Fraud Case ಷೇರು ಮಾರುಕಟ್ಟೆ ಹಣ ಹೂಡಿಕೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ : ಕೇಸು
Team Udayavani, Nov 8, 2023, 6:11 PM IST
ಕುಂದಾಪುರ: ಆರ್ಟಿಫಿಶಿಯಲ್ ತಂತ್ರಜ್ಞಾನ (ಎ.ಐ.) ಬಳಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ, ಕುಂದಾಪುರ ಮೂಲದವರೊಬ್ಬರಿಗೆ ಹಾಸನ ಹಾಗೂ ಬೆಂಗಳೂರು ಮೂಲದ ಮೂವರು 70 ಲಕ್ಷ ರೂ. ಗೂ ಮಿಕ್ಕಿ ಹಣವನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಂದಾಪುರದ ನಿವಾಸಿ ಅಶೋಕ್ ಹಣ ಕಳೆದುಕೊಂಡವರು. ಇವರು ಷೇರು ಮಾರುಕಟ್ಟೆಯಲ್ಲಿ ಅಡ್ವೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪರಿಚಯದ ಹಾಸನ ಮೂಲದ ಗೀತಾ ಅವರು ಕಳೆದ ಎಪ್ರಿಲ್‌ನಲ್ಲಿ ಅಶೋಕ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು, ತನ್ನ ಅಳಿಯ ಪ್ರಖ್ಯಾತ್ ವಿ.ಪಿ. ಹಾಗೂ ಪುತ್ರಿ ಸಿಂಚನಾ ಅವರನ್ನು ಪರಿಚಯಿಸಿ, ಆರ್ಟಿಫಿಶಿಯಲ್ ತಂತ್ರಜ್ಞಾನ (ಎ.ಐ.) ಬಳಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಪ್ರಖ್ಯಾತನು ದುಬಾೖಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಚಜಿ6ಜಿnಛಛಿx.cಟಞ ಎಂಬ ಸೈಟ್ ಮೂಲಕ ಹಣ ಹೂಡಿಕೆ ಮಾಡುತ್ತಿರುವುದಾಗಿ ಅಶೋಕ ಅವರಿಗೆ ತಿಳಿಸಿದ್ದಾರೆ.
ಇದನ್ನು ನಂಬಿದ ಅಶೋಕ್ ತನ್ನ ಪರಿಚಯಸ್ಥರು, ಸ್ನೇಹಿತರು, ಸಂಬಂಧಿಕರಿಗೆ ai6index.com ಎಂಬ ಷೇರು ಮಾರುಕಟ್ಟೆಯ ಪರಿಚಯಿಸಿ, ಹಣ ಹೂಡುವಂತೆ ತಿಳಿಸಿದ್ದಾರೆ. ಅಶೋಕ್ ಹಾಗೂ ಅವರ ಪರಿಚಯಸ್ಥರು ಸೇರಿ 66,33,600 ರೂ. ಹಣವನ್ನು ಸಿಂಚನಾ ಅವರ ಖಾತೆಗೆ, 4.50 ಲಕ್ಷ ರೂ. ಹಣವನ್ನು ಪ್ರಖ್ಯಾತ್ ಅವರ ಖಾತೆಗೆ ಜಮೆ ಮಾಡಿದ್ದಾರೆ. ಆ ಬಳಿಕ ಯೂಸರ್ ಐಡಿ, ಪಾಸ್‌ವರ್ಡ್ ನೀಡಿದ್ದು, ಆದರೆ ಕಳೆದ ಜು. 20ರಿಂದ ಆ ವೆಬ್‌ಸೈಟ್ ಬ್ಲಾಕ್ ಆಗಿದೆ. ಆ ಬಳಿಕ ಆರೋಪಿಗಳೆಲ್ಲರೂ ಸೇರಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ, ಹಣ ಪಡೆದು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಅಶೋಕ್ ಅವರು ದೂರು ನೀಡಿದ್ದಾರೆ. ಅದರಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.