![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 18, 2020, 12:55 AM IST
ಮಲ್ಯಾಡಿ: ಮೀನಿನ ಬೇಟೆಯಲ್ಲಿ ತೊಡಗಿರುವ ಗ್ರಾಮೀಣ ಯುವಕರ ತಂಡ
ತೆಕ್ಕಟ್ಟೆ: ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡು ಹಿಂಡಾಗಿ ಮೀನುಗಳು ಸಾಗಿ ಬರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮೀಣ ಯುವಕರ ತಂಡವೊಂದು ಕಳೆದ ಮೂರು ದಿನಗಳಿಂದಲೂ ಉತ್ಸಾಹದಿಂದ ಮೀನಿನ ಬೇಟೆಯಲ್ಲಿ ತೊಡಗಿದ್ದು ಜೂ.17ರಂದು ಭಾರೀ ಪ್ರಮಾಣದ ಮೀನಿನ ಬೇಟೆಯಾಗಿದೆ.
ದೊಡ್ಡ ಗಾತ್ರದ ಮೀನುಗಳು: ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗ್ರಾಮೀಣ ಭಾಗದ ತಗ್ಗು ಪ್ರದೇಶದಲ್ಲಿ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿದೆ. ಐರ್, ಕಾಟ್ಲಾ , ಕೆಂಬೇರಿ, ಶಾಡಿ, ಮುಯಿಡಾ ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಕಳೆದೆರಡು ದಿನಗಳಿಂದ ಅಲಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನೇ ಗುರಿಯಾಗಿಸಿಕೊಂಡು ಇಲ್ಲಿನ ಹರೀಶ್, ಪ್ರಶಾಂತ್, ರಾಘವೇಂದ್ರ ,ಶ್ರೀನಿವಾಸ, ಸುಧೀರ್, ಚಂದ್ರ, ನವೀನ್, ದಾಸ್ ಸೇರಿದಂತೆ ಗ್ರಾಮೀಣ ಯುವಕರ ತಂಡ ಮಾಲಾಡಿ, ಮಲ್ಯಾಡಿ ಭಾಗಗಳಲ್ಲಿ ಬಲೆ ಬೀಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಮಲ್ಯಾಡಿ ಭಾಗದಲ್ಲಿ ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಯುವಕರ ತಂಡ ಬಲೆ ಬೀಸುತ್ತಿದ್ದೇವೆ, ಹೊಳೆಸಾಲುಗಳಲ್ಲಿ ಅಲ್ಲಲ್ಲಿ ಅಡ್ಡಲಾಗಿ ಬಲೆ ಇರಿಸಲಾಗಿದೆ. ಮೀನುಗಳಿರುವ ನಿಶಾನೆಯನ್ನು ನೋಡಿಕೊಂಡು ಕೆಲವೊಮ್ಮೆ ಉದ್ದನೆಯ ಬೀಣಿ ಬಲೆಯನ್ನು ಹಾಕಿದ್ದೇವೆ ಈಗಾಗಲೇ ಅಪಾರ ಪ್ರಮಾಣದ ಮೀನುಗಳು ಬಲೆಗೆ ಬಿದ್ದಿದೆ.
– ಹರೀಶ್, ಮಲ್ಯಾಡಿ, (ಮೀನಿನ ಬೇಟೆಯಲ್ಲಿ ತೊಡಗಿದವರು)
ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ನಾಲ್ಕೈದು ಮಂದಿ ಸ್ನೇಹಿತರು ಒಗ್ಗೂಡಿಕೊಂಡು ಕಳೆದ ಮೂರು ದಿನಗಳಿಂದ ಹವ್ಯಾಸಕ್ಕಾಗಿ ಮೀನುಗಳನ್ನು ಹಿಡಿಯುತ್ತಿದ್ದೇವೆ. ಮಳೆ ಯ ತೀವ್ರತೆ ಅಧಿಕವಾದರಿಂದ ನೆರೆ ಬಂದಿದ್ದು ಅತ್ಯಂತ ಜಾಗರೂಕತೆಯಿಂದ ಬಲೆ ಬೀಸಬೇಕಾಗಿದೆ. ಈ ಮೀನಿಗೆ ಭಾರೀ ಬೇಡಿಕೆ ಇದೆ.
– ಶ್ರೀನಿವಾಸ ಮಲ್ಯಾಡಿ (ಮೀನು ಹಿಡಿಯುವ ಹವ್ಯಾಸಿ ತಂಡ)
ಮೀನಿಗೆ ಹೆಚ್ಚಿದ ಬೇಡಿಕೆ
ಸರಿ ಸುಮಾರು ಒಂದು ಮೀನು ಮೂರು ಕೆ.ಜಿಗೂ ಅಧಿಕ ತೂಕವಿದ್ದು, ಸುಮಾರು ರೂ.500 ರಿಂದ ರೂ.600ಕ್ಕೂ ಅಧಿಕ ಬೆಲೆ ಇದೆ. ಪ್ರಸ್ತುತ ಸಮುದ್ರ ಮೀನುಗಾರಿಕೆ ನಿಷೇಧವಿರುವುದರಿಂದ ಗ್ರಾಮೀಣ ಭಾಗದಲ್ಲಿ ತಾಜಾ ಬಲೆ ಮೀನುಗಳ ಖರೀದಿಗಾಗಿ ಅರಸಿ ಬರುತ್ತಿದ್ದಾರೆ.
ಚಿತ್ರ/ ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
You seem to have an Ad Blocker on.
To continue reading, please turn it off or whitelist Udayavani.