ಕೋವಿಡ್ ನಿಂದ ಚೌತಿ ಕಳಾಹೀನ: ಹಬ್ಬಕ್ಕೆಂದು ಬೆಳೆದ ಕಬ್ಬಿಗಿಲ್ಲ ಬೇಡಿಕೆ
ದರವೂ ಕಡಿಮೆ; ಕೆಲಸಕ್ಕೆ ಹೊರ ರಾಜ್ಯದ ಕಾರ್ಮಿಕರೂ ಇಲ್ಲ
Team Udayavani, Aug 21, 2020, 6:00 AM IST
ಚೌತಿ ಹಬ್ಬಕ್ಕೆಂದು ಕಬ್ಬಿನ ಕಟಾವಿನಲ್ಲಿ ತೊಡಗಿರುವ ಶೀನಪ್ಪ ಪೂಜಾರಿ.
ಕುಂದಾಪುರ: ಚೌತಿ ಹಬ್ಬದಲ್ಲಿ ಕಬ್ಬಿಗೆ ವಿಶೇಷ ಪ್ರಾಶಸ್ತ್ಯ. ಹೆಮ್ಮಾಡಿ ಗ್ರಾಮದ ಸಂತೋಷ ನಗರ ಸಮೀಪದ ಬುಗುರಿಕಡು ಎನ್ನುವ ಊರಲ್ಲಿ ಗೌರಿ ಹಬ್ಬ, ಚೌತಿ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಾರೆ. ಆದರೆ ಕೊರೊನಾದಿಂದಾಗಿ ಚೌತಿ ಆಚರಣೆ ಈ ಬಾರಿ ಕಳೆಗುಂದಿರುವುದರಿಂದ ಕಬ್ಬಿಗೂ ಬೇಡಿಕೆ ಇಲ್ಲದಾಗಿದ್ದು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಬುಗುರಿಕಡುವಿನಲ್ಲಿ ಹಿಂದೆ ಅನೇಕರು ಹಬ್ಬಕ್ಕೆಂದು ಗದ್ದೆಗಳಲ್ಲಿ ಕಬ್ಬು ಬೆಳೆಯುತ್ತಿದ್ದರು. ಆದರೆ ಈಗ ಅಷ್ಟೊಂದು ಲಾಭದಾಯಕ ಅಲ್ಲವಾಗಿರುವುದರಿಂದ, ನೀರಿನ ಸಮಸ್ಯೆಯೂ ಇರುವುದರಿಂದ ಬುಗುರಿ ಕಡುವಿನಲ್ಲಿ ಶೀನಪ್ಪ ಪೂಜಾರಿ ಹಾಗೂ ಗೋಪಾಲ ಮೊಗವೀರ ಮಾತ್ರ ಕಬ್ಬು ಬೆಳೆಯುತ್ತಿದ್ದಾರೆ. ಬೆಳೆದ ಕಬ್ಬನ್ನು ಕುಂದಾಪುರ, ಗಂಗೊಳ್ಳಿ, ಮರವಂತೆ ಮತ್ತಿತರ ಭಾಗಗಳ ಅನೇಕ ಕಡೆಗಳಲ್ಲಿ ನಡೆಯುವ ಗಣೇಶೋತ್ಸವಕ್ಕೆ ಕೊಂಡೊಯ್ಯುತ್ತಾರೆ.
