ವಂಡ್ಸೆ ಎಸ್‌ಎಲ್‌ಆರ್‌ಎಂ ಲಾಕ್‌ಡೌನ್‌ನಲ್ಲಿಯೂ ಕಾರ್ಯನಿರ್ವಹಣೆ
Team Udayavani, Apr 23, 2020, 5:32 AM IST
ವಂಡ್ಸೆ: ಲಾಕ್‌ಡೌನ್‌ನಿಂದಾಗಿ ಎಲ್ಲವೂ ಸ್ತಬ್ಧವಾಗಿದೆ. ನಗರಗಳು, ಪೇಟೆ, ಪಟ್ಟಣಗಳು ಬಿಕೋ ಎನ್ನುತ್ತಿವೆ. ಸ್ವಚ್ಛತೆಯ ಕೊರತೆಯೂ ಕಾಡುತ್ತಿದೆ. ಆದರೆ ವಂಡ್ಸೆ ಗ್ರಾಮ ಲಾಕ್‌ಡೌನ್‌ನಲ್ಲಿಯೂ ಸ್ವತ್ಛತೆಯನ್ನು ಕಾಪಾಡಿಕೊಳ್ಳುತ್ತಿದೆ.
ಇದಕ್ಕೆ ಕಾರಣ ಎಸ್.ಎಲ್.ಆರ್.ಎಂ. ಘಟಕ. ಲಾಕ್‌ಡೌನ್‌ನಿಂದ ಜನ ಹೊರಗೆ ಬರಲು ಹೆದರುತ್ತಿದ್ದಾರೆ. ಈ ನಡುವೆ ನಗರ ನೈರ್ಮಲ್ಯ ಹಾಳಾಗಬಾರದು, ಕಸದ ವಿಲೇವಾರಿಗೆ ತೊಡಕಾಗಬಾರದು ಎಂಬ ಹಿನ್ನೆಲೆಯಲ್ಲಿ ವಂಡ್ಸೆ ಎಸ್.ಎಲ್.ಆರ್.ಎಂ.ನ ಕಾರ್ಯಕರ್ತರು ನಿತ್ಯವೂ ಸಾಮಾಜಿಕ ಅಂತರವಿಟ್ಟುಕೊಂಡು ಸ್ವತ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಎಸ್.ಎಲ್.ಆರ್.ಎಂ.ನ ಎಲ್ಲ ಕಾರ್ಯಕರ್ತರು ನಿತ್ಯವೂ ಕಸ ಸಂಗ್ರಹಣೆ, ವಿಲೇವಾರಿ, ವಿಂಗಡಣೆಯಲ್ಲಿ ಶ್ರಮಿಸುತ್ತಿದ್ದಾರೆ. ಕೋವಿಡ್-19 ಸುರಕ್ಷತಾ ವಿಧಾನಗಳನ್ನು ಅನುಸರಿಸಿಕೊಂಡು ಸಾಮಾಜಿಕ ಅಂತರದ ಜತೆಯಲ್ಲಿ ಸ್ಯಾನಿಟೈಸರ್ ಬಳಕೆ, ಮುಖಕ್ಕೆ ಮಾಸ್ಕ್, ಕೈಗವಚಗಳನ್ನು ಧರಿಸಿ ಕಸ ವಿಲೇವಾರಿಯಲ್ಲಿ ಶ್ರಮಿಸುತ್ತಿದ್ದಾರೆ.
ನಾಗರಿಕರೆಲ್ಲರ ಕೋವಿಡ್-19 ಭೀತಿಯಲ್ಲಿ ಮನೆಯೊಳಗೆ ಇದ್ದರೆ ಪುರ ಸ್ವತ್ಛತೆಯ ಮಹತ್ಕಾರ್ಯವನ್ನು ನಿಲ್ಲಿಸದ ಎಸ್.ಎಲ್.ಆರ್.ಎಂ. ಕಾರ್ಯಕರ್ತರ ಸೇವೆ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಕೋವಿಡ್-19 ದಂತಹ ವೈರಸ್ ವಕ್ಕರಿಸುತ್ತಿರುವ ಸಂದರ್ಭದಲ್ಲಿ ಸ್ವತ್ಛತೆಯ ಅಗತ್ಯವಿದೆ. ಕಸಕಡ್ಡಿ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿದರೆ ಬೇರೆ ರೀತಿಯ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳು ಇದೆ ಎನ್ನುವುದನ್ನು ಮನಗಂಡ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿಯವರು ಸ್ವತಃ ಎಸ್.ಎಲ್.ಆರ್.ಎಂ. ಕಾರ್ಯಕರ್ತರ ಜತೆ ನಿಂತು, ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ವಂಡ್ಸೆ ಎಸ್.ಎಲ್.ಆರ್.ಎಂ. ಘಟಕ ಇವತ್ತು ಮಾದರಿ ಘಟಕವಾಗಿ ದೇಶದಲ್ಲಿಯೇ ಗುರುತಿಸಿಕೊಂಡಿದೆ. ಈ ತುರ್ತು ಸಂದರ್ಭದಲ್ಲಿಯೂ ಕೂಡಾ ಗ್ರಾಮ ಸ್ವಾಸ್ಥ್ಯ ಕಾಪಾಡುವಲ್ಲಿ ಧೈರ್ಯದ ಹೆಜ್ಜೆ ಇಟ್ಟಿದೆ. ಇಲ್ಲಿನ ಎಂಟು ಮಂದಿ ಕಾರ್ಯಕರ್ತರ ಶ್ರಮ ಗ್ರಾಮದ ಸ್ವತ್ಛತೆಯಲ್ಲಿ ಗಮನಾರ್ಹವಾಗಿದೆ.
ಜನ ಮನೆಯಲ್ಲಿದ್ದಷ್ಟು ಕಸವೂ ಜಾಸ್ತಿ
ಪೇಟೆಯಲ್ಲಿ ಎಂದಿನಂತೆ ಕಸ ಸಂಗ್ರಹಣೆ, ಗ್ರಾಮೀಣ ಪ್ರದೇಶದಲ್ಲಿ ವಾರಕ್ಕೊಂದು ದಿನ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಲಾಕ್‌ಡೌನ್‌ನಿಂದ ಅಗತ್ಯ ವಸ್ತು ಪೂರೈಕೆ ಹೊರತು ಪಡಿಸಿ ಭಾಗಶಃ ಬಂದ್ ಇದ್ದರೂ ಕೂಡಾ ಕಸದ ಪ್ರಮಾಣ ಅಷ್ಟೇ ಇದೆ. ಕೋವಿಡ್-19 ಭೀತಿಯಿಂದ ಹೊರ ಭಾಗದಲ್ಲಿರುವವರು ಶೇ. 90 ಮಂದಿ ಊರಿಗೆ ಬಂದಿರು ವುದ ರಿಂದ ಆಹಾರ ಪದಾರ್ಥಗಳ ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಅಂತೆಯೇ ಕಸದ ಪ್ರಮಾಣವೂ ದೊಡ್ಡ ಪ್ರಮಾಣ ದಲ್ಲಿಯೇ ಉತ್ಪಾದನೆಯಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.