ಮೂಲ ಸೌಕರ್ಯಗಳ ಕೊರತೆ ನೀಗಿಸುವ ಕಾರ್ಯವಾಗಲಿ
Team Udayavani, Sep 15, 2021, 3:10 AM IST
ವಂಡ್ಸೆ: ವಂಡ್ಸೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ದಾಖಲೆ ಸಂಖ್ಯೆಯಲ್ಲಿ 55 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಇದು ವಿಶೇಷ ಮಾದರಿ ಶಾಲೆಯಾಗಿ ಮೂಡಿಬಂದಿದ್ದರೂ ಮೂಲ ಸೌಕರ್ಯಗಳ ಕೊರತೆ ಇದ್ದು, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಆ ಬಗ್ಗೆ ಆದ್ಯತೆ ನೀಡಿ, ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಬಲ ನೀಡಬೇಕಾಗಿದೆ.
ದಾಖಲೆಯ ದಾಖಲಾತಿ :
ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 400 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 1ನೇ ತರಗತಿಗೆ 55 ಮಕ್ಕಳು ಸೇರ್ಪಡೆಗೊಂಡಿದ್ದಾರೆ. 2ನೇ ತರಗತಿಯಲ್ಲಿ 48 ಮಕ್ಕಳು, 3ನೇ ತರಗತಿಯಲ್ಲಿ 47, 4ನೇ ತರಗತಿಯಲ್ಲಿ 49, 5ನೇ ತರಗತಿಯಲ್ಲಿ 46, 6ನೇ ತರಗತಿಯಲ್ಲಿ 54, 7ನೇ ತರಗತಿಯಲ್ಲಿ 23 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಶಿಕ್ಷಕರ ಕೊರತೆ :
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಈ ದಿಸೆಯಲ್ಲಿ ಶಿಕ್ಷಕರ ಕೊರತೆ ಎದುರಾಗಿರುವುದು ಒಂದು ರೀತಿಯ ಮುಜುಗರದ ವಾತಾವರಣ ಸೃಷ್ಟಿಸಿದೆ. ಈ ಶಾಲೆಯಲ್ಲಿ 6 ಶಿಕ್ಷಕರಿದ್ದು. ಮುಖ್ಯ ಶಿಕ್ಷಕರ ಸಹಿತ 4 ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಖಾಯಂ ಶಿಕ್ಷಕರ ನೇಮಕಾತಿ ಆಗದಿರುವುದು ವಿದ್ಯಾರ್ಥಿಗಳ ಶಿಕ್ಷಣಾಭ್ಯಾಸಕ್ಕೆ ತೊಡಕಾಗುವ ಸಾಧ್ಯತೆ ಇದೆ.
ಆಂಗ್ಲ ಮಾಧ್ಯಮ ಶಾಲೆ :
ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಪ್ರತ್ಯೇಕ ತರಗತಿ ಇದ್ದು, 6ನೇ ತರಗತಿ ತನಕ ಆಂಗ್ಲಮಾಧ್ಯಮ ಶಾಲೆ ನಡೆಯುತ್ತಿದ್ದು, ಮುಂದಿನ ವರ್ಷ 7ನೇ ತರಗತಿಯ ಆಂಗ್ಲಮಾಧ್ಯಮ ಶಾಲೆ ಆರಂಭಿಸುವ ಉದ್ದೇಶ ಹೊಂದಿದೆ.
ದಾನಿಗಳ ಸಹಾಯ :
ಅನೇಕ ದಾನಿಗಳು ಈಗಾಗಲೇ ಶಾಲಾಭಿವೃದ್ಧಿಗೆ ಸಹಾಯಧನ ಒದಗಿಸಿದ್ದು, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಕೂಡ ಮ್ಯಾಚಿಂಗ್ ಗ್ರ್ಯಾಂಟ್‌ನಲ್ಲಿ ಸವಲತ್ತು ಒದಗಿಸಿದೆ. ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಂಡ್ಸೆ ಮಾದರಿ ಹಿ.ಪ್ರಾ. ಶಾಲೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಚಿಂತನ ಮಂಥನ ನಡೆಯಬೇಕಾಗಿದೆ.
ಶಾಲೆಯ ಸ್ಥಿತಿಗತಿ:
6 ತರಗತಿ ಕೊಠಡಿಗಳು, ಒಂದು ಶಾಲಾ ವಾಹನ, ಕ್ರೀಡಾಂಗಣ, ಟ್ರ್ಯಾಕ್ ಮತ್ತು ಕೋರ್ಟ್, ಕೆ.ಜಿ. ತರಗತಿ ವಿದ್ಯಾರ್ಥಿಗಳಿಗೆ ಕಿಂಡರ್ ಗಾರ್ಡನ್, ಪೀಠೊಪಕರಣ, ಸಿ.ಸಿ. ಕೆಮರಾ, ಪ್ರೊಜೆಕ್ಟರ್, ಕಂಪ್ಯೂಟರ್, ಬಯಲುವೇದಿಕೆ, ಸ್ವಾಗತ ಗೋಪುರ, ಉದ್ಯಾನವನ, ಪ್ರಯೋಗಾಲಯ, ವಾಚನಾಲಯ, ಸಭಾಭವನಕ್ಕೆ ಕುರ್ಚಿಗಳು, ಖಾಲಿ ಸ್ಥಳಗಳಿಗೆ ಇಂಟರ್‌ಲಾಕ್ ಅಳವಡಿಕೆ, ಮಕ್ಕಳಿಗೆ ಪ್ಲೇಟ್ ಮತ್ತು ಲೋಟ ಅಗತ್ಯವಿದ್ದು, ಇಲಾಖೆ ಹಾಗೂ ವಿದ್ಯಾಭಿಮಾನಿಗಳು ಗಮನ ಹರಿಸಬೇಕಾಗಿದೆ.
ಗುಣಮಟ್ಟದ ಶಿಕ್ಷಣ:
ಗ್ರಾಮೀಣ ಪ್ರದೇಶದ ವಂಡ್ಸೆ ಶಾಲೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಇಲ್ಲಿ ಮೂಲ ಸೌಕರ್ಯ ಒದಗಿಸಲು ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. –ಉದಯಕುಮಾರ್ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ. ವಂಡ್ಸೆ
ಮಾದರಿ ಶಾಲೆ:
ವಂಡ್ಸೆ ಸರಕಾರಿ ಶಾಲೆಯು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ. ಈ ದಿಸೆಯಲ್ಲಿ ಶಾಲೆಯ ಅಭಿವೃದ್ಧಿಗೆ ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳು, ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಬೇಕು. –ಕೃಷ್ಣಮೂರ್ತಿ ಮಂಜ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.