಸಿಬಂದಿಗೆ ವೇತನ ಆಗದಿರುವುದು ಚರ್ಚೆಗೆ ಬಂತು.  ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

ಸದ್ದು ಮಾಡಿದ ಸುದಿನ ವರದಿಗಳು
-ಗಾಂಧಿ ಪಾರ್ಕ್‌ ಪಾಳುಬಿದ್ದದ್ದು, ಮಕ್ಕಳ ಕ್ರೀಡಾ ಉಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದರ ಬಗ್ಗೆ ಗಿರೀಶ್‌ ಜಿ.ಕೆ. ಗಮನ ಸೆಳೆದರು.
-ಫ್ಲೈಓವರ್‌  ಕೆಳಗೆ ಪಾರ್ಕಿಂಗ್‌, ಸುಂದರೀಕರಣ ಕುರಿತು ಪ್ರಕಟವಾದ ವರದಿಯನ್ನು ಚಂದ್ರಶೇಖರ ಖಾರ್ವಿ ಪ್ರಸ್ತಾವಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅನೇಕ ಬಾರಿ ಪತ್ರ ಬರೆದಿದ್ದು ಫ್ಲೈಓವರ್‌  ಕೆಳಗೆ ಪಾರ್ಕಿಂಗ್‌ಗೆ ಅನುಮತಿ ನೀಡಿಲ್ಲ, ಪ್ರಾಧಿಕಾರದವರನ್ನು ಕರೆಸಿ ಮಾತಾಡಬೇಕು ಎಂದರು. ಪ್ರಾಧಿಕಾರದವರನ್ನು ಕರೆಸಲು ನಿರ್ಣಯಿಸಲಾಯಿತು.
-ಯುಜಿಡಿ ಕಾಮಗಾರಿ ಅಪೂರ್ಣವಾಗಲು ಅಧಿಕಾರಿಗಳೂ ಕಾರಣ. ಭೂಮಂಜೂರಾತಿ ಆಗಿದ್ದರೂ ಕಡತ ಇನ್ನೂ ಎಸಿ ಕಚೇರಿಯ ಸಿಬಂದಿಯೊಬ್ಬರ ಬಳಿಯಿದೆ. ಪುರಸಭೆಯಿಂದಲೂ ಕೇಳುತ್ತಿಲ್ಲ. ಇಂತಹ ನಿರ್ಲಕ್ಷ್ಯ ಯಾಕೆ? ಎಂದು ಪ್ರಶ್ನಿಸಲಾಯಿತು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು.
-ತಾ.ಪಂ. ಬಳಿ ಇರುವ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸ್ಥಳಾವಕಾಶ ಕಡಿಮೆಯಿದ್ದು, ಸಭಾಭವನ ರೀತಿ ಮಾಡು ಮಾಡಲು 4.15 ಲಕ್ಷ ರೂ. ಬೇಕಿದೆ. 1 ಲಕ್ಷ ರೂ. ವಿಧಾನಪರಿಷತ್‌ ಸದಸ್ಯರಿಂದ ದೊರೆತಿದೆ. ಉಳಿಕೆ ಹಣ ಪುರಸಭೆ ಅಂಗವಿಕಲರಿಗಾಗಿ ಕಾಯ್ದಿರಿಸಿದ ಶೇ.5ರ ಅನುದಾನದಲ್ಲಿ ನೀಡುವ ಬಗ್ಗೆ ಚರ್ಚೆ ನಡೆಯಿತು.

ಟಾಪ್ ನ್ಯೂಸ್

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Naxaliam-End

Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!

Naxal-encounter-Vikram-1

Naxal Encounter: ಬಂಧಿತ ಸುರೇಶ್‌ ಅಂಗಡಿ ಮಾಹಿತಿಯಂತೆ ʼಆಪರೇಷನ್‌ ವಿಕ್ರಂ ಗೌಡʼ

Pranav-mohanthi

Naxal Encounter: ನಕ್ಸಲ್‌ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ

ANF-Police

Naxal: ವಿಕ್ರಂ ಗೌಡನ ಸುಳಿವು ಎಪ್ರಿಲ್‌ನಲ್ಲೇ ಸಿಕ್ಕಿತ್ತು: ಡಿಜಿಪಿ ಪ್ರಣವ್‌ ಮೊಹಂತಿ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!

BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.