Mother and Son Surprise: ಅಪರಿಚಿತನಂತೆ ಅಮ್ಮನಿಂದ ಮೀನು ಖರೀದಿಸಿದ ಮಗ!
3 ವರ್ಷಗಳ ಬಳಿಕ ದುಬಾೖಯಿಂದ ತವರಿಗೆ
Team Udayavani, Sep 22, 2023, 9:18 AM IST
ಗಂಗೊಳ್ಳಿ: ಯಾರಿಗೂ ಮಾಹಿತಿ ನೀಡದೆ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಅಪರಿಚಿತನಂತೆ ತೆರಳಿ ಮೀನು ಖರೀದಿಸುವ ಮೂಲಕ ಅಮ್ಮನನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ 3 ವರ್ಷಗಳ ಅನಂತರ ದುಬಾೖಯಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮಿತ್ರರಿಗೆ ದಿಢೀರ್ ಖುಷಿ ನೀಡುವ ಯೋಚನೆಯಿಂದ ತಾನು ಬರುವ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಮನೆಗೆ ಬಂದಾಗ ಮನೆಮಂದಿ ರೋಹಿತ್‌ನನ್ನು ಅಚ್ಚರಿ, ಖುಶಿಯಿಂದ ಎದುರುಗೊಂಡರು. ತಾಯಿ ಸುಮಿತ್ರಾ ಅವರು ಮನೆಯಲ್ಲಿ ಇಲ್ಲದ್ದರಿಂದ ಬೇಸರಗೊಂಡ ರೋಹಿತ್ ನೇರವಾಗಿ ಗಂಗೊಳ್ಳಿ ಬಂದರಿನ ಬಳಿ ಆಕೆ ಮೀನು ಮಾರುವ ಸ್ಥಳಕ್ಕೆ ತೆರಳಿದರು.
ಅಮ್ಮನಿಗೆ ಗುರುತು ಸಿಗಬಾರದೆಂದು ಟೋಪಿ ಮತ್ತು ಕನ್ನಡಕ ಧರಿಸಿ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಮೀನು ಖರೀದಿಯ ನಾಟಕವಾಡಿದರು. ಗ್ರಾಹಕನ ಹಾವಭಾವ, ಸ್ವರ ಗಮನಿಸಿದ ತಾಯಿಗೆ ಇದು ತನ್ನ ಮಗನೇ ಎಂದು ಹೆತ್ತ ಕರುಳು ಹೇಳಿತು. ತತ್‌ಕ್ಷಣ ಮಗನನ್ನು ಬಿಗಿದಪ್ಪಿ ಆನಂದಬಾಷ್ಪ ಹರಿಸಿ ಕಣ್ಣೊರೆಸುತ್ತಿರುವ ದೃಶ್ಯ ವೈರಲ್ ಆಗಿರುವ ವೀಡಿಯೋದಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.