ಸೋಲಿನ ಹತಾಶೆಯಲ್ಲಿ ಬಿಜೆಪಿಯಿಂದ ಕೀಳುಮಟ್ಟದ ರಾಜಕೀಯ:ಕೆ.ಗೋಪಾಲ ಪೂಜಾರಿ

ಬೈಂದೂರು ಕ್ಷೇತ್ರದಲ್ಲಿ ಬಲ ಕಳೆದುಕೊಂಡ ಬಿಜೆಪಿ

Team Udayavani, May 4, 2023, 6:40 PM IST

1-sadsad

ಬೈಂದೂರು:ಬೈಂದೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಕಾವೇರಿದೆ.ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಪ್ರಯೋಗ ಸಂಘಪರಿವಾರ ಹಾಗೂ ಮೂಲ ಬಿಜೆಪಿಗರ ನಡುವೆ ಪ್ರತ್ಯೇಕ ಗುಂಪುಮಾಡಿದೆ.ಮಾತ್ರವಲ್ಲದೆ ಹಿರಿಯ ನಾಯಕರು,ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸು ಕಳೆದುಕೊಂಡಿದ್ದು ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಬಲ ಕಳೆದುಕೊಂಡಿದೆ.ಸೋಲಿನ ಭೀತಿಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಪ್ರಚಾರ ಕೈಗೊಂಡಿದ್ದು ಕಾಂಗ್ರೆಸ್ ಭರ್ಜರಿ ಟಾಂಗ್‌ ನೀಡಿದೆ.

ಪ್ರಚಾರ ಸಭೆಯಲ್ಲಿ ಮಾತನಾಡಿದ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಸೋಲಿನ ಹತಾಶೆಯಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ತೊಡಗಿದೆ.ಇಲ್ಲಿನ ಮತದಾರರು ಬುದ್ದಿವಂತರಿದ್ದಾರೆ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಬೆಲೆ ಕೊಡಲಾರರು.ಈ ಚುನಾವಣೆಯಲ್ಲಿ ಕಾಂಗ್ರೇಸ್‌ ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿಯಿಂದ ವ್ಯಾಪಕ ಸುಳ್ಳು ಪ್ರಚಾರ, ಟಾಂಗ್‌ ಕೊಟ್ಟ ಕಾಂಗ್ರೆಸ್
ಸಾಮಾಜಿಕ ಜಾಲತಾಣಗಳಲ್ಲಿ ಬೈಂದೂರು ಬಿಜೆಪಿ ಸುಳ್ಳು ಸುದ್ದಿ ಹರಡಿ ಪೇಚಿಗೆ ಸಿಲುಕಿದೆ.ಇತ್ತೀಚೆಗೆ ಸೇರ್ಪಡೆಗೊಂಡ ಜಿ.ಪಂ ಮಾಜಿ ಸದಸ್ಯ ಶಂಕರ ಪೂಜಾರಿ ಹಾಗೂ ಬಿಜೆಪಿ ಅಭ್ಯರ್ಥಿ ಖಾಸಗಿ ಕಾರ್ಯಕ್ರಮದಲ್ಲಿ ಆಕಸ್ಮಿಕ ಭೇಟಿಯಾಗಿದ್ದರು.ಈ ಸಂದರ್ಭದಲ್ಲಿ ಸಹಜವಾಗಿ ಕುಶಲೋಪರಿ ವಿಚಾರಿಸಿದ್ದಾರೆ.ಈ ಚಿತ್ರವನ್ನು ಬಳಸಿಕೊಂಡ ಬಿಜೆಪಿ ಐಟಿ ಸೆಲ್‌ ಕಾಂಗ್ರೆಸ್ ನ ಶಂಕರ ಪೂಜಾರಿ ಮತ್ತೆ ಬಿಜೆಪಿಗೆ ವಾಪಾಸ್ಸಾಗಿದ್ದಾರೆ ಎಂದು ಸುದ್ದಿ ಹರಡಿದ್ದರು.ಈ ಬಗ್ಗೆ ಪ್ರತಿಕ್ರಯಿಸಿದ ಶಂಕರ ಪೂಜಾರಿ ಬಿಜೆಪಿಗೆ ಅಭಿವೃದ್ದಿ ಕಾರ್ಯಗಳಿಗಿಂತ ಸುಳ್ಳು ಸುದ್ದಿ ಮೂಲಕ ಜನರನ್ನು ದಾರಿ ತಪ್ಪಿಸುವುದು ಅಭ್ಯಾಸವಾಗಿ ಬಿಟ್ಟಿದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೇಸ್‌ ಅಭ್ಯರ್ಥಿ ಕೆ.ಗೋಪಾಲ ಪೂಜಾರಿಯಂತಹ ಪ್ರಾಮಾಣಿಕ ಹಾಗೂ ನಿಷ್ಟಾವಂತ ವ್ಯಕ್ತಿ ಇಡೀ ರಾಜ್ಯದಲ್ಲಿ ಕಾಣಸಿಗುವುದಿಲ್ಲ. ಕ್ಷೇತ್ರದ ಮೂಲೆ ಮೂಲೆಯಲ್ಲಿ ಅವರ ವ್ಯಕ್ತಿತ್ವ ತಿಳಿದಿದೆ.ಹೀಗಾಗಿ ಬಿಜೆಪಿ ಎಷ್ಟೆ ಅಪಪ್ರಚಾರ ಮಾಡಿದರು ಸಹ ಕ್ಷೇತ್ರದ ಮತದಾರರು ಕೆ.ಗೋಪಾಲ ಪೂಜಾರಿಯವರಂತಹ ಪ್ರಾಮಾಣಿಕ ವ್ಯಕ್ತಿಯನ್ನು ಕೈಬಿಡಲಾರರು ಎಂದರು.

