ಹಿಂದುತ್ವ ವಿರೋಧಿ ನೀತಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ: ಬಿ.ಎಸ್.ಸುರೇಶ ಶೆಟ್ಟಿ
ಬೈಂದೂರು ಕ್ಷೇತ್ರಾದ್ಯಂತ ಜನರಿಂದ ಬಿಜೆಪಿಗೆ ಒಲವು
Team Udayavani, May 6, 2023, 6:30 PM IST
ಉಪ್ಪುಂದ: ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಬಜರಂಗದಳವನ್ನು ಬ್ಯಾನ್ ಮಾಡುವ ಭರವಸೆಯ ಮೂಲಕ ತನ್ನ ಹಿಂದು ವಿರೋಧಿ ನೀತಿಯನ್ನು ಮುಂದುವರಿಸುವ ಸೂಚನೆ ಸಿಕ್ಕಿದೆ, ಮತದಾರರು ಯೋಚಿಸಬೇಕಾಗಿದೆ ಈ ಹಿಂದೆ 23 ಹಿಂದೂಗಳ ಹತ್ಯಾಗಿದೆ, ಮತ್ತೆ ಅಧಿಕಾರ ಪಡೆದರೆ ಹಿಂದೂಗಳ ಪರಿಸ್ಥಿತಿ ಏನಾಗಬಹುದು, ನಮ್ಮ ಮಕ್ಕಳ ರಕ್ಷಣೆ ಯಾರು ಮಾಡುತ್ತಾರೆ ತಾಯಿಂದಿರು, ಮತದಾರರು ಚಿಂತಿಸಬೇಕಿದೆ. ಬೈಂದೂರಿನ ಜನತೆ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿಯ ಗ್ಯಾರಂಟಿಗೆ ಮೇ10ರಂದು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆಗೆ ಮತ ನೀಡಿ ದಾಖಲೆಯ ಗೆಲುವಿನ ಮೂಲಕ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕು ಎಂದು ಬಿ.ಎಸ್.ಸುರೇಶ ಶೆಟ್ಟಿ ಹೇಳಿದರು.
ಹಿಂದೂ ವಿರೋಧಿ ನೀತಿಯಿಂದ ಬೈಂದೂರು ಕಾಂಗ್ರೆಸಿಗರಲ್ಲಿ ಮುಜುರಗ ಉಂಟಾಗಿದೆ. ಜನರಲ್ಲಿ ಮತ ಕೇಳುವುದು ಹೇಗೆ ಎನ್ನುವ ಆಡಿಯೋ ವೈರಲ್ ಆಗಿದೆ ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸು ಕಳೆದುಕೊಂಡಿದ್ದು, ಬೈಂದೂರು ಕ್ಷೇತ್ರಾದ್ಯಂತ ಜನರಿಂದ ಬಿಜೆಪಿಗೆ ಒಲವು ಹೆಚ್ಚುತ್ತಿದೆ, ಕನಿಷ್ಠ ಮತ ಪಡೆಯುವ ಸಾಮರ್ಥ್ಯವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ ಎಂದರು.
ತಪ್ಪಾದರೆ ಪಶ್ಚಾತ್ತಾಪ ಗ್ಯಾರಂಟಿ
ಬೈಂದೂರಿನಲ್ಲಿ ಹಿಂದೂಗಳ ಅಸ್ಥಿತ್ವ ಉಳಿಯಬೇಕಾದರೆ, ರಕ್ಷಣೆ ಸಾಧ್ಯವಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ, ಮತದಾರರು ಎಚ್ಚರಿಕೆಯಿಂದ ಯೋಚಿಸಿ ಮತದಾನ ಮಾಡುವ ಸಮಯ ಇದು ತಪ್ಪಾದರೆ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಬಹುದು. ಹಿಂದೂಗಳನ್ನು ಕೆಣಕಿದವರಿಗೆ ಪಶ್ಚಾತ್ತಾಪ ಪಡುವಂತೆ ಮಾಡಬೇಕು, ಬೈಂದೂರಿನ ಜನತೆ ಕಷ್ಟಗಳ ಜೊತೆಗೆ ಬೆಳೆದು ಬಂದಿರುವ ಬಿಜೆಪಿಯ ಸಾಮಾನ್ಯ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಗೆ ಮತ ನೀಡುವ ಮೂಲಕ ತಕ್ಕ ಉತ್ತರ ನೀಡುವ ಅನಿವಾರ್ಯತೆ ಬಂದಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚದ ಕಾರ್ಯದರ್ಶಿ ಡಾ| ಗೋವಿಂದಬಾಬು ಪೂಜಾರಿ ಹೇಳಿದರು.
