ಮೊವಾಡಿ-ನಾಡ ಸೇತುವೆ: ಇನ್ನೂ ಆರಂಭಗೊಳ್ಳದ ಸಂಚಾರ
ರಸ್ತೆ ನಿರ್ಮಾಣಕ್ಕೆ ಇನ್ನಷ್ಟೇ ಆಗಬೇಕಿದೆ ಭೂಸ್ವಾಧೀನ ಪ್ರಕ್ರಿಯೆ
Team Udayavani, Nov 26, 2020, 5:32 AM IST
ಬಹುತೇಕ ಪೂರ್ಣಗೊಂಡಿರುವ ನಾಡ - ಮೊವಾಡಿ ಸಂಪರ್ಕ ಸೇತುವೆ.
ಕುಂದಾಪುರ: ತ್ರಾಸಿಯಿಂದ ನಾಡ, ಹಡವು ಗ್ರಾಮಗಳನ್ನು ಬೆಸೆಯುವ ಮೊವಾಡಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಬೇಕಾದ ಜಾಗದ ಸ್ವಾಧೀನ ಪ್ರಕ್ರಿಯೆ ಇನ್ನೂ ಶುರುವಾಗದ ಕಾರಣ ಸೇತುವೆಯಲ್ಲಿ ವಾಹನ ಸಂಚಾರ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ನಾಡದಿಂದ ತ್ರಾಸಿಗೆ ಸಂಪರ್ಕಿಸುವ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ದಿಂದ ಮಂಜೂರಾದ 9.28 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಇದಾಗಿದೆ. ಕಾಮಗಾರಿಗೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದರೂ ಕಾಮಗಾರಿ ಆರಂಭವಾಗಿದ್ದು 2019ರ ಮಾರ್ಚ್‌ನಲ್ಲಿ. 2020ರ ಮೇಯೊಳಗೆ ಕಾಮಗಾರಿ ಪೂರ್ಣಕ್ಕೆ ಗಡುವು ನೀಡಲಾಗಿತ್ತು. ಈಗ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಇನ್ನು ಆಗಬೇಕಾಗಿದೆ.
150 ಮೀ. ಉದ್ದ
ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಾಣ ಗೊಂಡಿರುವ ಈ ಸೇತುವೆಯು 150 ಮೀಟರ್ ಉದ್ದವಿದ್ದು, 8.5 ಮೀ. ಅಗಲವಿದೆ. ಫುಟ್‌ಪಾತ್ ಸೇರಿಸಿದರೆ ಒಟ್ಟು 10.5 ಮೀ. ಅಗಲವಿದೆ. ಉಡುಪಿ, ಕಾರ್ಕಳ, ಮೊವಾಡಿ – ನಾಡ ಸೇತುವೆ, ಭಟ್ಕಳದಲ್ಲಿ ಒಟ್ಟು 9 ಸೇತುವೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 42.57 ಕೋ. ರೂ. ಮಂಜೂರಾಗಿತ್ತು. ಇದರಲ್ಲಿ ಈ ಸೇತುವೆಯು 9.28 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಈ ಸೇತುವೆ ಕಾಮಗಾರಿಯು ಈಗಾಗಲೇ ಮುಗಿದಿದ್ದು, ಆದರೆ ಸೇತುವೆಯನ್ನು ಸಂಪರ್ಕಿ ಸುವ ರಸ್ತೆಗಳು ಹದಗೆಟ್ಟು ಹೋಗಿದೆ. ಅದನ್ನು ಕೂಡ ದುರಸ್ತಿ ಮಾಡಿದರೆ ಅನುಕೂಲವಾಗಲಿದೆ. ಇದಲ್ಲದೆ ಕೆಲವೆಡೆ ಜಾಗದ ಸಮಸ್ಯೆ ಇರುವುದರಿಂದ ಡಾಮರು ಕಾಮಗಾರಿಯಾಗದೆ ತೊಂದರೆ ಯಾಗಿದೆ. ಸಂಪರ್ಕ ರಸ್ತೆಗೆ ಕೂಡ ಆದಷ್ಟು ಬೇಗ ಡಾಮರು ಕಾಮಗಾರಿ ನಡೆಸಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಜಂಟಿ ಸರ್ವೇಗೆ ಸೂಚನೆ
