ನಗರದ ಹೊಟೇಲ್‌ಗಳಲ್ಲಿ ಇನ್ನು ಕಾಗದದ ತಟ್ಟೆ, ಲೋಟ
ಲೋಹ ಪದಾರ್ಥಗಳಿಂದ ಸೋಂಕು ಹರಡುವ ಸಾಧ್ಯತೆ
Team Udayavani, Jul 9, 2020, 6:11 AM IST
ಕುಂದಾಪುರ: ಕೋವಿಡ್ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ಗಳಲ್ಲಿ ಸ್ಟೀಲ್ ಲೋಟ, ತಟ್ಟೆಗೆ ಗುಡ್ ಬೈ ಹೇಳಿ ಉಪಯೋಗಿಸಿ ಬಿಸಾಡುವ ಪರಿಕರಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಬದಲಿ ಬಳಕೆ
ಕೋವಿಡ್ ಸೋಂಕು ಒಂದೊಂದು ವಸ್ತುವಿನಲ್ಲಿ ಒಂದೊಂದು ರೀತಿಯ ಅವಧಿಯಷ್ಟು ಕಾಲ ಬದುಕಿರುತ್ತದೆ. ಸ್ಟೀಲ್ ವಸ್ತುಗಳಲ್ಲಿ ಗರಿಷ್ಠ ಅವಧಿಯಲ್ಲಿ ಇರುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಹೊಟೇಲ್‌ಗಳು ಈ ಕ್ರಮ ಕೈಗೊಂಡಿವೆ. ಕೆಲವು ಹೊಟೇಲ್‌ಗಳಲ್ಲಿ ಸ್ಟೀಲ್ ತಟ್ಟೆಯ ಮೇಲೆ ಬಾಳೆ ಎಲೆ ಹಾಕಿ ಅದರಲ್ಲಿ ತಿಂಡಿಯನ್ನು ನೀಡಲಾಗುತ್ತದೆ. ಇನ್ನು ಅನೇಕ ಹೊಟೇಲ್‌ಗಳಲ್ಲಿ ಕಾಗದದ ತಟ್ಟೆ , ಲೋಟ ಬಳಸಲಾಗುತ್ತಿದೆ. ಸಪ್ಲಯರ್, ಕ್ಲೀನರ್, ಕ್ಯಾಶಿಯರ್ ಸೇರಿದಂತೆ ಗ್ರಾಹಕರ ಜತೆ ಸಂಪರ್ಕ ಹೊಂದುವ ಎಲ್ಲರೂ ಮಾಸ್ಕ್ ಧಾರಣೆ ಮಾಡುತ್ತಿದ್ದಾರೆ. ಒಂದು ಮೇಜಿಗೆ ಇಬ್ಬರೇ ಕೂರುವಂತೆ ಕುರ್ಚಿಗಳ ಸಂಖ್ಯೆ ಕಡಿತಗೊಳಿಸಲಾಗಿದೆ.
ಹೆಚ್ಚಿದ ಮುತುವರ್ಜಿ
ಹೊಟೇಲ್‌ಗಳ ಒಳಗೆ ಹೋಗುವವರೆಗಷ್ಟೇ ಮಾಸ್ಕ್ ಧರಿಸಬಹುದು. ತಿಂಡಿ ತಿನ್ನಲು, ಚಹಾ ಸೇವನೆಗೆ ಮಾಸ್ಕ್ ತೆಗೆಯಲೇಬೇಕು. ಇದರಿಂದಾಗಿ ಒಂದಷ್ಟು ಅನನುಕೂಲಗಳೂ ಆಗುತ್ತಿವೆ. ಹೊಟೇಲ್ ಕಾರ್ಮಿಕರ ಕುರಿತು ಮಾಲಕರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. 60 ದಾಟಿದ ಸಿಬಂದಿಯನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿಲ್ಲ.
ಜಾಗರೂಕತೆ
ಸಾರ್ವಜನಿಕರು ಕೂಡ ಈ ಕುರಿತು ಎಚ್ಚರಿಕೆ ವಹಿಸಬೇಕಾದ ಅವಶ್ಯವಿದೆ.ಕೆಲ ದಿನಗಳ ಹಿಂದೆ ದಿಢೀರ್ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್‌ಪಿ ಅವರು ಕೂಡ ಹೊಟೇಲ್‌ಗಳಲ್ಲಿ ಸ್ಟೀಲ್ ಲೋಟ, ತಟ್ಟೆ ಬಳಸದಂತೆ ಸೂಚಿಸಿದ್ದರು.
ಹೆಚ್ಚಿದ ಖರ್ಚು
ತೊಳೆದು ಬಳಸುವ ಪ್ಲೇಟ್‌ಗಳಿಗಿಂತ ಮರು ಬಳಸಲಾಗದ ತಟ್ಟೆ, ಲೋಟ ಬಳಕೆಯಿಂದ ಗ್ರಾಹಕರಿಗೆ ಸೌಖ್ಯ ಹೌದು. ಆದರೆ ಮಾಲಕರಿಗೆ ಸಂಕಷ್ಟ ಬಂದಿದೆ. ಖರ್ಚಿನಲ್ಲಿ ಏರಿಕೆಯಾಗು ತ್ತಿದೆ. ಇದನ್ನು ಗ್ರಾಹಕರ ತಲೆಗೆ ವರ್ಗಾಯಿಸುವಂತಿಲ್ಲ. ದರ ಏರಿಸಿದರೆ ಗ್ರಾಹಕರ ಮುನಿಸಿಗೆ ಕಾರಣವಾಗ ಬೇಕಾಗುತ್ತದೆ. ಮೊದಲೇ ಗ್ರಾಹಕರ ಸಂಖ್ಯೆಯಲ್ಲಿ ಇಳಿತವಾಗಿದೆ. ಹೊಟೇಲ್ ಉದ್ಯಮ ಚೇತರಿಕೆ ಹಾದಿಯಲ್ಲಷ್ಟೇ ಇದೆ. ಹಾಗಿರುವಾಗ ದರ ಏರಿಕೆ ಬಿಸಿ ಮುಟ್ಟಿದರೆ ಇನ್ನಷ್ಟು ಕಠಿನ ಸಮಸ್ಯೆಯಾದೀತು ಎಂಬ ಆತಂಕ ಮಾಲಕರದ್ದು.
ಮಾಹಿತಿ ನೀಡಲಾಗಿದೆ
ನಗರದ ಹೊಟೇಲ್ ಮಾಲಕರನ್ನು ಕರೆದು ಪ್ರತಿ 15 ದಿನಗಳಿಗೊಮ್ಮೆ ಮೀಟಿಂಗ್ ನಡೆಸಲಾಗುತ್ತಿದೆ. ಪ್ರತಿದಿನ ಕೆಲವು ಹೊಟೇಲ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪುರಸಭೆ ವತಿಯಿಂದ ಹೊಟೇಲ್‌ನವರ ವಾಟ್ಸಾéಪ್ ಗ್ರೂಪ್ ರಚಿಸಿ ಮಾಹಿತಿ ನೀಡಲಾಗುತ್ತಿದೆ. ಎಲ್ಲ ಎಚ್ಚರಿಕೆ ಕೈಗೊಳ್ಳಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.