ಮಂದಾರ್ತಿ ಮೇಳ: 23 ವರ್ಷಗಳ ಸೇವೆಯಾಟ ನೋಂದಣಿ
ಮೇ 24: ತಿರುಗಾಟಕ್ಕೆ ಕೊನೆ | ಜೂ.14ರಿಂದ ಮಳೆಗಾಲದ ಪ್ರದರ್ಶನ
Team Udayavani, May 22, 2019, 6:02 AM IST
ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ 24ರಂದು ಪ್ರಸ್ತುತ ಸಾಲಿನ ಮೇಳಗಳ ತಿರುಗಾಟ ಕೊನೆಗೊಳ್ಳಲಿದೆ. ಜೂ.14ರಿಂದ ಮಳೆಗಾಲದ ಪ್ರದರ್ಶನ ಆರಂಭವಾಗಲಿದೆ.
ಮುಂದಿನ 23 ವರ್ಷಗಳ ತನಕ ಯಕ್ಷಗಾನ ಸೇವೆ ನೋಂದಣಿ ಯಾಗಿರುವುದು ಕ್ಷೇತ್ರದ ವೈಶಿಷ್ಟ .
ಯಕ್ಷಗಾನವು ಮಂದಾರ್ತಿ ಅಮ್ಮ ನವರಿಗೆ ಸಲ್ಲಿಸುವ ಪ್ರಸಿದ್ಧ ಸೇವೆ. ಕ್ಷೇತ್ರದ ಯಕ್ಷಗಾನ ಮೇಳಕ್ಕೆ ಸುಮಾರು 600 ವರ್ಷಗಳ ಪರಂಪರೆಯಿದೆ. ದೇವಸ್ಥಾನದ 5 ಮೇಳಗಳು ಕರಾವಳಿ ಹಾಗೂ ಮಲೆನಾಡಿನಲ್ಲಿ ತಿರುಗಾಟ ನಡೆಸಿ ಹರಕೆಯನ್ನು ಪೂರೈಸುತ್ತಿವೆ.
18,000 ಆಟ ನೋಂದಣಿ !
ಈಗಾಗಲೇ 2041-42ನೇ ಸಾಲಿನ ತನಕ ಸುಮಾರು 18 ಸಾವಿರದಷ್ಟು ಸೇವೆ
ಯಾಟಗಳು ಮುಂಚಿತವಾಗಿ ನೊಂದಾ ಯಿಸಲ್ಪಟ್ಟಿವೆ. ಮಳೆಗಾಲದ ಪ್ರದರ್ಶನ ಹೊರತು ಪಡಿಸಿ 5 ಮೇಳಗಳಿಂದ ವರ್ಷದಲ್ಲಿ 900 ಆಟ ಜರಗಲಿದೆ.
ಮಳೆಗಾಲದ 84 ದಿನಗಳಸೇವೆ ಆಟಕ್ಕೆ ಈಗಾಗಲೇ 698 ಆಟ ಬುಕ್ ಆಗಿದೆ.
ಸಂಪ್ರದಾಯ
ಚಾಲನೆಯಂದು ಬಾರಾಳಿ ಶ್ರೀ ಗಣಪತಿ ದೇಗುಲದಲ್ಲಿ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಗಣಹೋಮ ನಡೆದು, ರಾತ್ರಿ ಮಂದಾರ್ತಿ ದೇಗುಲದ ಎದುರು ಐದೂ ಮೇಳಗಳ ಪ್ರಥಮ ದೇವರ ಸೇವೆಯಾಟ ನಡೆಯುತ್ತದೆ. ಮೇಳ ಹೊರಡುವ ದಿನ ಪ್ರಥಮ ವೇಷ ಹಾಕುವಾಗ ಬಾರಾಳಿ ಗಣಪತಿ ದೇವಾಲಯದಲ್ಲಿ ಗೆಜ್ಜೆಧರಿಸಿ, ವೇಷ ಹಾಕಿಕೊಂಡು ಬಂದು, ಬಳಿಕ ಮಂದಾರ್ತಿಯಲ್ಲಿ ದೇವರ ಸೇವೆ ಆಟ ಆಡುವ ಪದ್ಧತಿ ಈಗಲೂ ಇದೆ. ತಿರುಗಾಟದ ಕೊನೆಯಲ್ಲಿ ಕ್ಷೇತ್ರದಲ್ಲಿ ಮತ್ತೆ ಸೇವೆಯಾಟ ಸಂಪನ್ನಗೊಳ್ಳಲಿದೆ.
