ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ
Team Udayavani, Jul 10, 2021, 7:15 PM IST
ತೆಕ್ಕಟ್ಟೆ : ಸುಮಾರು ಅರ್ಧ ಶತಮಾನಗಳ ಕಾಲ ಯಕ್ಷಗಾನ ಸಾರಸ್ವತ ಲೋಕವನ್ನು ತನ್ನ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಬಡಗುತಿಟ್ಟಿನ ಸಾಂಪ್ರದಾಯ ಶೈಲಿಯ ಅಗ್ರಮಾನ್ಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95) ಅಸೌಖ್ಯದಿಂದ ಜು.10 ರಂದು ನಿಧನ ಹೊಂದಿದರು.
ಹಿರಿಯ ಭಾಗವತ ದಿ|ನಾರಣಪ್ಪ ಉಪ್ಪೂರ ಶಿಷ್ಯರಾಗಿ ತಾಳ, ರಾಗ ಜ್ಞಾನವನ್ನು ಸಂಪಾದಿಸಿಕೊಂಡು ಮೊತ್ತ ಮೊದಲು ಕೊಡವೂರು ಮೇಳದಲ್ಲಿ ಭಾಗವತರಾಗಿ ದುಡಿದರು. ಪೆರ್ಡೂರು ಮೇಳದಲ್ಲಿ ಭಾಗವತ ಗುಂಡ್ಮಿ ರಾಮಚಂದ್ರ ನಾವಡರ ಒಡನಾಡಿಯಾಗಿ, ಮಾರ್ಗದರ್ಶನದಲ್ಲಿ ಕುಂಜಾಲು ಶೈಲಿಯ ಭಾಗವತಿಕೆ ಅಭ್ಯಾಸ ನಡೆಸಿ, ಭಾಗವತಿಕೆ ಮಟ್ಟುಗಳನ್ನು ಅಧ್ಯಾಯನ ನಡೆಸಿ , ರಂಗ ತಂತ್ರ, ನಡೆ, ಆಟ ಆಡಿಸುವ ಕಲೆಯನ್ನು ಕರಗತ ಮಾಡಿಕೊಂಡು , ಕೋಟ ಅಮೃತೇಶ್ವರೀ ಮೇಳದ ಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ, ಮಂದರ್ತಿ, ಮಾರಣಕಟ್ಟೆ ಮೇಳದಲ್ಲಿ ದುಡಿದು ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ವೀರಭದ್ರ ನಾಯ್ಕ , ಕೊಕ್ಕರ್ಣೆ ನರಸಿಂಹ, ನೀಲಾವರ ಮಹಾಬಲ ಶೆಟ್ಟಿ, ಮೊಳಹಳ್ಳಿ ಹೆರಿಯ ನಾಯ್ಕ, ಐರೋಡಿ ಗೋವಿಂದಪ್ಪ ರಂತಹ ಮಹಾನ್ ಕಲಾವಿದರನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿಜೃಂಭಿಸಿದ್ದಾರೆ.
ಬಹುತೇಕ ತಿರುಗಾಟವನ್ನು ವಿದ್ಯುತ್ ದ್ವೀಪ ಧ್ವನಿ ವರ್ಧಕಗಳಿಲ್ಲದೆ ಕಳೆದು, ತಮ್ಮ ಕಂಚಿನ ಕಂಠದ ಮೂಲಕ ಯಕ್ಷರಸಿಕರ ಮನ ಗೆದ್ದಿದ್ದಾರೆ. ಸುಮಾರು 40 ಪ್ರಸಂಗಗಳು ಕಂಠಪಾಠವಿದ್ದು ಜೋಡಾಟದ ಭಾಗವತರೆಂದೇ ಜನಜನಿತರು.
ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ದಿ| ನಾರಣಪ್ಪ ಉಪ್ಪೂರ ಪ್ರಶಸ್ತಿ, ಎಂ. ಎಂ. ಹೆಗ್ಡೆ ಪ್ರಶಸ್ತಿ, ಬಣ್ಣದ ಸಕ್ಕಟ್ಟು ಪ್ರತಿಷ್ಠಾನದ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ದಿ|ಕಾಳಿಂಗ ನಾವಡ ಪ್ರಶಸ್ತಿ ಮುಂತಾಗಿ ಮಾನ ಸಮ್ಮಾನಗಳು ಲಭಿಸಿವೆ.
ಮೃತರು ಓರ್ವ ಪುತ್ರ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್ ಗ್ರೀಸ್ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ
Siddapura: ವಿದ್ಯುತ್ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು
Siddapura: ಪಾದಚಾರಿಗೆ ಪಿಕಪ್ ವಾಹನ ಢಿಕ್ಕಿ; ಗಂಭೀರ
Kundapura: ಬಸ್‌ನಲ್ಲೇ ಹೃದಯಾಘಾತ; ಸಮಯಪ್ರಜ್ಞೆ ಮೆರೆದ ಬಸ್ ಚಾಲಕ, ಸಾರ್ವಜನಿಕರ ಮೆಚ್ಚುಗೆ
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್!
Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್ ವ್ಯಾಪಾರಿಗಳ ಘೋಷಣೆ
SC: ಲಾಟರಿ ಕಿಂಗ್ ಮಾರ್ಟಿನ್ ಕೇಸ್: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್ ತಡೆ
Malayalam ಕಥೆಗಾರ, ಸಾಹಿತಿ ವಾಸುದೇವನ್ ನಾಯರ್ ವಿಧಿವಶ
Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.