ಜ. 14ರಿಂದ ಮಾರಣಕಟ್ಟೆ – ಹಾಲಾಡಿ ಬಸ್ ಆರಂಭ ; ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ
ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ.
Team Udayavani, Jan 14, 2023, 11:10 AM IST
ಕುಂದಾಪುರ: ಮಾರಣಕಟ್ಟೆ ಕಡೆಯಿಂದ ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಬಹು ಬೇಡಿಕೆಯ ಮಾರಣಕಟ್ಟೆ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಜ. 14ರಂದು ಆರಂಭ ಗೊಳ್ಳಲಿದೆ. ಇದರಿಂದ ಈ ಭಾಗದ ನೂರಾರು ಮಂದಿ ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಮಾರಣಕಟ್ಟೆ ಹಾಗೂ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಶಂಕರನಾರಾಯಣ ಕಾಲೇಜಿಗೆ ತೆರಳಲು ಬಸ್ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಾಸಕ ಸುಕುಮಾರ್ ಶೆಟ್ಟರಲ್ಲಿ ಬಸ್‌ಆರಂಭಿಸಲು ಆಗ್ರಹಿಸಿದ್ದರು. ಈ ಕುರಿತಂತೆ ಕಾರ್ಯಪ್ರವೃತ್ತರಾದ ಶಾಸಕರು, ಕೆಎಸ್‌ಆರ್‌ಟಿಸಿ ಡಿಸಿ, ಪ್ರಾದೇಶಿಕ ಸಾರಿಗೆ ಆಯುಕ್ತ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತಾಗಿ ಬಸ್ ಆರಂಭಿಸಲು ಸೂಚಿಸಿದರು. ಅದರಂತೆ ಜ. 14ರಿಂದ ಮಾರಣಕಟ್ಟೆ- ಶಂಕರ ನಾರಾಯಣ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದ್ದು ದಿನ ಗಳಲ್ಲಿ 4 ಟ್ರಿಪ್ ಗಳಲ್ಲಿ ಬಸ್ ಸಂಚರಿಸಲಿದೆ.
ಮಾರ್ಗ ಯಾವುದು?
ಮಾರಣಕಟ್ಟೆಯಿಂದ ಬೆಳಗ್ಗೆ 8ಕ್ಕೆ ಬಸ್ ಹೊರಟು, ವಂಡ್ಸೆ, ನೆಂಪು, ನೇರಳಕಟ್ಟೆ, ಅಂಪಾರು, ಕ್ರೋಢಬೈಲೂರು, ಶಂಕರನಾರಾಯಣ ಆಗಿ ಹಾಲಾಡಿಯವರೆಗೆ ಸಂಚರಿಸಲಿದೆ. ಮಧ್ಯದ ಅವಧಿಯಲ್ಲಿ ಒಂದೆರಡು ಟ್ರಿಪ್ ಹಾಗೆಯೇ ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ. ಇದರಿಂದ ಕ್ರೋಢ ಬೈಲೂರಿನ ಮಕ್ಕಳು, ಸಾರ್ವಜನಿಕರಿಗೂ ಅನುಕೂಲವಾದಂತಾಗಿದೆ.
ಇಲ್ಲಿಗೆ ಯಾವುದೇ ಬಸ್ ಸಂಚಾರವಿರಲಿಲ್ಲ. ಇದರಿಂದ ಶಂಕರ ನಾರಾಯಣ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ 170 ಮಂದಿ ಮಕ್ಕಳು, ಮದರ್ ಥೆರೆಸಾ ಶಿಕ್ಷಣ ಸಂಸ್ಥೆಗೆ ತೆರಳುವ 90 ಮಂದಿ ಮಕ್ಕಳು, ಇನ್ನುಳಿದ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಮಕ್ಕಳಿಗೂ ಅನುಕೂಲವಾಗಲಿದೆ. ಕೆಲವರು ನಿಗದಿತ ಸಮಯಕ್ಕೆ ಬಸ್ ಇಲ್ಲದೆ ಕುಂದಾಪುರಕ್ಕೆ ಹೋಗಿ ಶಂಕರನಾರಾಯಣಕ್ಕೆ, ಮತ್ತೆ ಕೆಲವರು ಸಿದ್ದಾಪುರಕ್ಕೆ ತೆರಳಿ ಶಂಕರನಾರಾಯಣಕ್ಕೆ ಸುತ್ತು ಬಳಸಿ ಬರುತ್ತಿದ್ದರು.
ಸುದಿನ ವರದಿ
ಕುಂದಾಪುರದ ಗ್ರಾಮೀಣ ಭಾಗದ ವಿವಿಧೆಡೆಗಳಿಗೆ ಬಸ್ ಸಂಪರ್ಕ ಇಲ್ಲದಿರುವುದ ರಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ, ವಂಡ್ಸೆ – ನೆಂಪು – ನೇರಳಕಟ್ಟೆ – ಅಂಪಾರು – ಶಂಕರನಾರಾಯಣ ಮಾರ್ಗದಲ್ಲಿ ಬಸ್ ಆರಂಭಿಸುವಂತೆ “ಉದಯವಾಣಿ ಸುದಿನ’ವು ನಿರಂತರ ವರದಿ ಪ್ರಕಟಿಸಿತ್ತು.
ಶೀಘ್ರ ಆರಂಭ
ನೂರಾರು ಮಂದಿ ಮಕ್ಕಳು ನನ್ನಲ್ಲಿಗೆ ಬಂದು ಮನವಿ ಸಲ್ಲಿಸಿ, ಅವರ ಸಮಸ್ಯೆ ಹೇಳಿಕೊಂಡಿದ್ದು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಅಗುತ್ತಿದ್ದುದನ್ನು ಮನಗಂಡು, ತತ್ ಕ್ಷಣ ಅಧಿಕಾರಿಗಳ ಸಭೆ ಕರೆದು, ಕೂಡಲೇ ಬಸ್ ಆರಂಭಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೆ. ಜ. 14ರಂದು ಬಸ್ ಸಂಚಾರ ಆರಂಭವಾಗಲಿದೆ. ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಇದು ಅನುಕೂಲ ಆಗಲಿದೆ.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅರಣ್ಯ ದಳದ ಸಿಬಂದಿಗೆ ಹಲ್ಲೆ: ಮತ್ತೋರ್ವನ ಬಂಧನ
Siddapura: ವಿದ್ಯುತ್ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು
Siddapura: ಪಾದಚಾರಿಗೆ ಪಿಕಪ್ ವಾಹನ ಢಿಕ್ಕಿ; ಗಂಭೀರ
Kundapura: ಬಸ್‌ನಲ್ಲೇ ಹೃದಯಾಘಾತ; ಸಮಯಪ್ರಜ್ಞೆ ಮೆರೆದ ಬಸ್ ಚಾಲಕ, ಸಾರ್ವಜನಿಕರ ಮೆಚ್ಚುಗೆ
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.