Panchagangavali: ಪಂಚಗಂಗಾವಳಿ ಅಧ್ಯಯನಕ್ಕೆ ಇಂಟ್ಯಾಕ್ಟ್ ಮಹತ್ವ
ಕರಾವಳಿಯತ್ತ ಹರಿದು ಬರುವ ಈ ನದಿ ತಟಗಳಲ್ಲಿ ಹಲವು ದೇವಾಲಯಗಳು ನೆಲೆ ನಿಂತಿವೆ
Team Udayavani, Oct 26, 2023, 6:42 PM IST
ಕುಂದಾಪುರ: ದೇಶದ ಅಮೂರ್ತ ಪ್ರಾಕೃತಿಕ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಸೇವೆ ಸಲ್ಲಿಸುತ್ತಿರುವ, ರಾಜಧಾನಿ ದಿಲ್ಲಿಯಲ್ಲಿ ಮುಖ್ಯ ಕಚೇರಿ ಹೊಂದಿದ ಇಂಟ್ಯಾಕ್ ಸಂಸ್ಥೆ, ಕುಂದಾಪುರದ “ಪಂಚಗಂಗಾವಳಿ’ಯನ್ನು ಅಧ್ಯಯನ ಕ್ಕಾಗಿ ಆರಿಸಿಕೊಂಡು ಈಗಾಗಲೇ ತನ್ನ ಕೆಲಸ ಆರಂಭಿಸಿದೆ. ಇಂಟ್ಯಾಕ್‌ನ ನ್ಯಾಚುರಲ್ ಹೆರಿಟೇಜ್ ಡಿವಿಜನ್‌ನ ಮೂವರು ತಜ್ಞರು ಈಗಾಗಲೇ ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಆಗಮಿಸಿ ಮಾಹಿತಿ ಸಂಗ್ರಹದ ಪೂರ್ವಭಾವಿ ಕೆಲಸ ಆರಂಭಿಸಿದ್ದಾರೆ.
ಇಂಟ್ಯಾಕ್‌ನಿಂದ ಮಾಹಿತಿ ಸಂಗ್ರಹ ಕುಂದಾಪುರಕ್ಕೆ ಹೆಮ್ಮೆಯ ವಿಚಾರವಾಗಿದೆ. ಇಂಟ್ಯಾಕ್, ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಪ್ರಪಂಚದ ಶ್ರೇಷ್ಠ ಸರಕಾರೇತರ ಸಂಸ್ಥೆಯಾಗಿದೆ. ಆದರೆ ಕೇಂದ್ರ ಸರಕಾರದ ಇಲಾಖೆಗಳು ಸಂಸ್ಥೆಯ ಅಧ್ಯಯನ
ಸಂರಕ್ಷಣೆಯ ಕಾರ್ಯಕ್ಕೆ ನೆರವು ನೀಡುತ್ತಿವೆ.
ಪರಿಸರ, ಕಲೆ, ಪಾರಂಪರಿಕ, ಸಂಸ್ಕೃತಿ, ಶಿಲ್ಪಕಲೆ ಮುಂತಾದ ಹಲವು ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ಈ ಸಂಸ್ಥೆಯ ನ್ಯಾಚುರಲ್ ಹೆರಿಟೇಜ್ ಡಿವಿಜನ್‌ನ ಪ್ರಿನ್ಸಿಪಾಲ್ ಡೈರೆಕ್ಟರ್ ಮನು ಭಟ್ನಾಕರ್, ಸಾಯಿಂಟಿಫಿಕ್ ಆಫೀಸರ್ ಡಾ| ಸುಮೇಶ ಎನ್., ಡುದಾನಿ ಮತ್ತು ಎನ್‌ವಿರೊನ್‌ಮೆಂಟಲ್ ಪ್ಲಾನರ್ ಶ್ರಿಂತಿಕಾ ಮೌರ್ಯ ಕುಂದಾಪುರದಲ್ಲಿ ಅಧ್ಯಯನಕ್ಕೆ ತೊಡಗಿದ ತಜ್ಞರಾಗಿದ್ದಾರೆ.
ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಾಹಿತಿ, ಕಲಾವಿದರು, ಧಾರ್ಮಿಕ ಕ್ಷೇತ್ರಗಳ ಆಡಳಿತ ಮಂಡಳಿ, ಸ್ಥಳೀಯ ಸಂಸ್ಥೆಗಳು, ಮಾಧ್ಯಮಗಳು, ಜನ ಸಾಮಾನ್ಯರು, ಪಂಚಗಂಗಾವಳಿ ಪರಿಸರದ ಪಾರಂಪರಿಕ ಆಚರಣೆಗಳು, ಜನಪದ ಕಲೆ ಉತ್ಸವ ಜನಜೀವನ, ನೈಸರ್ಗಿಕ ವೈಶಿಷ್ಟ್ಯ ಯಾವುದರ ಬಗ್ಗೆಯೂ ಮಾಹಿತಿ ನೀಡಬಹುದು ಎಂದು ತಿಳಿಸಿ ಸಹಕಾರ ಅಪೇಕ್ಷಿಸಿದ್ದಾರೆ.
