ಮೂಡ್ಲಕಟ್ಟೆ – ಬಸ್ರೂರು ರಾಜ್ಯ ಹೆದ್ದಾರಿ; ಆಳೆತ್ತರಕ್ಕೆ ಬೆಳೆದ ಗಿಡಗಂಟಿಯಿಂದ ಸಮಸ್ಯೆ
Team Udayavani, Oct 15, 2020, 2:58 AM IST
ಬಸ್ರೂರು: ಬಸ್ರೂರು ಮೂರುಕೈಯಿಂದ ಕೋಣಿ, ಸಟ್ವಾಡಿ, ಮೂಡ್ಲಕಟ್ಟೆ, ಮಾರ್ಗೋಳಿಯಿಂದ ಬಸ್ರೂರು ತನಕದ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲೂ ಕುರುಚಲು ಕುರುಚಲು ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದರಿಂದ ಸಣ್ಣ ತಿರುವಿನಲ್ಲೂ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅನೇಕ ಕಡೆಗಳಲ್ಲಿ ಅವಾಂತರಗಳಾಗುತ್ತಿವೆ.
ಇಲ್ಲಿರುವ ತಿರುವುಗಳಲ್ಲಿ ನೇರ ಬಂದಾಗ ತತ್‌ಕ್ಷಣ ಎದುರಾಗುವ ವಾಹನಗಳನ್ನು ಕಂಡು ಅಷ್ಟೇ ವೇಗದಲ್ಲಿ ಎಡಭಾಗಕ್ಕೆ ವಾಹನಗಳನ್ನು ತಿರುಗಿಸಲು ಸಾಧ್ಯವಿಲ್ಲವಾಗಿದೆ. ಈ ರೀತಿ ತತ್‌ಕ್ಷಣ ತಿರುಗಿಸಿದರೆ ಅಲ್ಲೇ ಪಲ್ಟಿಯಾಗುವ ಸಂಭವವೇ ಜಾಸ್ತಿ. ಇಲ್ಲಿನ ಸಣ್ಣ – ದೊಡ್ಡ ತಿರುವುಗಳಲ್ಲಿ ಮತ್ತು ನೇರ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತ ಕುರುಚಲು ಗಿಡ – ಗಂಟಿಗಳನ್ನು ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಕತ್ತರಿಸಿ ತೆಗೆಯಬೇಕಾದ ಅನಿವಾರ್ಯವಿದೆ.
ಈ ತಿರುವಿನ ಅವಾಂತರ ಮೂಡ್ಲಕಟ್ಟೆ ರೈಲ್ವೇ ಮೇಲ್ಸೇತುವೆಯ ಕೆಳಗೂ ಇದೆ. ಇಲ್ಲಿನ ತಿರುವಿನಲ್ಲೂ ಇನ್ನೊಂದು ಕಡೆಯಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಇಲ್ಲೂ ಸಹ ಯಾವುದೇ ಸೂಚನ ಫಲಕವೂ ಇಲ್ಲದಿರುವುದು ದುರಂತ.
15 ದಿನಗಳಲ್ಲಿ ಸ್ವಚ್ಛ
ಬಸ್ರೂರು – ಕಂಡೂರು ರಸ್ತೆಯು ರಾಜ್ಯ ಹೆದ್ದಾರಿಯಗಿದ್ದು ರಸ್ತೆಯ ನಿರ್ವಹಣೆ ಮತ್ತಿತರ ಕಾರ್ಯಗಳಿಗೆ ಲೋಕೋಪಯೋಗಿ ಇಲಾಖೆಯೇ ಜವಾಬ್ದಾರಿಯಾಗಿರುತ್ತಾರೆ. ಆದರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ರಸ್ತೆಯ ಪಕ್ಕದ ಕುರುಚಲು ಗಿಡ-ಗಂಟೆಗಳನ್ನು ನಾವು ಮುಂದಿನ 15 ದಿನಗಳಲ್ಲಿ ಸ್ವಚ್ಛಗೊಳಿಸುತ್ತೇವೆ. ಪ್ರತಿವರ್ಷ ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ.
– ಮೋಹನ್ ರಾವ್, ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಕೋಣಿ.
ಎರಡು ಬಾರಿ ಪಲ್ಟಿ
ಪ್ರತಿದಿನ ಮಾರ್ಗೋಳಿಯಿಂದ ಕುಂದಾಪುರ ಕಚೇರಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದೇನೆ. ಸಾಕಷ್ಟು ತಿರುವುಗಳಿರುವ ಕಡೆ ಬೆಳೆದು ನಿಂತ ಕುರುಚಲು ಗಿಡ-ಗಂಟಿಗಳು ಅಡ್ಡವಾಗಿ ಎದುರು ಬರುವ ವಾಹನಗಳು ಕಾಣಿಸದೆ ಎರಡು ಬಾರಿ ಬಿದ್ದಿದ್ದೇನೆ.
– ರಾಮಚಂದ್ರ ಮಾರ್ಗೋಳಿ, ಬಸ್ರೂರು ನಿವಾಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.