3 ಸಾ. ಕೋಟಿ ರೂ. ವಿದ್ಯುತ್ ಬಿಲ್ ಪಾವತಿಗೆ ಸೂಚನೆ
Team Udayavani, Jul 9, 2020, 10:42 AM IST
ಬುಧವಾರ ಆದೇಶ; ಗುರುವಾರ ಪಾವತಿಗೆ ಗಡುವು ನೀಡಿದ ಸರಕಾರ
ಕುಂದಾಪುರ: ಕುಡಿಯುವ ನೀರು ಹಾಗೂ ಬೀದಿ ದೀಪದ ಬಾಬ್ತು ರಾಜ್ಯದ ಎಸ್ಕಾಂಗಳಿಗೆ ಪಾವತಿಗೆ ಬಾಕಿಯಾದ 3,139.44 ಕೋಟಿ ರೂ.ಗಳನ್ನು ಒಂದೇ ದಿನದಲ್ಲಿ ಪಾವತಿಸುವಂತೆ ಸರಕಾರ ಬುಧವಾರ ಆದೇಶ ಮಾಡಿದೆ. ಇಡೀ ರಾಜ್ಯದಲ್ಲಿ ಉಡುಪಿ ಜಿಲ್ಲೆ ಅತ್ಯಂತ ಕನಿಷ್ಠ ಬಾಕಿ ಉಳಿಸಿಕೊಂಡ ಜಿಲ್ಲೆ (0.65 ಕೋ.ರೂ.)ಎಂದು ಗುರುತಿಸಿಕೊಂಡಿದೆ. ಅನಂತರದ ಸ್ಥಾನ ಉತ್ತರ ಕನ್ನಡಕ್ಕೆ (1.01ಕೋ.ರೂ.). ಅತಿ ಹೆಚ್ಚು ಬಾಕಿ ಉಳಿಸಿದ್ದು ಕೋಲಾರ (349.5 ಕೋ.ರೂ.).
ಕಟ್ಟಲೇ ಇಲ್ಲ
ಈ ವರ್ಷದ ಜನವರಿಯಿಂದ ಸೂಚನೆ ನೀಡಿದ್ದರೂ ಗ್ರಾ. ಪಂ.ಗಳು ಬಿಲ್ ಪಾವತಿಸಿಲ್ಲ. ಪಂಚತಂತ್ರ ತಂತ್ರಾಂಶದಲ್ಲೂ ಸಮರ್ಪಕ ಮಾಹಿತಿ ನೀಡಿಲ್ಲ. 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಶೇ.25ನ್ನು ಎಸ್ಕಾಂ ಬಾಕಿ ಬಿಲ್‌ಪಾವತಿಗೆ ಮೀಸಲಿಟ್ಟು ಆದೇಶಿಸಲಾಗಿತ್ತು. ಇದೀಗ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯ ಮೊದಲ ಕಂತನ್ನು ಕೂಡ ಬಿಡುಗಡೆ ಮಾಡಲಾಗಿದ್ದು ಅದನ್ನೂ ಸೇರಿಸಿ ಜು. 9ರ ಒಳಗೆ ಬಿಲ್ ಪಾವತಿಸುವಂತೆ ಜು. 8ರಂದು ಆದೇಶ ಹೊರಡಿಸಲಾಗಿದೆ. ಮೆಸ್ಕಾಂಗೆ ದ.ಕ.ದಲ್ಲಿ 27.22 ಕೋ.ರೂ.
ಬಾಕಿಯಿದ್ದು, 14.24 ಕೋ.ರೂ. ಎಸ್ಕೋ ಖಾತೆಯಲ್ಲಿದೆ. 14ನೇ ಹಣಕಾಸು ಯೋಜನೆಯಲ್ಲಿ 22.61 ಕೋ.ರೂ., 15ನೇ ಹಣಕಾಸು ಯೋಜನೆಯಲ್ಲಿ 5.7 ಕೋ.ರೂ. ಬಿಲ್‌ಗಾಗಿ ಇಡಲಾಗಿದೆ. ಉಡುಪಿಯಲ್ಲಿ 65 ಲಕ್ಷ ರೂ. ಬಾಕಿಯಿದ್ದು ಎಸ್ಕೋ ಖಾತೆಯಲ್ಲಿ 10 ಕೋ.ರೂ. ಬಾಕಿಯಿದೆ. 14ನೇ ಹಣಕಾಸು ಯೋಜನೆಯಲ್ಲಿ 15.3 ಕೋ.ರೂ., 15ನೇ ಯೋಜನೆಯಲ್ಲಿ 4.24 ಕೋ.ರೂ. ಮೀಸಲಿಡಲಾಗಿದೆ. ಚಿಕ್ಕಮಗಳೂರು 11.7 ಕೋ.ರೂ., ಶಿವಮೊಗ್ಗ 16.9 ಕೋ.ರೂ. ಮೆಸ್ಕಾಂಗೆ ಬಾಕಿಯಿದ್ದು ಚೆಸ್ಕಾಂಗೆ ಕೊಡಗು ಜಿಲ್ಲೆಯಿಂದ 2.6 ಕೋ.ರೂ. ಬಾಕಿಯಿದೆ.
ಬಾಕಿ
ಬೆಸ್ಕಾಂಗೆ 1,854 ಕೋ.ರೂ. ಬಾಕಿಯಿದ್ದು ಎಸ್ಕೋ ಖಾತೆಯಲ್ಲಿ 76.15 ಕೋ. ರೂ. ಇದೆ. ಮೆಸ್ಕಾಂಗೆ 60.38 ಕೋ.ರೂ.(65.28 ಕೋ.ರೂ.), ಹೆಸ್ಕಾಂಗೆ 292.6 ಕೋ.ರೂ. (156.9 ಕೋ. ರೂ.), ಗೆಸ್ಕಾಂಗೆ 743.7 ಕೋ.ರೂ. (67 ಕೋ. ರೂ.), ಚೆಸ್ಕಾಂಗೆ 188.6 ಕೋ.ರೂ. ಬಾಕಿ ಇದ್ದು ಎಸ್ಕೋದಲ್ಲಿ 60.3 ಕೋ.ರೂ. ಬಾಕಿಯಿದೆ.
ಸತತ ಸಭೆ, ಮೇಲ್ವಿಚಾರಣೆ
ನಿರಂತರ ಮೇಲ್ವಿಚಾರಣೆ ಸಹಿತ ಕಳೆದ 7 ತಿಂಗಳಲ್ಲಿ 6 ಸಭೆಗಳನ್ನು ಪಂಚಾಯತ್, ತಾ.ಪಂ. ಅಧಿಕಾರಿಗಳ ಜತೆ ನಡೆಸಲಾಗಿದೆ. ಪಂಚಾಯತ್ ತೋರಿಸಿದ ಬಿಲ್ ಮೊತ್ತ ಹಾಗೂ ಮೆಸ್ಕಾಂನ ಬಿಲ್‌ನಲ್ಲಿ ವ್ಯತ್ಯಾಸ ಬಂದ ಕಾರಣ ಉಡುಪಿ ಹಾಗೂ ಕುಂದಾಪುರ ಮೆಸ್ಕಾಂ ಇಇಗಳ ಜತೆ ಸಭೆ ನಡೆಸಲಾಗಿತ್ತು. ಇದರಿಂದ ಸಾಧ್ಯವಾದಷ್ಟು ಬಿಲ್ ಪಾವತಿಯಾಯಿತು.
– ಪ್ರೀತಿ ಗೆಹಲೋಟ್, ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.