ಮೇಳದ ಹಿನ್ನೆಲೆ
ಮೊದಲು ಮೇಳವನ್ನು ಏಲಂ ಮೂಲಕ ನಡೆಸುತ್ತಿದ್ದರೆ, 1987-88 ರಿಂದ ದೇವಸ್ಥಾನದ ಮೂಲಕವೇ ನಡೆಸಲು ಆಡಳಿತ ಮಂಡಳಿ ನಿಧìರಿಸಿದ್ದು 2ನೇ ಮೇಳವನ್ನು 92-93, 3ನೇ ಮೇಳವನ್ನು 2000-01, 4ನೇ ಮೇಳವನ್ನು 2001-02ಮತ್ತು 2010-11 ರಲ್ಲಿ 5ನೇ ಮೇಳವನ್ನು ಪ್ರಾರಂಭಿಸಲಾಯಿತು.
ಹರಕೆ ವಿವರ
ಪ್ರತಿವರ್ಷ 28 ಕಟ್ಟುಕಟ್ಟಳೆ ಆಟ, 166 ಖಾಯಂ ಹಾಗೂ ಉಳಿದವು ಹರಕೆ
ಸೇವೆಯಾಟಗಳಾಗಿವೆ. ಭಕ್ತರು ಹರಕೆ ಆಟವನ್ನು ತಾವು ಇಚ್ಛಿಸಿದ ಸ್ಥಳದಲ್ಲಿ ಆಡಿಸಲು ಅನುಕೂಲವಾಗುವಂತೆ ಐದು ಬಸ್‌ಗಳನ್ನು ಕ್ಷೇತ್ರವು ಹೊಂದಿದೆ.
ಪೂರ್ಣ ತಂಡ
ಒಂದು ಮೇಳದಲ್ಲಿ ಹಿಮ್ಮೇಳ, ಮುಮ್ಮೇಳ ಮತ್ತು ಹೊರೆಯಾಳುಗಳ ನ್ನೊಳಗೊಂಡು ಸುಮಾರು 42 ಜನರು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 5 ಮೇಳಗಳಿಂದ 210 ಜನ ದುಡಿಯುತ್ತಿದ್ದಾರೆ.
ಎರಡು ಮೇಳಗಳಿಂದ ಕಾಲಮಿತಿ ಯಕ್ಷಗಾನ
ಭಕ್ತರ ಬೇಡಿಕೆ ಶೀಘ್ರ ಪೂರೈಸುವ ನಿಟ್ಟಿನಲ್ಲಿ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಎರಡು ಮೇಳಗಳಿಂದ ಕಾಲಮಿತಿ ಯಕ್ಷಗಾನ ನಡೆಯುತ್ತಿದೆ. ಈ ವರ್ಷ ಕಾಯ್ದಿರಿಸಿದವರಿಗೆ ಮೇ 27ರಂದು ವೀಳ್ಯ ಶಾಸ್ತ್ರ ಜರಗಲಿದೆ. ಜೂ.14ರಂದು ಪ್ರಥಮ ಸೇವೆ ಆಟದೊಂದಿಗೆ ಮಳೆಗಾಲದ ಪ್ರದರ್ಶನ ಪ್ರಾರಂಭಗೊಳ್ಳಲಿದೆ.
-ಪ್ರವೀಣ್ ಬಿ. ನಾಯಕ್, ಕಾರ್ಯನಿರ್ವಹಣಾಧಿಕಾರಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.