ಬ್ಯಾಜ್‌ ರಹಿತ ರಿಕ್ಷಾ ಚಾಲಕರಿಗೂ ಪ್ಯಾಕೇಜ್‌


Team Udayavani, Jun 24, 2020, 11:17 AM IST

ಬ್ಯಾಜ್‌ ರಹಿತ ರಿಕ್ಷಾ ಚಾಲಕರಿಗೂ ಪ್ಯಾಕೇಜ್‌

ಕುಂದಾಪುರ: ಆಟೋ ರಿಕ್ಷಾ ಚಾಲಕರಿಗೆ ಕೋವಿಡ್‌ ಪರಿಹಾರ ನಿಧಿಯಲ್ಲಿ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಘೋಷಿಸಿದ್ದು ಬ್ಯಾಜ್‌ ಇಲ್ಲದವರಿಗೂ ಪರಿಹಾರ ಧನ ನೀಡುವಂತೆ ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ. ಅರ್ಜಿ ಭರ್ತಿ ಮಾಡುವ ಆ್ಯಪ್‌ ಕುರಿತು ದೂರುಗಳಿದ್ದು ಸರಿಪಡಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಸಿಬಂದಿಗೆ ಕೋವಿಡ್ ಪಾಸಿಟಿವ್‌ ಬರುತ್ತಿರುವ ಪ್ರಕರಣಗಳು ವರದಿ ಯಾಗು ತ್ತಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಅಗತ್ಯವುಳ್ಳ ಆಸ್ಪತ್ರೆ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ರಾಜ್ಯ ಸರಕಾರ ಸಮರ್ಥವಾಗಿ ನಿಭಾಯಿಸಲಿದೆ. ಕೊರೊನಾ ಪ್ರಕರಣಗಳ ಕುರಿತಾದ ಸಚಿವರ ಹೇಳಿಕೆಗಳಲ್ಲಿ ಗೊಂದಲ ಇರಬಹುದು. ಆದರೆ ಸರಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರಶ್ನೆಗಳಿಗೆ ಸ್ಪಷ್ಟಪಡಿಸಿದರು.

ಡಾಟಾ ಎಂಟ್ರಿ: ಬದಲಿ ವ್ಯವಸ್ಥೆ
ಮೀನುಗಾರರ ಸಾಲ ಮನ್ನಾದಲ್ಲಿ 23 ಸಾವಿರ ಫ‌ಲಾನುಭವಿಗಳ ಪೈಕಿ 19,700 ಉಡುಪಿ ಜಿಲ್ಲೆ, 2 ಸಾವಿರ ದ.ಕ., 2 ಸಾವಿರದಷ್ಟು ಉ.ಕ. ದವರಿದ್ದಾರೆ. ಭೂಮಿ ತಂತ್ರಾಂಶಕ್ಕೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಬಂದಿ ಕೊರತೆಯಿದೆ ಎಂಬ ಕಾರಣಕ್ಕಾಗಿ ಮೀನು ಗಾರಿಕಾ ಸೊಸೈಟಿಯ ಸಿಬಂದಿಯನ್ನು ಕಳುಹಿಸಿ ಡಾಟಾ ಎಂಟ್ರಿ ಮಾಡಿಸಲಾಗಿದ್ದು ಸೋಮವಾರಕ್ಕೆ 19 ಸಾವಿರ ಎಂಟ್ರಿಗಳಾಗಿವೆ ಎಂದರು.

40 ಕೋ.ರೂ. ಡೀಸೆಲ್‌ ಸಬ್ಸಿಡಿಗೆ ಬೇಡಿಕೆ ಯಿದ್ದು ಎರಡು ದಿನಗಳ ಹಿಂದೆ 25 ಕೋ.ರೂ. ಬಂದಿದೆ. 15 ಕೋ.ರೂ.ಗಳನ್ನು ಜನವರಿಯಲ್ಲಿ ಮೀನುಗಾರರ ಖಾತೆಗೆ ಜಮೆ ಮಾಡಲಾಗಿತ್ತು. ಕುಂದಾಪುರದ ಕೋಡಿ ಮರಳು ದಿಬ್ಬ ತೆರವು ಕಾಮಗಾರಿಗೆ 1 ಕೋ.ರೂ. ಬೇಡಿಕೆ ಇಡಲಾಗಿದ್ದು ಹಣಕಾಸು ಇಲಾಖೆ ಯಲ್ಲಿ ಕಡತ ಇದೆ. ಕುಂದಾಪುರದಲ್ಲಿ ಬಂದರು ಇಲಾಖೆಗೆ 20 ಸೆಂಟ್ಸ್‌ ನಿವೇಶನ ಮಂಜೂ ರಾಗಿದ್ದು 10 ಕೋ.ರೂ. ಬಿಡುಗಡೆಯಾಗಿದೆ. 2 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯಾಗಲಿದೆ. 3 ವರ್ಷಗಳಿಂದ ಬಾರದೇ ಇದ್ದ ಉಳಿತಾಯ ಪರಿಹಾರ ಯೋಜನೆಯ ಹಣ ಈಗ ಕೇಂದ್ರದಿಂದ 5.5 ಕೋ.ರೂ., ರಾಜ್ಯದಿಂದ 4.5 ಕೋ.ರೂ. ಬಿಡುಗಡೆಯಾಗಿದೆ ಎಂದರು.

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.