Madamakki: ವರ್ಷ ಕಳೆದರೂ ಪೂರ್ಣಗೊಳ್ಳದ ಟವರ್
ಹಳ್ಳ ಹಿಡಿದ ಹಂಜ, ಬೆಪ್ಡೆ ಟವರ್ ನಿರ್ಮಾಣ ಕಾಮಗಾರಿ; ಕರೆಗಾಗಿ ಈಗಲೂ ಕಿ.ಮೀ.ಗಟ್ಟಲೆ ಅಲೆದಾಟ; ಗ್ರಾಮಸ್ಥರಿಗೆ ತಪ್ಪದ ಗೋಳು
Team Udayavani, Nov 11, 2024, 5:04 PM IST
ಗೋಳಿಯಂಗಡಿ: ನೆಟ್ವರ್ಕ್ ವಂಚಿತ ಮಡಾಮಕ್ಕಿ ಗ್ರಾಮದ ಹಂಜ ಹಾಗೂ ಬೆಪ್ಡೆ ಭಾಗದ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಒಂದೂವರೆ ವರ್ಷದ ಹಿಂದೆ ಬಿಸ್ಸೆನ್ನೆಎಲ್ ಟವರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಈ ಕಾಮಗಾರಿಯು ಈಗ ಹಳ್ಳ ಹಿಡಿದಿದ್ದು, ವರ್ಷವಾದರೂ ಶೇ. 10ರಷ್ಟು ಸಹ ಕಾಮಗಾರಿ ಪೂರ್ಣಗೊಂಡಿಲ್ಲ.
ಅಂತೂ ಬಹು ವರ್ಷಗಳ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಬಹುದು ಅನ್ನುವ ಖುಷಿಯಲ್ಲಿದ್ದ ಮಡಾಮಕ್ಕಿಯ ಹಳ್ಳಿಗಾಡಿನ ಪ್ರದೇಶವಾದ ಹಂಜ, ಬೆಪ್ಡೆ ಭಾಗದ ಗ್ರಾಮಸ್ಥರ ಗೋಳು ಮಾತ್ರ ಇನ್ನೂ ತಪ್ಪಿಲ್ಲ. ಈಗಲೂ ಒಂದು ಕರೆಗಾಗಿ ಕಿ.ಮೀ. ಗಟ್ಟಲೆ ದೂರ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.
ಎರಡು ಟವರ್ ನಿರ್ಮಾಣ ಕಾಮಗಾರಿ
ಹಂಜ ಹಾಗೂ ಬೆಪ್ಡೆ ಭಾಗಕ್ಕೆ ನೆಟ್ವರ್ಕ್ ಸಂಪರ್ಕ ಕಲ್ಪಿಸುವ ಸಲುವಾಗಿ ಟವರ್ ಬೇಕು ಅನ್ನುವ ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಬಿಎಸ್ಸೆನ್ನೆಲ್ ಇಲಾಖೆ ಸ್ಪಂದಿಸಿದ್ದು, ಎರಡು ಟವರ್ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಅದರಂತೆ ಒಂದೂವರೆ ವರ್ಷದ ಹಿಂದೆಯೇ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು. ಆರಂಭದಲ್ಲಿ ತುಸು ವೇಗದಲ್ಲಿ ಸಾಗಿದಂತೆ ಕಂಡ ಕಾಮಗಾರಿ, ಅಷ್ಟೇ ಬೇಗ ನಿಂತಿದ್ದು ಮಾತ್ರ ಇಲ್ಲಿನ ಜನರ ದೌರ್ಭಾಗ್ಯವೇ ಸರಿ. ಟವರನ್ನು ತಂದು ನಿಲ್ಲಿಸಿರುವುದೊಂದೇ ದೊಡ್ಡ ಸಾಧನೆಯಾಗಿದೆ. ಅದನ್ನು ತಂದು ನಿಲ್ಲಿಸಿ, ವರ್ಷವಾದರೂ ಇನ್ನೂ ಅದರಿಂದ ಮುಂದಿನ ಕಾಮಗಾರಿ ಮಾತ್ರ ಆಗಿಲ್ಲ. ಇದಕ್ಕೆ ಯಾವುದೇ ಸಂಪರ್ಕ ಕಲ್ಪಿಸಿಲ್ಲ. ಅಗತ್ಯವಿರುವ ವಿದ್ಯುತ್ ಸಂಪರ್ಕ, ಜನರೇಟರ್ ವ್ಯವಸ್ಥೆ, ಸೋಲಾರ್ ಇದು ಯಾವುದೂ ಸಹ ಇನ್ನೂ ಆಗಿಲ್ಲ. ಎರಡೂ ಟವರ್‌ಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಯಾವಾಗ ಪೂರ್ಣಗೊಳ್ಳುವುದು ಅನ್ನುವ ಚಿಂತೆ ಇಲ್ಲಿನ ಜನರದ್ದಾಗಿದೆ.
