Kundapura: ಪಡುಕುದ್ರುವಿಗೆ ಸೇತುವೆ ಇಲ್ಲ; ದೋಣಿಯೇ ಎಲ್ಲ!

120 ಸದಸ್ಯರಿರುವ ಎರಡು ಕುಟುಂಬಕ್ಕೆ ನೀರೆ ದಾರಿ!; 40 ವರ್ಷ ಕಳೆದರೂ ಈಡೇರದ ಸೇತುವೆ ಬೇಡಿಕೆ

Team Udayavani, Aug 13, 2024, 2:55 PM IST

1

ಕುಂದಾಪುರ: ಸುತ್ತಲೂ ಆವರಿಸಿರುವ ಜಲರಾಶಿ. ಇದರ ಮಧ್ಯೆ ಒಂದು ಊರು. ಈ ಊರು ತಲುಪಬೇಕಾದರೆ ಈ ಜಲ ರಾಶಿಯನ್ನು ಸೀಳಿಕೊಂಡೇ ಸಾಗಬೇಕು. ಅದು ಕೇವಲ ದೋಣಿ ಮೂಲಕ ಮಾತ್ರ. ಮಕ್ಕಳು ಶಾಲೆಗೆ ಹೋಗಲು, ಜನರು ಕೆಲಸಕ್ಕೆ ಹೋಗಲು, ದಿನಸಿ ತರಲು, ಕಚೇರಿಗಳಿಗೆ, ದೋಣಿಯೊಂದೇ ಆಧಾರ. ಯಾರಿಗಾದರೂ ಅನಾರೋಗ್ಯ ಉಂಟಾದರೂ ದೋಣಿಯಲ್ಲಿಯೇ ಆಚೆ ದಡದಿಂದ ಈಚೆ ದಡಕ್ಕೆ ಕರೆತರಬೇಕು.

ಕಟ್‌ಬೆಲ್ತೂರು ಗ್ರಾಮದ ಸುಳ್ಸೆ ಸಮೀಪದ ದ್ವೀಪದಂತಿರುವ ಪಡುಕುದ್ರು ಎಂಬ ಊರಿನಲ್ಲಿ ನೆಲೆಸಿರುವ ಎರಡು ಕೂಡು ಕುಟುಂಬಗಳ ನೂರಕ್ಕೂ ಮಿಕ್ಕಿ ಜನ ಪಡುತ್ತಿರುವ ನಿತ್ಯದ ಬವಣೆಯಿದು.

ಶಾಲೆಗೆ ಹೋಗುವ ಮಕ್ಕಳು

ಇಲ್ಲಿರುವ ಎರಡು ಮನೆಗಳಿಂದ ಸುಳ್ತೆ, ಹೆಮ್ಮಾಡಿ, ಕುಂದಾಪುರ, ಮಣಿಪಾಲಕ್ಕೆ ಶಾಲಾ- ಕಾಲೇಜುಗಳಿಗೆ ಹೋಗುವ 10 ಮಂದಿ ಮಕ್ಕಳಿದ್ದಾರೆ. ಒಬ್ಬರು ಶಿಕ್ಷಕಿಯೂ ಇದ್ದಾರೆ. ನಿತ್ಯ ಕೆಲಸಕ್ಕೆ ಹೋಗುವವರೂ ಇದ್ದಾರೆ. ಅವರೆಲ್ಲ ಪ್ರತೀ ದಿನ ಈ ದೋಣಿಯಲ್ಲೇ ಸಾಗಬೇಕು. ಜೋರು ಮಳೆ ಬಂದರೆ ದೋಣಿ ನಡೆಸಲು ಇಬ್ಬರು ಬೇಕು. ನದಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ದೋಣಿ ಕೊಚ್ಚಿಕೊಂಡು ಬೇರೆಡೆ ಹೋಗುವ ಆತಂಕವೂ ಇರುತ್ತದೆ. ನೆರೆ ಬಂದಾಗಲಂತೂ ದೋಣಿ ನಡೆಸಲು ಸಾಧ್ಯವೇ ಇಲ್ಲದ ಸ್ಥಿತಿ ಇರುತ್ತದೆ. ಆಗೆಲ್ಲ ಮಕ್ಕಳು ರಜೆಯೇ ಮಾಡಬೇಕಾಗುತ್ತದೆ.

ಇಲ್ಲಿರುವ ಎರಡು ಮನೆಗಳ ಹಿರಿ ತಲೆಗಳಾದ ಅಕ್ಕಮ್ಮ (90) ಹಾಗೂ ಸುಬ್ಬಿ (84) ಅವರಿಬ್ಬರು ಈ ಪಡುಕುದ್ರುವಿಗೆ ಸೇತುವೆಗಾಗಿ ಅನೇಕ ವರ್ಷಗಳಿಂದ ಸತತ ಹೋರಾಟ ಮಾಡಿ, ಪ್ರಯತ್ನ ಪಟ್ಟಿದ್ದರು. ಅವರ ಕಾಲವಾಗಿ ಕೆಲವು ವರ್ಷವಾದರೂ ಇನ್ನೂ ಸೇತುವೆ ಬೇಡಿಕೆ ಮಾತ್ರ ಈಡೇರಿಲ್ಲ.

