Kundapura: ಕೋಡಿ ಬೀಚ್‌ಗೆ ಇಳಿದ ಮೂವರ ಪೈಕಿ ಇಬ್ಬರು ಸಹೋದರರು ನೀರುಪಾಲು
ಮತ್ತೊಬ್ಬನ ರಕ್ಷಿಸಿದ ಸ್ಥಳೀಯರು
Team Udayavani, Dec 7, 2024, 7:18 PM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕೋಡಿಯ ಕಡಲ ಕಿನಾರೆಗಿಳಿದ ಮೂವರ ಸಹೋದರರ ಪೈಕಿ ಇಬ್ಬರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಶನಿವಾರ ಸಂಭವಿಸಿದೆ.
ಅಂಪಾರು ಮೂಡುಬಗೆಯ ನಿವಾಸಿ ದಾಮೋದರ ಪ್ರಭು ಹಾಗೂ ಚಿತ್ರಕಲಾ ಪ್ರಭು ದಂಪತಿಯ ಪುತ್ರರಾದ ಧನರಾಜ್ (23) ಹಾಗೂ ದರ್ಶನ್ (18) ಸಾವನ್ನಪ್ಪಿದವರು. ಇನ್ನೋರ್ವ ಪುತ್ರ ಧನುಷ್ (20) ಎಂಬಾತನನ್ನು ಸ್ಥಳೀಯರು ರಕ್ಷಿಸಿ, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿರುವು ದಾಗಿ ತಿಳಿದು ಬಂದಿದೆ.
ಘಟನೆ ವಿವರ
ಶನಿವಾರ ರಜಾ ದಿನವಾಗಿದ್ದರಿಂದ ಸಹೋದರರು ಮನೆಯವರೊಂದಿಗೆ ಕೋಡಿ ಬೀಚ್‌ಗೆ ಬಂದಿದ್ದರು. ಈ ವೇಳೆ ಕಡಲಿನ ನೀರಿನಲ್ಲಿ ಆಡುತ್ತಿದ್ದಾಗ ಆಕಸ್ಮಿಕ ವಾಗಿ ಅಲೆಗಳ ಅಬ್ಬರಕ್ಕೆ ಸಹೋದರರು ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಧನುಷ್‌ನನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಧನರಾಜ್‌ನನ್ನು ಕೂಡ ನೀರಿನಿಂದ ಮೇಲೆತ್ತಿದರಾದರೂ ಆತ ಸಾವನ್ನಪ್ಪಿದ್ದ. ನೀರುಪಾಲಾಗಿದ್ದ ಕಿರಿಯ ದರ್ಶನ್‌ನ ಶವ ಸ್ವಲ್ಪ ಹೊತ್ತಿನ ಬಳಿಕ ಸನಿಹದಲ್ಲೇ ಪತ್ತೆಯಾಯಿತು.
ಯುವಕರ ತಂದೆ ದಾಮೋದರ ಪ್ರಭು ರಿಕ್ಷಾ ಚಾಲಕರಾಗಿದ್ದು, ತಾಯಿ ಚಿತ್ರಕಲಾ ಅವರು ಮನೆಯಲ್ಲೇ ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ಇವರು ಮೂವರು ಪುತ್ರರನ್ನು ಚೆನ್ನಾಗಿ ಓದಿಸುವ ಕನಸು ಕಂಡಿದ್ದರು. ಹಿರಿಯ ಪುತ್ರ ಧನರಾಜ್ ಅವರು ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪ್ರಸ್ತುತ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಧನುಷ್ ಸುರತ್ಕಲ್ ಎನ್ ಐಟಿಕೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಕಿರಿಯ ಪುತ್ರ ದರ್ಶನ್ ಕುಂದಾಪುರದ ಜೂನಿಯರ್‌ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ.
ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಎನ್., ಎಸ್‌ಐ ಪುಷ್ಪಾ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಸಮಾಜ ಸೇವಕ ಅಶೋಕ್ ಪೂಜಾರಿ ಕೋಡಿ ಹಾಗೂ ಸ್ಥಳೀಯರು ಸಹಕರಿಸಿದರು.
ಅಲೆಗಳ ವಿಚಿತ್ರ ಏರಿಳಿತ
ಕೆಲವು ದಿನಗಳಿಂದ ಫೈಂಜಾಲ್ ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಅಲೆಗಳ ಏರಿಳಿತ ಸಾಮಾನ್ಯವಾಗಿಲ್ಲ ಎಂದು ಮೀನು ಗಾರಿಕೆಗೆ ತೆರಳಿದ ಮೀನುಗಾರರು ತಿಳಿಸಿದ್ದು, ಕೋಡಿ ದುರಂತಕ್ಕೂ ಇದು ಕಾರಣ ಆಗಿರಬಹುದು ಎನ್ನ ಲಾಗುತ್ತಿದೆ. ಆದ್ದರಿಂದ ಬೀಚ್‌ನಲ್ಲಿ ನೀರಿಗೆ ಇಳಿಯುವವರು ತುಂಬಾ ಎಚ್ಚರಿಕೆಯಿಂದ ಇರುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.