Kundapura: ಕುಂದೇಶ್ವರ ಲಕ್ಷ ದೀಪೋತ್ಸವ ಸಂಭ್ರಮ
ಕುಂದಾಪುರದೊಡೆಯನ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿ
Team Udayavani, Dec 1, 2024, 12:53 PM IST
ಕುಂದಾಪುರ: ಇಲ್ಲಿನ ಪುರದೊಡೆಯ ಕುಂದೇಶ್ವರ ದೇವರ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವವು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಕಾರ್ತಿಕ ಬಹುಳ ಅಮಾವಾಸ್ಯೆಯ ದಿನವಾದ ಶನಿವಾರ ಬೆಳಗ್ಗೆ ಶ್ರೀ ಕುಂದೇಶ್ವರ ದೇವರ ಸನ್ನಿಧಿ ಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಶತರುದ್ರಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು.
ಭಜನ ಕಾರ್ಯಕ್ರಮ
ಸೂರ್ಯೋದಯದಿಂದ ಸೂರ್ಯಾಸ್ತ ಮಾನದವರೆಗೆ ಕುಂದಾಪುರ ತಾಲೂಕಿನ ಭಜನ ಮಂಡಳಿಗಳ ಒಕ್ಕೂಟದವರಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ನಡೆಯಿತು.
ಸಹಸ್ರಾರು ಭಕ್ತರು ಭಾಗಿ
ಕುಂದಾಪುರದ ಅಧಿದೇವತೆ ಶ್ರೀ ಕುಂದೇಶ್ವರ ದೇವರ ದೀಪೋತ್ಸವಕ್ಕೆ ಊರ- ಪರವೂರ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿಯೂ ಸಾವಿರಾರು ಮಂದಿ ಭಾಗಿಯಾಗಿ, ಪ್ರಸಾದ ಸ್ವೀಕರಿಸಿದರು. ಕುಂದಾಪುರದ ಶಾಸ್ತಿÅ ಸರ್ಕಲ್‌ನಿಂದ ಆರಂಭಗೊಂಡು ಹಳೆಯ ಬಸ್ ನಿಲ್ದಾಣದವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲೂ ವಿವಿಧ ಮಳಿಗೆಗಳನ್ನು ಹಾಕಲಾಗಿದ್ದು, ಭಕ್ತರು ಖರೀದಿಯಲ್ಲಿಯೂ ತೊಡಗಿದ್ದರು. ವಾರಾಂತ್ಯದ ದಿನವೇ ಈ ಬಾರಿ ದೀಪೋತ್ಸವ ಬಂದಿದ್ದರಿಂದ ಜನದಟ್ಟಣೆ ಇನ್ನಷ್ಟು ಹೆಚ್ಚಿತ್ತು.
ಸಂಜೆ ಶ್ರೀ ಕುಂದೇಶ್ವರ ದೇವರ ಸನ್ನಿ ಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಲಕ್ಷ ದೀಪೋತ್ಸವ, ಪುಷ್ಪಕ ರಥದಲ್ಲಿ ಶ್ರೀ ದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ, ಕೆರೆದೀಪ ನೆರವೇರಿತು.
ದೀಪೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೂ ದೇವಸ್ಥಾನವನ್ನು ವಿಶೇಷವಾಗಿ ಹೂವಿನಿಂದ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನೃತ್ಯ ವಿದುಷಿ ಪ್ರವಿತಾ ಅಶೋಕ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು. ಇನ್ನು ನಗರದ ಪ್ರಮುಖ ಕೇಂದ್ರಗಳಲ್ಲಿ ಭಕ್ತ ಜನರ ಸಾಮೂಹಿಕ ಪ್ರಯತ್ನದಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ರಿಕ್ಷಾ ಚಾಲಕರಿಂದ ಪುರಸಭೆ ಸಮೀಪ ಧರ್ಮಸ್ಥಳ ಮೇಳದ ಯಕ್ಷಗಾನ, ಹೊಸ ಬಸ್ ಸ್ಟಾಂಡ್ ಸಮೀಪ ರಿಕ್ಷಾ ಚಾಲಕರ ಸಂಘದಿಂದ ವಿದ್ಯಾರ್ಥಿವೇತನ, ವಿಶೇಷ ಚೇತನರಿಗೆ ಸಹಾಯಧನ ವಿತರಣೆ, ವಿಜಯ ಕುಮಾರ್ ಕೊಡಯಾಲಬೈಲ್ ಅವರ ನಾಟಕ ದೈವರಾಜ ಬಬ್ಬುಸ್ವಾಮಿ ಪ್ರದರ್ಶನಗೊಂಡಿತು. ಹೂವಿನ ವ್ಯಾಪಾರಿಗಳ ಸಂಘದಿಂದ ಜೂನಿಯರ್ ಕಾಲೇಜು ಆವರಣದಲ್ಲಿ ಸಂಗೀತ ರಸಮಂಜರಿ ನೋಡುಗರನ್ನು ರಂಜಿಸಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶೋಭಾ ಎಸ್. ಶೆಟ್ಟಿ, ತಂತ್ರಿಗಳು, ಅರ್ಚಕ ವೃಂದ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬಂದಿ, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಬಾಲರಾಮ ಆಕರ್ಷಣೆ
ಕುಂದೇಶ್ವರ ಫ್ರೆಂಡ್ಸ್ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಹೂವಿನಿಂದ ನಿರ್ಮಿಸಲಾದ ಕಲಾಕೃತಿ ದೀಪೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಈ ಬಾರಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಸುಮಾರು 75 ಸಾವಿರ ರೂ.ಗೂ ಅಧಿಕ ಮೌಲ್ಯದ ವಿವಿಧ ಹೂವುಗಳಿಂದ ರಚಿಸಲಾಗಿತ್ತು. ದೀಪೋತ್ಸವಕ್ಕೆ ಬಂದ ಭಕ್ತರು ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿರುವುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.