Rain ಕೊರತೆ: ನೀರಿನ ಮಿತ ಬಳಕೆಗೆ ಸೂಚನೆ: ಜನವರಿ ತಿಂಗಳಿಗೂ ಮೊದಲೇ ಶಾಲೆಗಳಿಗೆ ಸುತ್ತೋಲೆ

ಅಂತರ್ಜಲ ಮತ್ತಷ್ಟು ಕುಸಿತ: ಎಚ್ಚೆತ್ತುಕೊಳ್ಳದಿದ್ದರೆ ಬೇಸಗೆಯಲ್ಲಿ ಸಂಕಷ್ಟ ; ನೀರಿನ ದುರ್ಬಳಕೆಗೆ ಬೇಕಿದೆ ಸ್ವಯಂ ಕಡಿವಾಣ

Team Udayavani, Dec 12, 2023, 6:45 AM IST

rRain ಕೊರತೆ: ನೀರಿನ ಮಿತ ಬಳಕೆಗೆ ಸೂಚನೆ: ಜನವರಿ ತಿಂಗಳಿಗೂ ಮೊದಲೇ ಶಾಲೆಗಳಿಗೆ ಸುತ್ತೋಲೆ

ಕುಂದಾಪುರ: ರಾಜ್ಯದೆಲ್ಲೆಡೆ ಈ ಬಾರಿ ಮಳೆ ಪ್ರಮಾಣ ಗಣನೀಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲೆಗಳಿಗೆ ನೀರಿನ ಮಿತ ಬಳಕೆ ಮಾಡುವಂತೆ ಈಗಾಗಲೇ ಅಂತರ್ಜಲ ನಿರ್ದೇಶನಾಲಯವು ಶಿಕ್ಷಣ ಇಲಾಖೆಯ ಮೂಲಕ ಸುತ್ತೋಲೆ ಕಳುಹಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೂ ಸದ್ಯವೇ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಂಬಂಧಿಸಿದ ಟಾಸ್ಕ್ಫೋರ್ಸ್‌ ಸಮಿತಿ ಸಭೆ ನಡೆದಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ. 25ರಷ್ಟು ಮಳೆ ಕಡಿಮೆಯಾಗಿದೆ. ಈ ವರ್ಷದ ನವೆಂಬರ್‌ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 6.94 ಮೀ.ನಷ್ಟಿದ್ದರೆ, ಕಳೆದ ವರ್ಷ ಇದೇ ವೇಳೆಗೆ 6.71 ಮೀ. ಇತ್ತು. ಅಂದರೆ 0.23 ಮೀ.ನಷ್ಟು ಇಳಿದಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿಗಿಂತ ಶೇ. 20ರಷ್ಟು ಕಡಿಮೆ ಮಳೆಯಾಗಿದ್ದರೂ ಅಂತರ್ಜಲ ಮಟ್ಟ ಕಳೆದ ವರ್ಷಕ್ಕಿಂತ ಈ ಬಾರಿ ಸುಧಾರಣೆಯಾಗಿದೆ. ಕಳೆದ ವರ್ಷ ಈ ವೇಳೆಗೆ 12.83 ಮೀ.ನಷ್ಟಿದ್ದರೆ, ಈಗ 9.29 ಮೀ. ಇದ್ದು, 3.54 ಮೀ. ಏರಿಕೆಯಾಗಿದೆ.

ಸುತ್ತೋಲೆಯಲ್ಲಿ ಏನಿದೆ?
ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವ ಶಾಲೆ, ಆಸ್ಪತ್ರೆ, ಸಭಾಭವನ, ಹೊಟೇಲ್‌ಗ‌ಳಿಗೆ ಮುಂಜಾಗ್ರತಾ ಕ್ರಮವಾಗಿ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯವು ಸಾಮಾನ್ಯವಾಗಿ ಜನವರಿಯ ಬಳಿಕ ಸುತ್ತೋಲೆ ಕಳುಹಿಸುತ್ತದೆ. ಆದರೆ ಈ ಬಾರಿ ಉಡುಪಿಯಲ್ಲಿ ಶೇ. 25ರಷ್ಟು ಮಳೆ ಕಡಿಮೆಯಾಗಿ ಅಂತರ್ಜಲ ಮಟ್ಟ ಶೇ. 25ರಷ್ಟು ಇಳಿದಿರುವ ಕಾರಣ ಈಗಲೇ ಸುತ್ತೋಲೆ ಕಳುಹಿಸಿದ್ದು, ಈಗಿನಿಂದಲೇ ಶಾಲೆಗಳಲ್ಲಿ ಮಕ್ಕಳು ಅವಶ್ಯ ಇರುವಷ್ಟೇ ನೀರನ್ನು ಬಳಸಬೇಕು, ಎಲ್ಲಿಯೂ ನೀರು ಮಲಿನ ಹಾಗೂ ಪೋಲಾಗದಂತೆ ಎಚ್ಚರ ವಹಿಸಬೇಕು. ಕೈ, ತಟ್ಟೆ ತೊಳೆದ ನೀರನ್ನು ಹೂದೋಟ, ತರಕಾರಿ ತೋಟಕ್ಕೆ ಬಳಸುವ ಮೂಲಕ ಸದ್ಬಳಕೆ ಮಾಡಿಬೇಕು ಎಂದು ತಿಳಿಸಿದೆ.

ಜನರು ಕೂಡ ಜಾಗೃತರಾಗಿ ಈಗಿನಿಂದಲೇ ನೀರಿನ ಹಿತ-ಮಿತ ಬಳಕೆಗೆ ಮುಂದಾಗುವಂತೆ ಅಂತರ್ಜಲ ಇಲಾಖೆ ಮನವಿ ಮಾಡಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಶೇ. 25ರಷ್ಟು ಮಳೆ ಕೊರತೆಯಾಗಿದೆ. ಸಾಮಾನ್ಯವಾಗಿ ಮುಂಗಾರಿನಲ್ಲಿ ಶೇ. 80-85ರಷ್ಟು ಹಾಗೂ ಹಿಂಗಾರಿನಲ್ಲಿ ಶೇ. 15ರಷ್ಟು ಮಳೆಯಾಗುತ್ತದೆ. ಆದರೆ ಈ ಬಾರಿ ಎರಡೂ ಹಂಗಾಮಿನಲ್ಲೂ ಮಳೆ ಕಡಿಮೆಯಾಗಿದೆ. ಇನ್ನು ಒಂದಷ್ಟು ಮಳೆ ಬಂದರೆ ಅನುಕೂಲವಾಗಲಿದೆ. ಇಲ್ಲವಾದರೆ ಸಮಸ್ಯೆಯಾಗಲಿದೆ. ಈಗಿನಿಂದಲೇ ಎಚ್ಚರ ವಹಿಸುವುದು ಅತ್ಯಂತ ಅವಶ್ಯ. ರೈತರು ಕೃಷಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ನೀರುಣಿಸಿದರೆ ಉತ್ತಮ.
– ಡಾ| ಎಂ. ದಿನಕರ ಶೆಟ್ಟಿ,
ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Rubber-Estate

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

kalla

Siddapura: ಅಂಪಾರು ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

manipal-marathon

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.