ವಿಧಾನ ಕದನ; ಕರಾವಳಿ ಕಣ-ಬೈಂದೂರು -ಗರಿಷ್ಠ ,ಕಾಪು- ಕನಿಷ್ಠ ಮತದಾರರು
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ 5,589 ಮಂದಿ ಇದ್ದಾರೆ.
Team Udayavani, Apr 3, 2023, 6:33 PM IST
ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 10,29,678 ಮಂದಿ ಮತದಾರಿದ್ದಾರೆ. ಈ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಮತದಾರರಿದ್ದರೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮಂದಿ ಮತದಾರರಿದ್ದಾರೆ.
ಕಾಪು: ಕನಿಷ್ಠ ಪುರುಷ ಮತದಾರರು ಪುರುಷ ಮತದಾರರ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,13,758 ಮಂದಿ ಇದ್ದರೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿರುವವರ ಸಂಖ್ಯೆ 89,444 ಮಾತ್ರ. ಮಹಿಳಾ ಮತದಾರರಲ್ಲಿಯೂ ಬೈಂದೂರು ಕ್ಷೇತ್ರದಲ್ಲಿ 1,18,962 ಮಂದಿ ಮತದಾರರಿದ್ದಾರೆ. ಕನಿಷ್ಠ ಮತದಾರರಿರುವುದು ಕಾಪು ಕ್ಷೇತ್ರದಲ್ಲಿ 97,233.
ಕಾರ್ಕಳ: ಶೂನ್ಯ ತೃತೀಯ ಲಿಂಗಿಗಳು
ಜಿಲ್ಲೆಯಲ್ಲಿ ಒಟ್ಟು 10 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. ಗರಿಷ್ಠ ಮತದಾರರಿರುವುದು ಕಾಪು ಕ್ಷೇತ್ರದಲ್ಲಿ 4, ಕಾರ್ಕಳ ಕ್ಷೇತ್ರದಲ್ಲಿ ಯಾರೂ ಇಲ್ಲ, ಬೈಂದೂರು 3, ಕುಂದಾಪುರ 2, ಉಡುಪಿಯಲ್ಲಿ 1 ಮಂದಿ ಮತಹಾಕಲು ಅರ್ಹತೆ ಪಡೆದಿದ್ದಾರೆ.
ಉಡುಪಿ: 80 ವರ್ಷ ಮೇಲ್ಪಟ್ಟವರು ಗರಿಷ್ಠ
80 ವರ್ಷ ಮೇಲ್ಪಟ್ಟ ಮತದಾರರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 7,827 ಮಂದಿ ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ 5,589 ಮಂದಿ ಇದ್ದಾರೆ.
1,111 ಮತಗಟ್ಟೆ
ಜಿಲ್ಲೆಯಲ್ಲಿ ಒಟ್ಟು 1,111 ಕಡೆಗಳಲ್ಲಿ ಮತಗಟ್ಟೆ ಇದ್ದು ಬೈಂದೂರಿನಲ್ಲಿ 246, ಉಡುಪಿ 226, ಕುಂದಾಪುರ 222, ಕಾರ್ಕಳ 209, ಕಾಪು 208 ಮತಗಟ್ಟೆಗಳಿವೆ.
17,927 ಯುವ ಮತದಾರರು: ಕಾರ್ಕಳದಲ್ಲಿ ಗರಿಷ್ಠ
ಉಡುಪಿ ಜಿಲ್ಲೆಯಲ್ಲಿ ಒಟ್ಟು 17,927 ಮಂದಿ ಯುವ ಮತದಾರರು ಇದುವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 3,981 ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದರೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 3,277 ಮಂದಿ ಯುವ ಮತದಾರರಿದ್ದಾರೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ 3 ಸಾವಿರಕ್ಕೂ ಅಧಿಕ ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿರುವುದು ವಿಶೇಷವಾಗಿದೆ. ಎ.10ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.