ಬಿ.ಎಮ್‌.ಸುಕುಮಾರ ಶೆಟ್ಟಿಯವರನ್ನು ಕಡೆಗಣಿಸಿದೆಯಾ ಬಿಜೆಪಿ
ಬಿಜೆಪಿ ಹಿರಿಯ ಮುಖಂಡರು ಹಾಗೂ ಬೈಂದೂರು ಬಿಜೆಪಿ ಸುಕುಮಾರ ಶೆಟ್ಟಿಯವರನ್ನು ಕಡೆಗಣಿಸಿದೆ ಹಾಗೂ ಮಾಜಿ ಶಾಸಕರ ಸಹಕಾರವಿಲ್ಲದೆ ಬಿಜೆಪಿ ಗೆದ್ದು ತೋರಿಸಬೇಕು ಎಂದು ಪಣತೊಟ್ಟಂತಿದೆ.ಸುಕುಮಾರ ಶೆಟ್ಟಿಯಂತಹ ಹಿರಿಯ ಪ್ರಾಮಾಣಿಕ ಮುಖಂಡರನ್ನು ಹೊರಗಿಟ್ಟು ಗೆಲ್ಲುವುದು ಬಿಜೆಪಿಗೆ ಕನಸಿನ ಮಾತು.ಮಾಜಿ ಶಾಸಕರು ಪ್ರಚಾರಕ್ಕೆ ಬಂದರೆ ಅವರಿಗೆ ಹಿನ್ನೆಡೆಯಾಗುತ್ತದೆ ಎನ್ನುವ ಮಾತು ಬಿಜೆಪಿಯವರಿಂದಲೆ ಕೇಳಿಬರುತ್ತಿದೆ.ಮತ್ತು ಬಿಜೆಪಿಗರ ನಡುವೆ ಪರಸ್ಪರ ನಂಬಿಕೆ ಇಲ್ಲದಂತೆ ಗುಂಪುಗಳಾಗಿದೆ.ಸುಕುಮಾರ ಶೆಟ್ಟಿ ಯವರ ಕಡೆಗಣನೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.

