Mullikatte: ನಾಡಗುಡ್ಡೆಯಂಗಡಿ-ಸೇನಾಪುರ ರಸ್ತೆ ಹೊಂಡಮಯ
ಡಾಮರೆಲ್ಲ ಎದ್ದು ಹೊಂಡ ಗುಂಡಿಮಯ ರಸ್ತೆಯಲ್ಲಿ ಸಂಚಾರ ದುಸ್ತರ
Team Udayavani, Nov 14, 2024, 2:39 PM IST
ಮುಳ್ಳಿಕಟ್ಟೆ: ನಾಡ ಗುಡ್ಡೆಯಂಗಡಿಯಿಂದ ಸೇನಾಪುರ ರೈಲು ನಿಲ್ದಾಣ ಕ್ರಾಸ್‌ವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಡಾಮರು ಎದ್ದು ಹೋಗಿ, ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಪ್ರಯಾಸಪಟ್ಟುಕೊಂಡು ಸಂಚರಿಸುವಂತಾಗಿದೆ.
ಸೇನಾಪುರ ರೈಲು ನಿಲ್ದಾಣ ಕ್ರಾಸ್ ಬಳಿಯಿಂದ ನಾಡಗುಡ್ಡೆಯಂಗಡಿಗೆ ಸಂಪರ್ಕಿಸುವ 1 ಕಿ.ಮೀ. ಉದ್ದದ ರಸ್ತೆಯ ಡಾಮರೆಲ್ಲ ಅಲ್ಲಲ್ಲಿ ಎದ್ದು ಹೋಗಿದೆ. ಹೊಂಡ-ಗುಂಡಿಮಯ ರಸ್ತೆಯಲ್ಲಿ ಸವಾರರು ಎದ್ದು, ಬಿದ್ದು ಸಂಚರಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯರು ಒತ್ತಾಯಿಸುತ್ತಿದ್ದರೂ, ಇತ್ತ ಯಾರೂ ಗಮನವೇ ಕೊಡದ ಕಾರಣ ಈ ರಸ್ತೆ ಅಭಿವೃದ್ಧಿ ಬೇಡಿಕೆಯಾಗಿಯೇ ಉಳಿದಿದೆ.
ಸುಮಾರು 200 ಮೀ. ದೂರದವರೆಗಿನ ರಸ್ತೆಯು 3 ವರ್ಷಗಳ ಹಿಂದೆ ಕಾಂಕ್ರೀಟಿಕರಣ ಆಗಿದೆ. ಬಾಕಿ ಉಳಿದ 1 ಕಿ.ಮೀ. ದೂರದವರೆಗಿನ ರಸ್ತೆಯಲ್ಲಿ ಹೆಸರಿಗಷ್ಟೇ ಡಾಮರೀಕರಣ ಆದಂತಿದೆ. ಡಾಮರಿಗಿಂತ ಜಾಸ್ತಿ ಹೊಂಡಗಳೇ ಇದೆ. ಅದು ಸಹ ಡಾಮರೀಕರಣ ಕಾಮಗಾರಿ ಆಗಿಯೇ 15 ವರ್ಷ ಕಳೆದಿದೆ. ಆ ಬಳಿಕ 3 ವರ್ಷಗಳ ಹಿಂದೆ ಒಮ್ಮೆ ಗುಂಡಿಗಳಿಗೆ ತೇಪೆ ಹಾಕಿದ್ದು ಬಿಟ್ಟರೆ, ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಈ ರಸ್ತೆಯಲ್ಲಿ ನಡೆದೇ ಇಲ್ಲ.
ಪ್ರಮುಖ ರಸ್ತೆ
ಇದು ನಾಡಗುಡ್ಡೆಯಂಗಡಿಯಿಂದ ಸೇನಾಪುರ ಕ್ರಾಸ್ ಮೂಲಕ ಕುಂದಾಪುರಕ್ಕೆ ಸಂಪರ್ಕಿಸಲು ಹತ್ತಿರದ ಮಾರ್ಗವಾಗಿದೆ. ಕುಂದಾಪುರ – ಆಲೂರು ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ನಿತ್ಯ ಆರೇಳು ಶಾಲಾ ಬಸ್‌ಗಳು, ಇನ್ನಿತರ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದರೂ, ಇದರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಸ್ತಾವನೆ ಸಲ್ಲಿಕೆ
ನಾಡ ಗುಡ್ಡೆಯಂಗಡಿಯಿಂದ ಸೇನಾಪುರ ರೈಲು ನಿಲ್ದಾಣ ಕ್ರಾಸ್‌ವರೆಗಿನ ಡಾಮರು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ಇದನ್ನು ಗ್ರಾ.ಪಂ. ಅನುದಾನದಲ್ಲಿ ಅಭಿವೃದ್ಧಿಪಡಿಸುವುದು ಕಷ್ಟ. ಅದಕ್ಕಾಗಿ ಗ್ರಾ.ಪಂ.ನಿಂದ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಕುಸುಮಾಕರ ಶೆಟ್ಟಿ, ಹೊಸಾಡು ಗ್ರಾ.ಪಂ. ಆಡಳಿತಾಧಿಕಾರಿ
ಗ್ರಾಮ ಆಡಳಿತವೇ ಇಲ್ಲ
ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾ.ಪಂ.ಗೆ ಸೇರಿಸಲಾಗಿದೆ. ಈ ರಸ್ತೆಯ ಬಹುಭಾಗ ಸೇನಾಪುರ ಗ್ರಾಮಕ್ಕೆ ಸೇರುತ್ತದೆ. ಹೊಸಾಡು ಗ್ರಾ.ಪಂ.ಗೆ ಕಳೆದ 4 ವರ್ಷದಿಂದ ಆಡಳಿತವೇ ಇಲ್ಲ. ಅಧಿಕಾರಿಗಳದ್ದೇ ಆಡಳಿತವಾಗಿದೆ. ಹೊಸಾಡಿನಿಂದ ದೂರದ ಸೇನಾಪುರಕ್ಕಂತೂ ಇವರು ಯಾರೂ ಭೇಟಿಯೇ ನೀಡದ ಕಾರಣ ಈ ರಸ್ತೆಯ ಅಭಿವೃದ್ಧಿ, ಇಲ್ಲಿನ ಗ್ರಾಮದ ಇನ್ನಿತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಾಗಿದೆ ಅನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.