ಬೇಡಿಕೆ ಕುಂಠಿತ
ಪ್ರತಿ ವರ್ಷ ಒಂದು ಎಕರೆ ಗದ್ದೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಚೌತಿಗೆ 1,500 ಕಬ್ಬಿನ ಜೊಲ್ಲೆ ಕೊಡುತ್ತಿದ್ದರು. ಆದರೆ ಈ ಬಾರಿ ಈವರೆಗೆ ಕೇವಲ 700 – 800ರ ವರೆಗೆ ಮಾತ್ರ ಬೇಡಿಕೆ ಬಂದಿದೆ. 1 ಕಬ್ಬಿನ ಜೊಲ್ಲೆಯನ್ನು ಕಳೆದ ವರ್ಷ 30 ರೂ.ನಲ್ಲಿ ನಾವು ಕೊಡುತ್ತಿದ್ದರೆ, ಈ ಬಾರಿ 25 ರೂ. ದರದಲ್ಲಿ ಕೊಡುತ್ತಿದ್ದೇವೆ. ಇನ್ನು ಕಬ್ಬು ಕಟಾವು ಮತ್ತಿತರ ಕೆಲಸಗಳಿಗಾಗಿ ಕಬ್ಬಿನ ಜೊಲ್ಲೆ ಕಟಾವಿಗೆ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ತಮ್ಮ ತಮ್ಮ ಊರಿಗೆ ತೆರಳಿದವರು ವಾಪಸು ಬರಲಿಲ್ಲ ಎನ್ನುತ್ತಾರೆ ಶೀನಪ್ಪ ಪೂಜಾರಿ.
ಸಾಮಾನ್ಯವಾಗಿ ಕಬ್ಬು ಬೆಳೆಯಲು ಆರಂಭಿಸುವುದು ಫೆಬ್ರವರಿಯಲ್ಲಿ. ಆಗಸ್ಟ್‌ನಿಂದ ಕಬ್ಬು ಕಟಾವು ಆರಂಭ. ಆದರೆ ಕೊರೊನಾ ತೊಂದರೆ ಕೊಡಬಹುದು ಎನ್ನುವ ಅರಿವಿಲ್ಲದೆ ಪ್ರತಿ ವರ್ಷದಷ್ಟೇ ಕಬ್ಬು ಬೆಳೆದಿದ್ದಾರೆ.
ಅರ್ಧಕ್ಕರ್ಧ ಕಡಿಮೆ
ಈ ಬಾರಿ ಕೊರೊನಾದಿಂದಾಗಿ ಕಬ್ಬಿಗೆ ಅರ್ಧಕ್ಕರ್ಧ ಬೇಡಿಕೆ ಕಡಿಮೆಯಾಗಿದೆ. ಬೆಲೆಯೂ ಕಡಿಮೆ. ನಾವೂ ಸ್ವಲ್ಪ ಮಟ್ಟಿಗೆ ಕಡಿಮೆ ಬೆಲೆಯಲ್ಲಿಯೇ ಕೊಡುತ್ತಿದ್ದೇವೆ. ಹೊರ ರಾಜ್ಯದ ಕಾರ್ಮಿಕರಿಲ್ಲ ದಿರುವುದರಿಂದ ಕೆಲಸಕ್ಕೂ ಜನ ಕೊರತೆಯಾಗಿದ್ದು, ನಮ್ಮ ಮನೆಯವರೇ ಸೇರಿ ಮಾಡುತ್ತಿದ್ದೇವೆ.
– ಶೀನಪ್ಪ ಪೂಜಾರಿ, ಕಬ್ಬು ಬೆಳೆಗಾರರು
ನೀರಿನ ಸಮಸ್ಯೆ
ಮೊದಲ 3-4 ತಿಂಗಳು ಕಬ್ಬು ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ಇಲ್ಲಿ ಮಾರ್ಚ್, ಎಪ್ರಿಲ್, ಮೇ ಯಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ ಕಷ್ಟವಾಗುತ್ತದೆ. ನಾವು ಬೇರೆ ಕಡೆಯಿಂದ ದುಡ್ಡು ಕೊಟ್ಟು ನೀರು ತಂದು ಹಾಕುತ್ತಿದ್ದೇವೆ. ನೀರಿನ ಅಭಾವ ಹಾಗೂ ಕೊರೊನಾ ಕಾರಣದಿಂದ ಈ ಬಾರಿ ಹೆಚ್ಚಿನ ಕಬ್ಬು ಬೆಳೆದಿಲ್ಲ.
– ಗೋಪಾಲ ಮೊಗವೀರ ಬುಗುರಿಕಡು, ಕಬ್ಬು ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.