![Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ](https://www.udayavani.com/wp-content/uploads/2024/12/Krishna-Byre-Gowda-415x269.jpg)
ಚಾಲಕನ ನಿರ್ಲಕ್ಷ್ಯದ ಚಾಲನೆ… ಡಾಬಾಕ್ಕೆ ನುಗ್ಗಿದ ಟಿಪ್ಪರ್: ಗ್ರಾಹಕ ಗಂಭೀರ
Team Udayavani, Feb 21, 2023, 7:35 AM IST
![ಚಾಲಕನ ನಿರ್ಲಕ್ಷ್ಯದ ಚಾಲನೆ… ಡಾಬಾಕ್ಕೆ ನುಗ್ಗಿದ ಟಿಪ್ಪರ್: ಗ್ರಾಹಕ ಗಂಭೀರ](https://www.udayavani.com/wp-content/uploads/2023/02/lorry-1-620x400.jpg)
ಕುಂದಾಪುರ: ಟಿಪ್ಪರ್ ಡಾಬಾಕ್ಕೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರಿಗೆ ಗಂಭೀರವಾಗಿ ಗಾಯವಾದ ಘಟನೆ ಮಾವಿನಕಟ್ಟೆ ಕ್ರಾಸ್ ಬಳಿ ಸೋಮವಾರ ನಡೆದಿದೆ.
ಮಾವಿನಕಟ್ಟೆಯ ಸರ್ಕಲ್ ಬಳಿಯಿದ್ದ ಮಹಮ್ಮದ್ ಹನೀಫ್ ಮಾಲಕತ್ವದ ಸ್ವೀಕಾರ್ ಫ್ಯಾಮಿಲಿ ಡಾಬಾದೊಳಗೆ ಕುಂದಾಪುರದಿಂದ ಗುಲ್ವಾಡಿಯತ್ತ ಆವೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಏಕಾಏಕಿ ನುಗ್ಗಿದೆ. ಈ ವೇಳೆ ಡಾಬಾದಲ್ಲಿದ್ದ ಹನೀಫ್ ಹಾಗೂ ಅವರ ಮಗ ನಿಜಾಮುದ್ದೀನ್ ಪಾರಾಗಿದ್ದು, ಗ್ರಾಹಕ ಅಬಿದ್ದಿನ್ ಅವರಿಗೆ ಗಂಭೀರ ಗಾಯಗಳಾಗಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದಿಂದ ಹೊಟೇಲ್ ಒಳಗಿದ್ದ ಸಾಮಗ್ರಿಗಳು ಜಖಂ ಗೊಂಡಿದ್ದು 3 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಟಾಪ್ ನ್ಯೂಸ್
![Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ](https://www.udayavani.com/wp-content/uploads/2024/12/Krishna-Byre-Gowda-415x269.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.