ಶಿರೂರು ಟೋಲ್‌ಗೇಟ್ ಬಳಿ ವಿಶ್ರಾಂತಿಗೆ ನಿಂತಿದ್ದ ಲಾರಿಯಿಂದ 5 ಟಯರ್‌ಗಳು ಕಳವು
Team Udayavani, Sep 15, 2022, 7:52 PM IST
ಶಿರೂರು: ಶಿರೂರು ಟೋಲ್‌ಗೇಟ್ ಬಳಿ ರಾತ್ರಿ ವೇಳೆ ವಿಶ್ರಾಂತಿಗೆ ನಿಲ್ಲಿಸಿದ್ದ ಲಾರಿಯಿಂದ 5 ಟಯರ್ ಕಳವು ಮಾಡಿರುವ ಘಟನೆ ಶಿರೂರು ಟೋಲ್‌ಗೇಟ್ ಬಳಿ ನಡೆದಿದೆ.ಅಂಕೋಲಾ ಮೂಲದ ಲಾರಿಯೊಂದು ಮಂಗಳೂರಿಗೆ ತೆರಳುವ ವೇಳೆ ರಾತ್ರಿ ವಿಶ್ರಾಂತಿಗಾಗಿ ಟೋಲ್‌ಗೇಟ್ ಸಮೀಪ ನಿಲ್ಲಿಸಲಾಗಿತ್ತು.ಚಾಲಕ ನಿದ್ರೆಗೆ ಜಾರಿದ ವೇಳೆ ಕಳ್ಳರ ತಂಡವೊಂದು 5 ಟಯರ್‌ಗಳನ್ನು ಕದ್ದಿದ್ದಾರೆ.
ಅನಧೀಕೃತ ಅಂಗಡಿಗಳು,ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಮತ್ತು ಗಾಂಜಾ ವ್ಯವಹಾರ ಜಾಲ: ಶಿರೂರಿನ ಟೋಲ್‌ಗೇಟ್ ಬಳಿ ಸಾಲು ಸಾಲಾಗಿರುವ ಅನಧಿಕೃತ ಅಂಗಡಿಗಳಿಂದಾಗಿ ಕಳ್ಳತನ ಮತ್ತು ಗಾಂಜಾ ಪ್ರಕರಣ ಹೆಚ್ಚುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಹಗಲು ವೇಳೆ ಮತ್ತು ರಾತ್ರಿ 10 ಗಂಟೆಯ ವರೆಗೆ ಈ ಅಂಗಡಿಗಳು ತೆರೆದಿದ್ದರೆ ಸಮಸ್ಯೆಗಳಿಲ್ಲ. ಆದರೆ ಈಗೀಗ ಬೆಳಿಗ್ಗೆಯವರೆಗೆ ಬಾಗಿಲು ತೆರೆದಿರುವ ಪರಿಣಾಮ ಅನೇಕ ಕಳ್ಳತನ ಪ್ರಕರಣಗಳ ಪ್ರಮುಖ ಕೇಂದ್ರವಾಗಿದೆ.ವಲಸೆ ವ್ಯಕ್ತಿಗಳು ಮತ್ತು ಸೂಕ್ತ ದಾಖಲೆಗಳಿಲ್ಲದ ವ್ಯಕ್ತಿಗಳು ಅಂಗಡಿ ಮಾಲಿಕರಾಗಿರುವುದು ಮತ್ತು ಯಾವುದೇ ಸಿ.ಸಿ ಕ್ಯಾಮರಾ ಅಳವಡಿಸದಿರುವುದು ಕೂಡ ಇಂತಹ ಚಟುವಟಿಗೆ ಹೆಚ್ಚಲು ಕಾರಣವಾಗಿದೆ.ಪೊಲೀಸರು ಕಳೆದ ಒಂದು ತಿಂಗಳಲ್ಲಿ ಹತ್ತಕ್ಕೂ ಅಧಿಕ ಗಾಂಜಾ ಸೇವಿಸುತ್ತಿರುವವರು ಈ ಪರಿಸರದ ಸುತ್ತಮುತ್ತ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಮಾತ್ರವಲ್ಲದೆ ಆಕ್ರಮ ಮದ್ಯ ಮಾರಾಟ ಕೂಡ ನಡೆಯುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈಗಾಗಲೆ ಹಲವು ಬಾರಿ ಅನಧಿಕ್ರತ ಅಂಗಡಿಗಳನ್ನು ಹತ್ತು ಗಂಟೆಯ ಬಳಿಕ ಬಾಗಿಲು ತೆರೆಯಬಾರದೆಂದು ತಿಳಿಸಲಾಗಿದೆ.ಇವುಗಳಲ್ಲಿ ಅನಧಿಕ್ರತ ಚಟುವಟಿಕೆ ನಡೆಯುವ ಕುರಿತು ದೂರುಗಳು ಕೇಳಿಬಂದಿದೆ.ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿದೆ.ಹಲವು ಗಾಂಜಾ ವ್ಯಸನಿಗಳನ್ನು ಶಿರೂರು ಟೋಲ್ ಗೇಟ್ ಹಾಗೂ ಸುತ್ತಮುತ್ತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.ಸಣ್ಣಪುಟ್ಟ ಸರಣಿ ಕಳ್ಳತನ ನಡೆಸುವವರು ಮತ್ತು ಪೊಲೀಸ್ ಚಲನವಲನ ಮಾಹಿತಿದಾರರು ಈ ಅಂಗಡಿಗಳನ್ನು ಅವಲಂಬಿಸುವ ಮಾಹಿತಿ ಇದೆ.ಇವುಗಳ ಕುರಿತು ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳಲಿದೆ.ಲಾರಿ ಟಯರ್ ಕಳ್ಳತನ ಪ್ರಕರಣ ಬೇಧಿಸಲು ಪೊಲೀಸ್ ತಂಡ ಕಾರ್ಯಪ್ರವತ್ತರಾಗಿದೆ.ಕಾನೂನು ಬಾಹಿರ ಚಟುವಟಿಕೆಗೆ ನಿರ್ಧಾಕ್ಷಿಣ್ಯವಾಗಿ ಕಡಿವಾಣ ಹಾಕಲಾಗುವುದು.-ಸಂತೋಷ ಕಾಯ್ಕಿಣಿ.ವ್ರತ್ತ ನಿರೀಕ್ಷಕರು ಬೈಂದೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.