![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Dec 9, 2023, 12:14 AM IST
ಕೋಟ: ಆನ್‌ಲೈನ್ ಬೆಟ್ಟಿಂಗ್ ಹೆಸರಲ್ಲಿ ಹಣ ಪಡೆದು ವಂಚನೆ ನಡೆಸಿದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಿವಾಸಿ ಆದಿತ್ಯ ಇತ್ತೀಚೆಗೆ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಈ ದೂರನ್ನು ಪೊಲೀಸರು ಒತ್ತಡ ಹಾಕಿ ತನ್ನಿಂದ ಪಡೆದಿರುವುದಾಗಿ ನ್ಯಾಯಾಲಯಕ್ಕೆ ದೂರುದಾರ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ನಿವಾಸಿ ಅಜಿತ್ ಕುಮಾರ್ ಹಾಗೂ ಪ್ರವೀಣ್ ನನ್ನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಬಗ್ಗೆ ತಿಳಿಸಿ ಆನ್‌ಲೈನ್ ಗೇಮ್ ಆಡಿದರೆ ಹಣ ಡಬ್ಬಲ್ ಆಗುತ್ತದೆ ಎಂಬುದಾಗಿ ನಂಬಿಕೆ ಹುಟ್ಟಿಸಿ 7 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದು, ಹಣವನ್ನು ತಮ್ಮ ಸ್ವಂತ ಲಾಭಕ್ಕೆ ದುರುಪಯೋಗಪಡಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂದು ಆದಿತ್ಯ ಠಾಣೆಯಲ್ಲಿ ಈ ಹಿಂದೆ ದೂರು ನೀಡಿದ್ದ. ಆದರೆ ಇದೀಗ ಈ ದೂರು ನನ್ನ ಇಚ್ಛೆಯಿಂದ ನೀಡಿಲ್ಲ ಮತ್ತು ನನಗೆ ಯಾವುದೇ ಮೋಸವಾಗಿಲ್ಲ.
ಅಜಿತ್ ಕುಮಾರ್ ಹಾಗೂ ಪ್ರವೀಣ್ ಮೇಲಿನ ದುರುದ್ದೇಶದಿಂದ ಪೊಲೀಸರು ನನ್ನ ಸಹಿ ಪಡೆದು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ ಹಾಗೂ ಈ ಬಗ್ಗೆ ಮಾಧ್ಯಮ ಹೇಳಿಕೆ ಕೂಡ ನೀಡಿದ್ದಾರೆ.
ದೂರುದಾರನೇ ನೇರವಾಗಿ ಠಾಣೆಗೆ ಬಂದು, ಆತನ ಇಚ್ಛೆ ಮೇರೆಗೆ ಪ್ರಕರಣ ದಾಖಲಿಸಿದ್ದಾನೆ. ಆದ್ದರಿಂದ ಇದರಲ್ಲಿ ಪೊಲೀಸರ ಒತ್ತಡ ಇರುವುದಿಲ್ಲ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.