ಕೃಷಿ ಕಾರ್ಯವೂ ಕಷ್ಟವೇ

ಈ ಪಡುಕುದ್ರು ಅಂದಾಜು 20 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಹಿಂದೆ ಅದಕ್ಕೂ ಹೆಚ್ಚು ಪ್ರದೇಶವಿದ್ದು, ನದಿ ನೀರಿನ ಕೊರೆತಕ್ಕೆ ಕಿರಿದಾಗುತ್ತಿದೆ. ಈ ಪೈಕಿ 15 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಭತ್ತ, ತೆಂಗು ಕೃಷಿ ಪ್ರದೇಶವಿದೆ. ಹಿಂದೆ ಕಬ್ಬು, ನೆಲೆಗಡಲೆ ಬೆಳೆಯುತ್ತಿದ್ದರು. ಆದರೆ ಈಗ ಭತ್ತದ ಬೆಳೆ ಕಟಾವಿಗೆ ಯಂತ್ರಗಳನ್ನು ತರಲು ಹೊಳೆಯಲ್ಲಿ ನೀರು ಕಡಿಮೆ ಆಗುವವರೆಗೆ ಕಾಯಬೇಕು. ಭತ್ತ ಅಕ್ಕಿ ಮಿಲ್‌ಗೆ ಸಾಗಿಸಲು, ತೆಂಗಿನ ಕಾಯಿ ಕೊಂಡೊಯ್ಯಲು ಹೀಗೆ ಎಲ್ಲ ಕೃಷಿ ಕಾರ್ಯಕ್ಕೂ ದೋಣಿಯನ್ನೇ ಅವಲಂಬಿಸಬೇಕಾಗಿದೆ. ಸಂಪರ್ಕ ಕಲ್ಪಿಸುವುದಾದರೆ 65 ಮೀಟರ್‌ ಉದ್ದದ ಸೇತುವೆ ನಿರ್ಮಿಸಬೇಕಾಗುತ್ತದೆ.

2 ಕುಟುಂಬ; 120 ಜನ

ಈ ಪಡುಕುದ್ರುವಿನಲ್ಲಿರುವುದು ಎರಡೇ ಕುಟುಂಬ. ಆದರೆ ಈ ಕುಟುಂಬದಲ್ಲಿ ಒಟ್ಟಾರೆ ಎಲ್ಲ ಸೇರಿದರೆ 125 ಜನ ಆಗುತ್ತಾರೆ. ಆದರೆ ಸಂಪರ್ಕ ಸಮಸ್ಯೆಯಿಂದ ಹೆಚ್ಚಿನವರು ಕುದ್ರುವಿನಿಂದ ಹೊರಗೆ ಮನೆ ಮಾಡಿಕೊಳ್ಳುವಂತಾಗಿದೆ. ನಾಗಮ್ಮ ದೇವಾಡಿಗರ ಮನೆಯಲ್ಲಿ ಒಟ್ಟಾರೆ 95 ಮಂದಿಯಿದ್ದು, ಈಗ ಇಲ್ಲಿರುವುದು 30 ಮಂದಿ. ಎಲ್ಲ ಹಬ್ಬ, ಪೂಜೆ, ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಾಗ ಬಂದು ಸೇರುತ್ತಾರೆ. ಇನ್ನು ಲಕ್ಷ್ಮಿ ಪೂಜಾರ್ತಿ ಅವರ ಮನೆಯಲ್ಲಿ ಒಟ್ಟಾರೆ 25 ಮಂದಿಯಿದ್ದು, ಈಗ 10 ಮಂದಿ ಮನೆಯಲ್ಲಿದ್ದಾರೆ.

ದೋಣಿಯೇ ಕೊಚ್ಚಿ ಹೋಗಿತ್ತು

ಪಡುಕುದ್ರುವಿನ ಜನರ “ಬದುಕಿನ ಬಂಡಿ’ಯಾಗಿದ್ದ ದೋಣಿಯೊಂದು 15 ದಿನಗಳ ಹಿಂದೆ ಭಾರೀ ಮಳೆ, ನೆರೆಗೆ ರಾತ್ರಿ ವೇಳೆ ಸುಮಾರು ಕೊಚ್ಚಿಕೊಂಡು ಹೋಗಿತ್ತು. ಆ ದೋಣಿಯನ್ನು ಸರಿಗೆ ಹಾಗೂ ಹಗ್ಗದಿಂದ ಕಟ್ಟಿ ಹಾಕಿದ್ದರೂ, ಅದು ಗಾಳಿ – ಮಳೆ ಅಬ್ಬರಕ್ಕೆ ಕಳಚಿಕೊಂಡು ಹೋಗಿತ್ತು. ಸುತ್ತ ಹುಡುಕಾಡಿದರೂ, ಸಿಕ್ಕಿರಲಿಲ್ಲ. ಸುಮಾರು ದೂರದ ಕಾಂಡ್ಲಾ ಮರಗಳ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು.

ನೆರೆ ಬಂದಾಗ ತುಂಬಾ ಕಷ್ಟ

ಬೇರೆ ಸಮಯದಲ್ಲಿ ಹೇಗೋ ದೋಣಿಯಲ್ಲಿ ಸಂಚರಿಸಬಹುದು. ಆದರೆ ನೆರೆ ಬಂದಾಗ ದೋಣಿಯಲ್ಲಿ ಹೋಗಲೂ ಭಯವಾಗುತ್ತದೆ. ದೋಣಿ ನಡೆಸಲು ಇಬ್ಬರು ಬೇಕಾಗುತ್ತದೆ. ಅನೇಕ ವರ್ಷಗಳಿಂದ ಸೇತುವೆ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. 40 ವರ್ಷದಿಂದ ಈವರೆಗಿನ ಎಲ್ಲ ಶಾಸಕರಿಗೂ ಮನವಿ ಕೊಟ್ಟಾಯಿತು. ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ.
– ಮಂಜು ದೇವಾಡಿಗ, ರಮೇಶ್‌ ಪೂಜಾರಿ, ಪಡುಕುದ್ರು ನಿವಾಸಿಗಳು

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Rubber-Estate

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

kalla

Siddapura: ಅಂಪಾರು ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

manipal-marathon

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.