ರಸ್ತೆಗೆ ಅಗತ್ಯವಿರುವ ಭೂಸ್ವಾಧೀನ ಕುರಿತಂತೆ ಉಪ ನೋಂದಣಾಧಿಕಾರಿಗಳು ಅಂಕಿ- ಅಂಶ ಹಾಗೂ ಮಾರ್ಗಸೂಚಿ ದರಪಟ್ಟಿಯನ್ನು ಕುಂದಾ ಪುರದ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದು, ಅದನ್ನು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅ. 10ರಂದು ಡಿಸಿ ನೇತೃತ್ವದಲ್ಲಿ ದರ ನಿರ್ಧರಣ ಸಲಹಾ ಸಮಿತಿ ಸಭೆ ನಡೆಸಿ, ಜಾಗಕ್ಕೆ ದರ ನಿಗದಿಪಡಿಸಲಾಗಿದೆ. ಅದಕ್ಕೂ ಮುನ್ನ ತಹಶೀಲ್ದಾರ್ ಅವರಿಂದ ಮತ್ತೂಮ್ಮೆ ಜಂಟಿ ಸರ್ವೇ ನಡೆಯಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ನಾಡ ಗ್ರಾಮ ವ್ಯಾಪ್ತಿಯಲ್ಲಿ 6 ಮಂದಿಯ ಒಟ್ಟು 39 ಸೆಂಟ್ಸ್ ಹಾಗೂ ತ್ರಾಸಿ ಗ್ರಾಮದ 12 ಮಂದಿಯ 59 ಸೆಂಟ್ಸ್ ಜಾಗ ರಸ್ತೆಗಾಗಿ ಒತ್ತುವರಿಯಾಗಲಿದೆ.
ಬಹು ವರ್ಷಗಳ ಬೇಡಿಕೆ
ನಾಡ, ಹಡವು, ಮೊವಾಡಿಯ ಜನರಿಗೆ ತ್ರಾಸಿಗೆ ಬಂದು ಕುಂದಾಪುರಕ್ಕೆ ತೆರಳಲು ಈ ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ. ಇದಲ್ಲದೆ ಮೊವಾಡಿಯ ನಿವಾಸಿಗಳಿಗೆ ತ್ರಾಸಿ ಅಥವಾ ಮುಳ್ಳಿಕಟ್ಟೆ ಪೇಟೆಗೆ ಬರ ಬೇಕಾದರೆ ಕನಿಷ್ಠ 3 ಕಿ.ಮೀ. ದೂರವಿದೆ. ಆದರೆ ಸೇತುವೆಯಾದರೆ ನಾಡ ಪೇಟೆಗಿರುವ ಅಂತರ ಕೇವಲ 1 ಕಿ.ಮೀ. ಮಾತ್ರ. ಮೊವಾಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿರುವುದರಿಂದ ಪಡುಕೋಣೆ ಇಗರ್ಜಿಗೆ ಹೋಗಲು ಕೂಡ ಇದು ಹತ್ತಿರದ ಮಾರ್ಗವಾಗಿದೆ. ಸೇತುವೆಯ ಆಸುಪಾಸಿನಲ್ಲೇ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಈ ಸೇತುವೆ ನಿರ್ಮಾಣದಿಂದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ.
ಭೂಸ್ವಾಧೀನ ಪ್ರಕ್ರಿಯೆ ಬಾಕಿ
ಸೇತುವೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಸೇತುವೆಯನ್ನು ಸಂಪರ್ಕಿಸುವ ಜಾಗದ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಈಗಾಗಲೇ ಭೂಸ್ವಾಧೀನ ಮಾಡುವ ರೈತರಿಗೆ ಎಷ್ಟು ಪರಿಹಾರ ಕೊಡಬೇಕು ಎನ್ನುವ ಬಗ್ಗೆ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಅದರಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜಾಗದ ಸಂತ್ರಸ್ತರಿಗೆ ಪರಿಹಾರ ಹಂಚಿಕೆಯಾದ ಕೂಡಲೇ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.
– ಮಂಜೇಶ್, ಎಂಜಿನಿಯರ್, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
9.28 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ
2018 ರಲ್ಲಿ ಸೇತುವೆಗೆ ಶಿಲಾನ್ಯಾಸ
300 ಕ್ಕೂ ಅಧಿಕ ಮನೆಯವರಿಗೆ ಅನುಕೂಲ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.