ವಾರ್ಡ್‌ ಪ್ರಚಾರದಲ್ಲಿ ಜನಜಂಗುಳಿ
ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಾರ್ಡ್‌ ಮಟ್ಟದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದೆ.ಪ್ರತಿ ವಾರ್ಡ್‌ನಲ್ಲೂ ಪ್ರಚಾರದಲ್ಲಿ ಕಾರ್ಯಕರ್ತರು ತಂಡೋಪತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿಯವರು ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಧರ್ಮದ ನೆನಪಾಗುತ್ತದೆ.ಕಾಂಗ್ರೆಸ್ ಅವಧಿಯಲ್ಲಿ ಕೆ.ಗೋಪಾಲ ಪೂಜಾರಿ ಯವರ ಅವಧಿಯಲ್ಲಿ ಸಾವಿರಾರು ದೈವ,ದೇವಸ್ಥಾನಗಳ ಜೀರ್ಣೋದ್ದಾರ ನಡೆಸಿದ್ದಾರೆ. ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತೇವೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ದಾಖಲೆಯ ಗೆಲುವು ಸಾಧಿಸುತ್ತದೆ
ಬೈಂದೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮದನ್‌ ಕುಮಾರ್‌ ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಕೆ.ಗೋಪಾಲ ಪೂಜಾರಿ ಪರ ಅಪಾರ ಒಲವು ಹೊಂದಿದೆ.ಅವರ ಕೊನೆಯ ಚುನಾವಣೆಯಾದ ಕಾರಣ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾದ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಯುವಕರು ಹಾಗೂ ಹಿರಿಯರು ಪಣತೊಟ್ಟಿದ್ದಾರೆ.ಬಿಜೆಪಿಯ ಯಾವುದೇ ಸುಳ್ಳುಗಳು ಕೂಡ ಪೂಜಾರಿಯವರ ಪ್ರಾಮಾಣಿಕ ವ್ಯಕ್ತಿತ್ವದ ಮುಂದೆ ಪರಿಣಾಮ ಬೀರದು. ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.

ಬಿಜೆಪಿಗೆ ಬಿಸಿ ತುಪ್ಪವಾದ ಕಾಂಗ್ರೇಸ್‌ ಸೋಶಿಯಲ್‌ ಮೀಡಿಯಾ
ಕಳೆದ ಚುನಾವಣೆಯಲ್ಲಿ ಬೈಂದೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ವಿರುದ್ದ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಸುಳ್ಳು ಪ್ರಚಾರ ಮೂಲಕ ಬಿಜೆಪಿ ರಾಜಕೀಯ ಲಾಭ ಮಾಡಿಕೊಂಡಿದೆ.ಮಾತ್ರವಲ್ಲದೆ ಸುಳ್ಳು ಪ್ರಚಾರ ಬಿಜೆಪಿ ಅಸ್ತ್ರ ಕೂಡ ಆಗಿದೆ.ಆದರೆ ಈ ಬಾರಿ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಶಿಯಲ್‌ ಮೀಡಿಯಾ ತಂಡ ಬಿಜೆಪಿ ಸುಳ್ಳುಗಳನ್ನು ಬೆತ್ತಲಾಗಿಸಿದೆ. ಮತ್ತು ಭರ್ಜರಿ ಟಾಂಗ್‌ ನೀಡುವ ಮೂಲಕ ಜನಸಾಮಾನ್ಯರಿಗೆ ವಾಸ್ತವತೆ ತಿಳಿಸಿದೆ.ಹೀಗಾಗಿ ಬಿಜೆಪಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.ಕಾಂಗ್ರೆಸ್ ಪಕ್ಷದ ಜನಮೆಚ್ಚಿದ ವ್ಯಕ್ತಿ ಗೋಪಾಲ ಪೂಜಾರಿ ಯವರನ್ನು ಎದುರಿಸಲು ಬಿಜೆಪಿ ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರುಗಳನ್ನು ಕರೆ ತಂದಿದೆ.ಆದರೆ ಬೈಂದೂರಿನ ಮತದಾರರು ಇಲ್ಲಿನ ಮಣ್ಣಿನ ಮಗನಿಗೆ ಆಶೀರ್ವಾದ ಮಾಡುವ ಮೂಲಕ ಕೆ.ಗೋಪಾಲ ಪೂಜಾರಿ ಯವರ ಸಜ್ಜನ ವ್ಯಕ್ತಿ ಪರ ನಾವಿದ್ದೇವೆ ಎಂದು ಸಾಬೀತುಪಡಿಸುತ್ತಾರೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಹೇಳಿದ್ದಾರೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.