ಡಾ| ಸುಮೇಶ ಎನ್. ಡುದಾನಿ, ಮೊ: 9611250225 ಅವರಿಗೆ ವಿವರ ನೀಡಬಹುದಾಗಿದೆ. ಕುಂದಾಪುರದ ಪಂಚಗಂಗಾವಳಿಯ ನದಿಗಳಾದ ಸೌಪರ್ಣಿಕಾ, ಖೇಟ, ಚಕ್ರ, ವಾರಾಹಿ ನದಿಗಳು ತಮ್ಮದೇ ಆದ ವೈಶಿಷ್ಟé ಹೊಂದಿವೆ. ಪಶ್ಚಿಮ ಘಟ್ಟದಿಂದ ಕರಾವಳಿಯತ್ತ ಹರಿದು ಬಂದು ಕುಂದಾಪುರದಲ್ಲಿ ಒಂದಾಗಿ ಸಾಗರ ಸೇರುವ ಈ ನದಿ ತಟಗಳಲ್ಲಿ ಹಲವು ಸಂಸ್ಕೃತಿಗಳು ಮೇಳೈಸಿವೆ.
ಮಲೆನಾಡಿನ ಪ್ರಾಕೃತಿಕ ವೈಶಿಷ್ಟ್ಯ ಹೊತ್ತುಕೊಂಡು ಬರುವ ನದಿಗಳು ಸಾವಿರಾರು ಔಷಧೀಯ ಸಸ್ಯಗಳನ್ನು ಪ್ರಕೃತಿಗೆ ನೀಡಿವೆ. ಕರಾವಳಿಯತ್ತ ಹರಿದು ಬರುವ ಈ ನದಿ ತಟಗಳಲ್ಲಿ ಹಲವು ದೇವಾಲಯಗಳು ನೆಲೆ ನಿಂತಿವೆ. ಪ್ರತಿಯೊಂದು ದೇವಾಲಯದ ಪರಂಪರೆಯು ವಿಶಿಷ್ಟವಾಗಿದೆ. ಇಲ್ಲಿನ ಜನಪದ ಸಂಸ್ಕೃತಿ, ಭಾಷೆ, ಕರ್ನಾಟಕದಲ್ಲೇ ವಿಶೇಷ ಸ್ಥಾನ ಪಡೆದಿದೆ. ಪ್ರವಾಸೋದ್ಯಮಕ್ಕೆ ಬಹಳ ಅನುಕೂಲವಿರುವ ಹಲವಾರು ಜಲಪಾತ, ನದಿ ತೀರದ ಸೌಂದರ್ಯ, ಅರಣ್ಯ ಗಳಲ್ಲಿರುವ ವಿಶಿಷ್ಟ ತಳಿಗಳು, ಪಂಚಗಂಗಾವಳಿ ಪರಿಸರ ಅಧ್ಯಯನಕ್ಕೆ ಬಹಳ ಅನುಕೂಲವಾಗಿವೆ.
ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲ್ಲಿನ ಪ್ರಮುಖ ಜೀವನದ ಆಧಾರಗಳು. ನದಿ ಹಾಗೂ ಇಲ್ಲಿನ ಪ್ರಕೃತಿಗೆ ಹೊಂದಿಕೊಂಡಂತೆ ಹಲವು ಉದ್ಯಮಗಳು ಜನಜೀವನಕ್ಕೆ ಆಸರೆಯಾಗಿವೆ. ಇಲ್ಲಿನ ಜನರ ಪಾಂಡಿತ್ಯವೂ ಸಹ ಬಹಳ ಪ್ರಸಿದ್ಧಿಯಾಗಿದೆ.
ಯಕ್ಷಗಾನ, ಯಕ್ಷಗಾನ ಗೊಂಬೆಯಾಟ, ಕೋಲ, ದೈವಾರಾಧನೆ, ರಥೋತ್ಸವ, ಜಾನಪದ ಆಟಗಳು, ಸಾಹಿತ್ಯ, ಅಧ್ಯಯನಕ್ಕೆ ಅನುಕೂಲವಾಗಿವೆ. ಮುಖ್ಯ ವಾಗಿ ಪಂಚನದಿಗಳು ಹರಿವು ದೇಶದಲ್ಲೇ ವಿಶಿಷ್ಟ ವಾದುದು ಎಂದು ತಜ್ಞರು ಬಣ್ಣಿಸಿದ್ದಾರೆ. ರಾಷ್ಟ್ರಮಟ್ಟ ದಲ್ಲಿ ಪಂಚಗಂಗಾವಳಿ ಅಭಿವೃದ್ಧಿ ಹೊಂದಲು ಕುಂದಾಪುರದ ಜನತೆ ಸಹಕಾರ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ
Baindur: ರೈಲ್ವೇ ಗೇಟ್ ಬಂದ್; ಕೋಟೆಮನೆಗೆ ಸಂಪರ್ಕ ಕಟ್
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
Naxal Encounter: ಪೀತಬೈಲುವರೆಗೂ ದುರ್ಗಮ ಹಾದಿ: 8 ಕಿ.ಮೀ. ನಡೆದೇ ಸಾಗಬೇಕು
Hosur: ಕರೆಗಾಗಿ ಮರ, ಗುಡ್ಡ ಏರುವ ಪರಿಸ್ಥಿತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.