Kundapura: 43 ಕೆರೆಗಳ ಬಳಿ ವೀರ ಯೋಧರ ಶಿಲಾಫಲಕ ಅನಾವರಣ

ಅಮೃತ ಸರೋವರಗಳ ಬಳಿ ಶಿಲಾಫಲಕ ಅನಾವರಣಗೊಳ್ಳಲಿದೆ.

Team Udayavani, Aug 15, 2023, 12:12 PM IST

Kundapura: 43 ಕೆರೆಗಳ ಬಳಿ ವೀರ ಯೋಧರ ಶಿಲಾಫಲಕ ಅನಾವರಣ

ಕುಂದಾಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರೋಪದ ಭಾಗವಾಗಿ “ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಗ್ರಾಮಗಳಲ್ಲಿ ಅಭಿವೃದ್ಧಿಪಡಿಸಿದ ಅಮೃತ ಸರೋವರಗಳ ಬಳಿ ವೀರ ಯೋಧರ ಸ್ಮರಣಾರ್ಥ ಶಿಲಾಫಲಕ ಸ್ಥಾಪನೆ ನಡೆಯುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಟ್ಟು 43 ಅಮೃತ ಸರೋವರಗಳ ಬಳಿ ಶಿಲಾಫಲಕ ಅನಾವರಣಗೊಳ್ಳಲಿದೆ.

ಕುಂದಾಪುರ ತಾಲೂಕಿನ 45 ಗ್ರಾ.ಪಂ. ಪೈಕಿ 20 ಗ್ರಾ.ಪಂ.ಗಳ 30 ಹಾಗೂ ಬೈಂದೂರು ತಾಲೂಕಿನ 15 ಗ್ರಾ.ಪಂ. ಪೈಕಿ 9 ಗ್ರಾ.ಪಂ.ಗಳ 13 ಅಮೃತ ಸರೋವರಗಳ ಬಳಿ ಈ ವೀರ ಯೋಧರ ಶಿಲಾಫಲಕ ಅನಾವರಣಗೊಳ್ಳಲಿದೆ. ಈ ಶಿಲಾಫಲಕದಲ್ಲಿ “ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು’ ಎನ್ನುವುದಾಗಿ ವೀರ ಯೋಧರಿಗೆ ಗೌರವ ಸೂಚಿಸುವ ಬರವಣಿಗೆಯಿದ್ದು, ಇದರೊಂದಿಗೆ ಬಸವಣ್ಣನವರ ವಚನ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶವಿದೆ.

ಅಮೃತ ಸರೋವರ ಇಲ್ಲದಿರುವ ಎಲ್ಲ ಗ್ರಾ.ಪಂ. ಗಳಲ್ಲಿಯೂ ಆಯಾಯ ಪಂಚಾಯತ್‌ ಕಟ್ಟಡ, ಶಾಲಾ ಕಟ್ಟಡಗಳ ಬಳಿ ಶಿಲಾಫಲಕ ರಚನೆಯಾಗಲಿದೆ. ಕೆಲವೆಡೆಗಳಲ್ಲಿ ಆ. 14ರಿಂದ ಆರಂಭಗೊಂಡಿದ್ದು, ಇನ್ನು ಕೆಲವು ಪಂಚಾಯತ್‌ಗಳಲ್ಲಿ ಸ್ವಾತಂತ್ರ್ಯ ದಿನವಾದ ಆ. 15ರಂದು ನಡೆಯಲಿದ್ದು, ಆ.30ರ ವೇಳೆಗೆ ಪೂರ್ಣಗೊಳ್ಳಲಿದೆ.

ಕುಂದಾಪುರ: 30 ಕೆರೆ
ಆಲೂರಿನ ತಾರಿಕೊಡ್ಲು ಕೆರೆ, ಕೊಪ್ಪಾಟೆ ಕೆರೆ, ಹೊರ್ನಿ ಕೆರೆ, ಕಾಳಾವರದ ಕಾಮಕೊಡ್ಲು ಮದಗ, ಬಸ್ರೂರಿನ ಹಲವರ ಕೆರೆ, ಬೀಜಾಡಿಯ ಬೆಳ್ಳಂಕಿಕೆರೆ, ನೀರಸ್ವಾಲೆ ಕೆರೆ, ಬೇಳೂರಿನ ಗುಮ್ಮಿಕೆರೆ, ಚಿತ್ತೂರಿನ ಜೆಡ್ಡುಕೆರೆ, ಹಕ್ಲಾಡಿಯ ಅಂಬಲಾಡಿ ಕೆರೆ, ಕರಣಿಕರ ಮನೆ ಕೆರೆ, ನೂಜಾಡಿ ಹೋರಿ ಹೊಂಡದ ಕೆರೆ, ಕುಂದಬಾರಂದಾಡಿಯ ಕುಂದದಗುಡ್ಡೆ ಕೆರೆ, ಯಡಾಡಿ- ಮತ್ಯಾಡಿ ಮದಗ, ಹೊಸಾಡಿನ ಅರಾಟೆ ತೋಪಿನಕೆರೆ, ಇಡೂರು ಕುಂಜ್ಞಾಡಿಯ ಕಮ್ಮಾರಕಲ್ಲು ಕೆರೆ, ಕಟ್‌ಬೆಲ್ತೂ ರಿನ ಹೊಯಿಗೆ ಕೆರೆ, ಮಸಿಕೊಡ್ಲು ಕೆರೆ, ಕಾವ್ರಾಡಿಯ ಕಾಶಿ ಕೆರೆ, ಬಸ್ರೂರಿನ ಕೊಳ್ಕಿ ಕೆರೆ, ಮೊಳಹಳ್ಳಿಯ ಕೋಡೆಕೆರೆ, ಸಿದ್ದಾಪುರದ ಬ್ರಹ್ಮನ ಕೆರೆ, ತಲ್ಲೂರಿನ ಹೊಸ್ಕೆರೆ, ತೆಕ್ಕಟ್ಟೆಯ ಕನ್ನುಕೆರೆ, ವಂಡ್ಸೆಯ ಕುಪ್ಪ ಗಾಣಿಗ ಕೆರೆ, ಆಜ್ರಿಯ ಹೊಳಂದೂರು ಕೆರೆ, ಕಂದಾವರ 2 ಕೆರೆ, ಗುಜ್ಜಾಡಿಯ ಕೆಸಿಡಿಸಿ ಬಳಿ ಹೊಸಕೆರೆ.

