ಸಂಗೀತ, ನೃತ್ಯ ಪರೀಕ್ಷೆಗೆ ಕೂಡಿ ಬರದ ಕಾಲ!
ರಾಜ್ಯದಲ್ಲಿ 65 ಕೇಂದ್ರಗಳು, 13 ಸಾವಿರ ವಿದ್ಯಾರ್ಥಿಗಳು
Team Udayavani, Sep 29, 2020, 5:32 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಪ್ರತಿವರ್ಷ ಮೇ ಎರಡನೇ ವಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ಕೋವಿಡ್ ಲಾಕ್‌ಡೌನ್ ಕಾರಣದಿಂದ ಮುಂದೂ ಡಲ್ಪಟ್ಟಿದ್ದು ದಿನ ನಿಗದಿಗೆ ಇನ್ನೂ ಕಾಲ ಕೂಡಿಬಂದಿಲ್ಲ. ಮಾ. 26ರ ವರೆಗೆ ದಂಡರಹಿತವಾಗಿ, ಮಾ. 31ರ ವರೆಗೆ ದಂಡಸಹಿತ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು ಇದರಲ್ಲಿ ಬದಲಾವಣೆ ಮಾಡಿಲ್ಲ. ಆದ್ದರಿಂದ ಆಗ ಅರ್ಜಿ ಸಲ್ಲಿಸಿ ಪರೀಕ್ಷೆಗೆ ತಯಾರಿ ನಡೆಸಿದವರು ಇನ್ನೂ ದಿನಗಣನೆ ಮಾಡುತ್ತಿದ್ದಾರೆ.
ಮಕ್ಕಳಲ್ಲಿ ಆತಂಕ
ರಾಜ್ಯದ 65 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 20-25 ದಿನಗಳ ಕಾಲ ಪರೀಕ್ಷೆ ನಡೆಯುತ್ತದೆ. ಪಿಯುಸಿ, ಎಸೆಸೆಲ್ಸಿ, ನೀಟ್ ಮೊದಲಾದ ಪರೀಕ್ಷೆಗಳು ನಡೆದ ಕಾರಣ ಮತ್ತು ನವೆಂಬರ್ 1ರಿಂದ ಪದವಿ ಕಾಲೇಜುಗಳು ಆರಂಭ ವಾಗುವ ಹಿನ್ನೆಲೆಯಲ್ಲಿ ಸಂಗೀತ, ನೃತ್ಯ ಪರೀಕ್ಷೆಯನ್ನು ಶೀಘ್ರ ನಡೆಸುವಂತಾಗಲಿ ಎಂಬುದು ಪರೀಕ್ಷಾರ್ಥಿಗಳ ಆಶಯ. ಕೆಲವೆಡೆ ಭರತನಾಟ್ಯ, ಸಂಗೀತ ತರಗತಿಗಳು ಪುನರಾರಂಭಗೊಂಡಿದ್ದು ಪರೀಕ್ಷೆಗೆ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದಾರೆ. ಪರೀಕ್ಷೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ನೃತ್ಯ, ಸಂಗೀತ ಶಾಲೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರಿಗೆ ಆತಂಕ ಉಂಟಾಗಿದೆ.
ಮೊಬೈಲ್‌ಗೆ ಎಸ್‌ಎಂಎಸ್
ಪರೀಕ್ಷಾ ಸಿದ್ಧತೆಗಳು ಆರಂಭವಾದಾಗ ಪರೀಕ್ಷಾರ್ಥಿ ಗಳ ಮೊಬೈಲ್‌ಗೆ ಪರೀಕ್ಷಾ ಮಂಡಳಿಯಿಂದ ಎಸ್‌ಎಂಎಸ್ ಬರಲಿದೆ. ಲಭ್ಯ ಮೂಲಗಳ ಮಾಹಿತಿ ಪ್ರಕಾರ ನವೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಕುರಿತಾಗಿ ಸಚಿವರು ಹಾಗೂ ಇಲಾಖಾ ಮಟ್ಟದಲ್ಲಿ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ. ಇನ್ನೊಂದು ವಾರ ದಲ್ಲಿ ಪರೀಕ್ಷಾ ದಿನಗಳು ನಿಗದಿಯಾಗಿ ಘೋಷಣೆಯಾಗುವ ಸಾಧ್ಯತೆಯಿದೆ.
