ಉಡುಪಿ ಜಿಲ್ಲೆಯ ಬಿಸಿಯೂಟಕ್ಕೆ ಶಿವಮೊಗ್ಗ, ದ.ಕ. ಜಿಲ್ಲೆಯಿಂದ ಅಕ್ಕಿ
Team Udayavani, Feb 15, 2023, 6:30 AM IST
ಕುಂದಾಪುರ: ಉಡುಪಿ ಜಿಲ್ಲೆಯ ಶಾಲಾ ಮಕ್ಕಳ ಮುಂದಿನ ತಿಂಗಳ ಬಿಸಿಯೂಟಕ್ಕೆ ದ.ಕ. ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಅಕ್ಕಿ ತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿ. ಪಂ.ಸಿಇಒ ಎಚ್. ಪ್ರಸನ್ನ ತಿಳಿಸಿದ್ದಾರೆ.
ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಕ್ಕಿ ಕೊರತೆ ಸಾಧ್ಯತೆ? ಎಂದು “ಉದಯವಾಣಿ’ ಜ. 28ರಂದು ವರದಿ ಪ್ರಕಟಿಸಿತ್ತು. ಭಾರತ ಆಹಾರ ನಿಗಮ (ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ) ಗೋದಾಮಿನಿಂದ ಕರ್ನಾಟಕ ಆಹಾರ ನಿಗಮದ ಮೂಲಕ ಶಾಲೆಗಳಿಗೆ ಅಕ್ಕಿ, ಬೇಳೆ ಸರಬರಾಜು ಆಗುತ್ತದೆ. 4ನೇ ತ್ತೈಮಾಸಿಕ ಅವಧಿಯ (ಜನವರಿ-ಮಾರ್ಚ್) ಜನವರಿ ಮುಗಿಯುತ್ತ ಬಂದರೂ ಅವಶ್ಯವಿರುವ ಅಕ್ಕಿ ಇನ್ನೂ ಶಾಲೆಗೆ ತಲುಪಿಲ್ಲ. ಉಡುಪಿ ಜಿಲ್ಲೆಗೆ 1ರಿಂದ 5ನೇ ತರಗತಿ ವರೆಗೆ 290 ಮೆಟ್ರಿಕ್ ಟನ್ ಅಕ್ಕಿ, 6ರಿಂದ 8ನೇ ತರಗತಿಗೆ 235.5 ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆಯಾಗಿದೆ.
ಮಣಿಪಾಲದ ಪೆರಂಪಳ್ಳಿಯಲ್ಲಿ ಇರುವ ಆಹಾರ ನಿಗಮ ಗೋದಾಮಿನಲ್ಲಿ ಕಾಂಕ್ರಿಟ್ ಕಾಮಗಾರಿ ನಡೆದ ಕಾರಣ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದು, ಅಕ್ಕಿ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ಉದಯವಾಣಿ ಗಮನ ಸೆಳೆದಿತ್ತು. ಇದೀಗ ದ.ಕ. ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಅಕ್ಕಿ ತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಇದಕ್ಕಾಗಿ 5 ಲಕ್ಷ ರೂ. ಸಾಗಾಟ ವೆಚ್ಚ ಹೆಚ್ಚುವರಿಯಾಗಿ ಹೊರೆಯಾಗಲಿದೆ. ಪೂರ್ವಾಲೋಚನೆ ಇಲ್ಲದೆ, ಜಿಲ್ಲಾಡಳಿತಕ್ಕೆ, ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಕಾಮಗಾರಿ ನಡೆಸಿದ ಕಾರಣ ಈ ಗೊಂದಲ ಉಂಟಾಗಿದೆ. ಅಕ್ಕಿ ಸರಬರಾಜು ವಿಳಂಬವಾದರೆ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತವಾಗುವ ಆತಂಕ ಇತ್ತು. ಸೋಮವಾರದಿಂದ ಅಕ್ಕಿ ಸರಬರಾಜು ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.