ಲಾಕ್‌ಡೌನ್ ಅವಧಿಯಲ್ಲಿ 10 ಲಕ್ಷ ರೂ. ಕೂಲಿ!
Team Udayavani, Jun 24, 2021, 5:20 AM IST
ಕುಂದಾಪುರ: ಲಾಕ್‌ಡೌನ್ ಅವಧಿಯಲ್ಲಿ ಎಲ್ಲರೂ ಕೆಲಸ ಇಲ್ಲ ಎಂದು ಕೈಕಟ್ಟಿ ಕೂತಿದ್ದರೆ ಸಿದ್ದಾಪುರ ಪಂಚಾಯತ್ ಎರಡು ತಿಂಗಳಲ್ಲಿ 10 ಲಕ್ಷ ರೂ.ಗಳ ಕೆಲಸ ನೀಡಿ ಕೂಲಿ ಪಾವತಿಸಿದೆ! ನರೇಗಾ ಯೋಜನೆಯಲ್ಲಿ ಕೆರೆ, ತೋಡಿನ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ, ನೀರು ಸಂಗ್ರಹಕ್ಕೆ ಚೊಕ್ಕದಾದ ವ್ಯವಸ್ಥೆ, ಗ್ರಾಮದ ಜನರಿಗೆ ಭರ್ತಿ ಸಂಬಳವೂ ದೊರೆಯುವಂತೆ ಮಾಡಿದೆ.
ಕೆಲಸ:
ಲಾಕ್‌ಡೌನ್ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಪಂಚಾಯತ್‌ನ ಉತ್ಸಾಹಿ ತಂಡ ಅದಕ್ಕಾಗಿ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿ ನರೇಗಾದಡಿ ಸಿದ್ದಾಪುರ ಕಾಶಿಕಲ್ಲು ಕೆರೆಯಿಂದ ಜಡ್ಡಿನಬೈಲು ಮತ್ತು ಛತ್ರಿ ಕೆರೆಯಿಂದ ಹಾರ್ದಳ್ಳಿಯವರೆಗಿನ ತೋಡಿನ ಹೂಳೆತ್ತಲಾಯಿತು. ಕೂಡ್ಗಿ ಯಲ್ಲಿ ಮದಗದಿಂದ ಹೂಳೆತ್ತುವ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಕಾಶಿಕಲ್ಲು ಕೆರೆಯಿಂದ ಹರಿವ ತೋಡಿನ ಹೂಳೆತ್ತಲು 22 ಜನರು 286 ಮಾನವ ದಿನಗಳ ಕೆಲಸ ಮಾಡಿದ್ದಾರೆ.
ಛತ್ರಿಕೆರೆಯಿಂದ ತೋಡು ಹೂಳೆತ್ತಲು 26 ಜನ 335 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಕೋಡ್ಗಿ ಮದಗ ಹೂಳೆತ್ತಲು 18 ಜನ 500 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಒಟ್ಟು 66 ಜನರಿಗೆ 1,121 ಮಾನವ ದಿನಗಳ ಕೆಲಸ ನೀಡಿದಂತಾಗಿದೆ.
ಸ್ವಚ್ಛತೆಗೆ ಆದ್ಯತೆ:
ಗ್ರಾ.ಪಂ. ವ್ಯಾಪ್ತಿಯಲ್ಲಿ 40 ಬಚ್ಚಲು ಗುಂಡಿ ನಿರ್ಮಾಣ ಮಾಡಲಾಗಿದ್ದು, 200 ಬಚ್ಚಲು ಗುಂಡಿ ನಿರ್ಮಿಸುವ ಮೂಲಕ ಗ್ರಾಮ ಸ್ವತ್ಛತೆ ಗುರಿ ಹೊಂದಲಾಗಿದೆ. ಜಲಶಕ್ತಿ ಅಭಿಯಾನದ ಮೂಲಕ ಕೆರೆ ಹೂಳೆತ್ತುವುದು, ತೋಡು ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ, ಸಮುದಾಯ ಅರಣ್ಯ ನಿರ್ಮಾಣ ಮೊದಲಾದವುಗಳ ಗುರಿ ಹೊಂದಲಾಗಿದೆ. ಈ ವರ್ಷಕ್ಕೆ 1.4 ಕೋ.ರೂ.ಗಳ ಕಾಮಗಾರಿ ಮಾಡುವ ಇರಾದೆ ಹೊಂದಲಾಗಿದೆ ಎನ್ನುತ್ತಾರೆ ಗ್ರಾಮಸ್ಥ ಶ್ರೀಕಾಂತ್ ನಾಯಕ್ ಸಿದ್ದಾಪುರ.
2019-20ರಲ್ಲಿ 4,751 ಮಾನವ ದಿನಗಳ ಕೆಲಸ ಆಗಿ 10 ಲಕ್ಷ ರೂ. ಕೂಲಿ ನೀಡಲಾಗಿತ್ತು. 2020-21ರಲ್ಲಿ 5,803 ಮಾನವ ದಿನಗಳ ಕೆಲಸ ಆಗಿ 14 ಲಕ್ಷ ರೂ. ಕೂಲಿ ನೀಡಲಾಗಿತ್ತು. ಈ ವರ್ಷ ಎರಡೇ ತಿಂಗಳಲ್ಲಿ 3,498 ಮಾನವ ದಿನಗಳ ಕೆಲಸ ಆಗಿ 10.23 ಲಕ್ಷ ರೂ. ಕೂಲಿ ನೀಡಲಾಗಿದೆ. 1.28 ಲಕ್ಷ ರೂ.ಗಳನ್ನು ಸಾಮಗ್ರಿಗೆ ವ್ಯಯಿಸಲಾಗಿದೆ.
ಊರ ಯುವಕರು ಸೇರಿ ಮದಗದ ಹೂಳೆತ್ತುವ ಕೆಲಸ ಮಾಡಿದರು. ನಮ್ಮ ಊರಿನ ಒಂದು ಮದಗ ಮಳೆಗಾಲದಲ್ಲಿ ನೀರು ತುಂಬಿ ನೀರಿಂಗಿಸುವ ಕಾರ್ಯಕ್ರಮದಲ್ಲಿ ನಮ್ಮನ್ನು ತೊಡಗಿಸಿಕೊಂಡ ಸಾರ್ಥಕತೆ ನಮಗಿದೆ. –ಶೇಖರ ಕುಲಾಲ್, ಗ್ರಾ. ಪಂ. ಅಧ್ಯಕ್ಷರು, ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.