ಬೈಂದೂರು : 13 ಕೆರೆ
ಗೋಳಿಹೊಳೆಯ ಕಾಂಬ್ಳಿಕೆರೆ, ನಡುಮನೆ ಕೆರೆ, ಹೇರೂರಿನ ತುಂಬಿಕೆರೆ, ಅಣ್ಣೋಳೆಕೆರೆ, ಕಾಲ್ತೋ ಡಿನ ನೀರ್‌ಕೊಡ್ಲು ಮದಗ, ಮೆಟ್ಟಿನಹೊಳೆ ಕೆರೆ, ಕಿರಿಮಂಜೇಶ್ವರದ ಹಕ್ರೆಮಠ ಕೆರೆ, ನಾಡದ ಬೆಳ್ಳಾಡಿ ಮೇಲ್ಕೆರೆ ಕೆರೆ, ಬಡಾಕೆರೆಯ ಅಂಗನವಾಡಿ ಬಳಿಯ ಕೆರೆ, ಶಿರೂರಿನ ಕುಂಬ್ರಿಕೊಡ್ಲು ಕೆರೆ, ಮರವಂತೆಯ ಗೋರಿಕೆರೆ, ಜಡ್ಕಲ್‌- ಮುದೂರಿನ ಹಳಕಟ್ಟೆ ಕೆರೆ, ಉಪ್ಪುಂದದ ತೆಂಕ ಕೆರೆಗಳ ಬಳಿ ಈ ಶಿಲಾಫಲಕ ಅನಾವರಣಗೊಳ್ಳಲಿದೆ.

ವಿವಿಧ ಕಾರ್ಯಕ್ರಮ ಇದರೊಂದಿಗೆ ದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಾಣವಾಗಲಿರುವ “ಅಮೃತ್‌ ವಾಟಿಕಾ’ (ಅಮೃತ ಉದ್ಯಾನ) ಕ್ಕೆ ಪ್ರತೀ ಪಂಚಾಯತ್‌ನಿಂದ ಮಣ್ಣನ್ನು ಸಂಗ್ರಹಿಸಿ ದಿಲ್ಲಿಗೆ ಕಳುಹಿಸುವ ಕಾರ್ಯ, ಪ್ರತೀ ಪಂಚಾಯತ್‌ ಸೂಕ್ತವೆನಿಸಿದ 75 ಗಿಡ ನೆಟ್ಟು ಅಮೃತ ಉದ್ಯಾನವನ ನಿರ್ಮಿಸಬೇಕು. “ಪಂಚ ಪ್ರಾಣ ಪ್ರತಿಜ್ಞಾ’, “ವಸುಧಾ ವಂದನ್‌’ (ಭೂಮಿಗೆ ನಮಸ್ಕಾರ), “ವೀರೋಂಕಾ ವಂದನ್‌’ (ವೀರರಿಗೆ ವಂದನೆ) ಕಾರ್ಯವೂ ಪಂಚಾಯತ್‌ಗಳಲ್ಲಿ ನಡೆಯಲಿದೆ.

ಎಲ್ಲ ಗ್ರಾ.ಪಂ.ಗಳಲ್ಲಿ ಶಿಲಾಫಲಕ
ಒಟ್ಟು 43 ಕೆರೆಗಳ ಬಳಿ ಶಿಲಾಫಲಕ ಅನಾವರಣಗೊಳ್ಳಲಿದೆ. ಅಮೃತ ಸರೋವರ ಇಲ್ಲದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಿಯಾದರೂ ಒಂದು ಕಡೆ ಹಾಕುವಂತೆ ತಿಳಿಸಲಾಗಿದೆ. ಬಹುತೇಕ ಎಲ್ಲ ಕಡೆಗಳಲ್ಲಿ ಆ. 15 ರಂದು ಈ ಕಾರ್ಯ ಆಗಲಿದೆ. ಇದರೊಂದಿಗೆ ಎಲ್ಲ ಗ್ರಾ.ಪಂ.ಗಳಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಗ್ರಾಮಸ್ಥರಿಗೆ ಕಾನೂನು ಅರಿವು ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ.
ಭಾರತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ,
ಕುಂದಾಪುರ ಹಾಗೂ ಬೈಂದೂರು

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.