ಒಂದು ಕರೆಗೆ ಆರೇಳು ಕಿ.ಮೀ. ಸಂಚಾರ
ಮಡಾಮಕ್ಕಿ ಗ್ರಾಮದ ಹಂಜ, ಕಾರಿಮಲೆ, ಎಡ್ಮಲೆ ಭಾಗದಲ್ಲಿ ಯಾವುದೇ ನೆಟ್ವರ್ಕ್ ಸೌಲಭ್ಯವಿಲ್ಲ. ಇಲ್ಲಿನ ಜನ ತುರ್ತು ಕರೆ ಮಾಡಬೇಕಾದರೂ ಸುಮಾರು 6-7 ಕಿ.ಮೀ. ದೂರದ ಮಡಾಮಕ್ಕಿಗೆ ಬರಬೇಕು. ಇಲ್ಲಿ ಸುಮಾರು 200 ಕ್ಕೂ ಮಿಕ್ಕಿ ಮನೆಗಳಿವೆ. ಇನ್ನು ಬೆಪ್ಡೆ ಭಾಗದಲ್ಲೂ ಯಾವುದೇ ನೆಟ್ವರ್ಕ್ ಸಂಪರ್ಕವಿಲ್ಲ. ಇಲ್ಲಿಯೂ 200 ಕ್ಕೂ ಮಿಕ್ಕಿ ಮನೆಗಳಿವೆ. ಇವರು ಸಹ ನೆಟ್ವರ್ಕ್ ಸಿಗಬೇಕಾದರೆ 3-4 ಕಿ.ಮೀ. ದೂರದ ಮಾಂಡಿ ಮೂರುಕೈಗೆ ಬರಬೇಕು. ಯಾರಿಗಾದರೂ ಅನಾರೋಗ್ಯ ಉಂಟಾದರೆ, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನ ಕರೆಸಲು ಇಲ್ಲಿನ ಜನ ಈಗಲೂ ಪ್ರಯಾಸಪಡುತ್ತಿದ್ದಾರೆ. ಒಂದೆಡೆ ನೆಟ್ವರ್ಕ್ ಇಲ್ಲದಿದ್ದರೆ, ಇನ್ನೊಂದೆಡೆ ದುರ್ಗಮವಾದ ರಸ್ತೆ. ಕಾಡಂಚಿನಲ್ಲಿ ನೆಲೆಸಿರುವ ಇಲ್ಲಿನ ಜನ ಕನಿಷ್ಠ ಮೂಲಭೂತ ಸೌಲಭ್ಯವೂ ಸಿಗದೇ, ನಿತ್ಯ ಸಂಕಷ್ಟಪಡುತ್ತಿರುವುದು ಮಾತ್ರ ಆಳುವ ವರ್ಗಕ್ಕೆ ಗೋಚರಿಸದಿರುವುದು ದುರಂತ.
ಸಂಬಂಧಪಟ್ಟವರಿಗೆ ಸೂಚನೆ
ಇಲ್ಲಿನ ಟವರ್‌ಗಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಬಿಎಸ್ಸೆಎನ್ನೆಲ್ ಅಧಿಕಾರಿಗಳ ಬಳಿ, ಮಾತನಾಡಲಾಗುವುದು. ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಸೂಚನೆ ನೀಡಲಾಗುವುದು. ಆದಷ್ಟು ಬೇಗ ಅಲ್ಲಿನ ಜನರಿಗೆ ನೆಟ್ವರ್ಕ್ ಸೌಕರ್ಯ ಸಿಗುವಂತೆ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡಲಾಗುವುದು.
– ಕಿರಣ್ ಕುಮಾರ್ ಕೊಡ್ಗಿ, ಶಾಸಕರು
ತುರ್ತಾಗಿ ಕಾಮಗಾರಿ ಪೂರೈಸಿ
ಹಂಜ, ಕಾರಿಮನೆ, ಎಡ್ಮಲೆ, ಬೆಪ್ಡೆ ಭಾಗದ ದಶಕಗಳ ಬೇಡಿಕೆಯಾದ ನೆಟ್ವರ್ಕ್ ಟವರ್ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಒಂದು ವರ್ಷದಿಂದ ಕಾಮಗಾರಿ ನನೆಗುದ್ದಿಗೆ ಬಿದ್ದಿದೆ. ಟವರ್‌ಗೆ ಸೋಲಾರ್, ವಿದ್ಯುತ್, ಜನರೇಟರ್ ಅಳವಡಿಕೆ, ಕಬ್ಬಿಣದ ಪಟ್ಟಿಗಳಿಗೆ ಬಣ್ಣ ಹಚ್ಚುವಿಕೆ ಸಹಿತ ಆಗಿದ್ದಕ್ಕಿಂತ ಹೆಚ್ಚಿನ ಕಾಮಗಾರಿ ಬಾಕಿಯಿದೆ. ಈ ಬಗ್ಗೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಈ ಕಡೆಗೆ ತಲೆ ಹಾಕಿಯೂ ನೋಡುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಿ. ಜನರಿಗೆ ಪ್ರಯೋಜನ ಸಿಗಲಿ.
– ದಯಾನಂದ ಪೂಜಾರಿ, ಮಡಾಮಕ್ಕಿ ಗ್ರಾ.ಪಂ.ಸದಸ್ಯ
ಇನ್ನೆಷ್ಟು ಸಮಯ ಬೇಕು?
ನಕ್ಸಲ್ ಪೀಡಿತ ಮಡಾಮಕ್ಕಿ ಗ್ರಾಮದ ಈ ಹಂಜ, ಎಡ್ಮಲೆ, ಕಾರಿಮಲೆ, ಬೆಪ್ಡೆ ಭಾಗದ ಜನರು ಟವರ್ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೊರೆಯಿಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಟವರ್ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕು ಅನ್ನುವುದಾಗಿ ಜನ ಕೇಳುತ್ತಿದ್ದಾರೆ. ಇನ್ನಾದರೂ ಟವರ್ ನಿರ್ಮಾಣ ಕಾಮಗಾರಿಗೆ ವೇಗ ಸಿಗಲಿ, ಆ ಮೂಲಕ ಇಲ್ಲಿನ ಬಹುಕಾಲದ ನೆಟ್ವರ್ಕ್ ಸಮಸ್ಯೆ ಬಗೆಹರಿಯಲಿ ಅನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.