ಅರ್ಹತೆ
10 ವರ್ಷ ತುಂಬಿದವರು ಕಿರಿಯ(ಜೂನಿಯರ್) 17 ತುಂಬಿದವರು ಅಥವಾ ಕಿರಿಯ ಪರೀಕ್ಷೆ ತೇರ್ಗಡೆಯಾಗಿ ಮೂರು ವರ್ಷ ಆದವರು ಸೀನಿಯರ್ ಪರೀಕ್ಷೆ ಬರೆಯ ಬಹುದು ಅಥವಾ ಪಿಯುಸಿ ಯಲ್ಲಿ ಐಚ್ಛಿಕ ಸಂಗೀತ, ನೃತ್ಯ, ತಾಳವಾದ್ಯ ಪಠ್ಯವನ್ನು ಅಭ್ಯಸಿಸಿರ ಬೇಕು. ಅಂತಹವರಿಗೆ ಜೂನಿಯರ್ ಪರೀಕ್ಷೆ ಅಗತ್ಯವಿಲ್ಲ. ನೇರ ಸೀನಿಯರ್ ಪರೀಕ್ಷೆಗೆ ಹಾಜರಾಗ ಬಹುದು. ವಿದ್ವತ್ ಪೂರ್ವ ಪರೀಕ್ಷೆಗೆ 19 ವರ್ಷ ತುಂಬಿರ ಬೇಕು ಅಥವಾ ಸೀನಿಯರ್ ಮುಗಿಸಿ 3 ವರ್ಷಗಳಾಗಿರಬೇಕು. ಪದವಿ ತರಗತಿಯಲ್ಲಿ ಐಚ್ಛಿಕ ವಿಷಯ ವಾಗಿ ಇವುಗಳನ್ನು ಪಡೆದರೂ ನೇರ ಪರೀಕ್ಷೆಗೆ ಭಾಗಿ ಯಾಗಲು ಅವಕಾಶ ಇದೆ.
ಪ್ರಾಚೀನ ಪರೀಕ್ಷೆ
ಸಂಗೀತ, ನೃತ್ಯ, ತಾಳವಾದ್ಯ ಕಲೆಯ ಅಭಿವೃದ್ಧಿಯ ಜತೆಗೆ ಅದರ ಶಿಕ್ಷಕರಾಗಿ ಸರಕಾರಿ, ಖಾಸಗಿ ವಲಯದಲ್ಲಿ ನೇಮಕಾತಿ ಹೊಂದಲು ಈ ಪರೀಕ್ಷೆಗಳು ಸಹಕಾರಿ. 1929ರಿಂದ ಈ ಪರೀಕ್ಷೆಗಳು ನಡೆಯುತ್ತಿದ್ದು ಭರತನಾಟ್ಯ, ಸಂಗೀತ, ಮೃದಂಗ ಮೊದಲಾದವುಗಳಲ್ಲಿ ವಿದ್ವತ್ ಪದವಿಗಳಿಕೆಗೆ ಈ ಪರೀಕ್ಷೆ ಅನಿವಾರ್ಯ.
ಸಂಗೀತ, ತಾಳವಾದ್ಯ, ನೃತ್ಯ ಪರೀಕ್ಷೆಗಳು ಈ ವರ್ಷ ನಡೆಯ ಲಿದ್ದು ಕೋವಿಡ್- 19 ಕಾರಣದಿಂದ ಮುಂದೂಡಲ್ಪಟ್ಟಿತ್ತು. ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷೆ ನಡೆಯಬೇಕಿದ್ದು ಸಚಿವರ ಸೂಚನೆಯಂತೆ ಪರೀಕ್ಷಾ ದಿನಾಂಕ ವನ್ನು ಶೀಘ್ರವೇ ಘೋಷಿಸಲಾಗುವುದು.
– ಪ್ರಸನ್ನ ಕುಮಾರ್ ಎಂ.ಎಸ್. ನಿರ್ದೇಶಕರು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಇತರ ಪರೀಕ್ಷೆಗಳು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.