ಕಾಂಗ್ರೆಸ್ ನೀತಿ ಬೇಸರ ಬಿಜೆಪಿಗೆ ಬೆಂಬಲ
ಗುಜ್ಜಾಡಿ ಗ್ರಾಮದ ಕಾಂಗ್ರೆಸ್ಸಿಗರು ಬಜರಂಗದಳ ನಿಷೇಧ ಮಾಡುವ ವಿಚಾರ ಪ್ರಸ್ತಾಪವನ್ನು ಖಂಡಿಸಿ, ಧರ್ಮದ ರಕ್ಷಣೆ ಹಾಗೂ ಉಳಿವಿಗಾಗಿ ಬಿಜೆಪಿಯ ತತ್ವ ಸಿದ್ಧಾತವನ್ನು ಒಪ್ಪಿಕೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗುಜ್ಜಾಡಿಯಲ್ಲಿ 76ಜನರು ಬಿಜೆಪಿ ಸೇರಿದರೆ, ಮರವಂತೆ, ತ್ರಾಸಿ, ನಾವುಂದ, ಕಂಬದಕೋಣೆ, ಶಿರೂರು ಸೇರಿದಂತೆ ಕ್ಷೇತ್ರಾದ್ಯಂತ ಇನ್ನಷ್ಟು ಕಾಂಗ್ರೆಸ್ ಬೆಂಬಲಿತರು ಪಕ್ಷದ ನಿರ್ಧಾರದಿಂದ ಬೇಸರಗೊಂಡು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಸದಾನಂದ ಉಪ್ಪಿನಕುದ್ರು ಮಾಹಿತಿ ನೀಡಿದರು.
ಕ್ಷೇತ್ರದ ಜನರ ಭವಿಷ್ಯಕ್ಕಾಗಿ ಶ್ರಮಿಸುತ್ತೇನೆ
ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ಕ್ಷೇತ್ರದಲ್ಲಿ ತಿರುಗಾಡುತ್ತಿರುವಾಗ ಬಡವರ ಸಣ್ಣ ಸಣ್ಣ ಕೆಲಸಗಳಿಗೂ ತೊಂದರೆ ಮಾಡುವುದು,ಪೀಡಿಸುವ ದೂರುಗಳು ಬಂದಿವೆ, ಎಲ್ಲರಿಗೂ ಒಂದು ಆಶ್ವಾಸನೆ ನೀಡುತ್ತೇನೆ ಯಾವುದೇ ಜನರನ್ನು ಸತ್ತಾಯಿಸುವುದು, ಲಂಚಾಕ್ಕಾಗಿ ತೊಂದರೆ ಆದರೆ ಸಹಿಸುವುದಿಲ್ಲ ಕ್ಷೇತ್ರದ ಜನರ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತೇನೆ. ಉದ್ಯೋಗ ಸೃಷ್ಠಿ, ಆಸ್ಪತ್ರೆಯಲ್ಲಿ ಸೂಕ್ತ ಹಾಗೂ ತ್ವರಿತಗತಿಯಲ್ಲಿ ಸೇವೆ ಒದಗಿಸುವವುದಕ್ಕೆ ಅಗತ್ಯ ಕ್ರಮಕೈಗೊಳ್ಳುವುದು, ಹಕ್ಕುಪತ್ರ, ಡಿಮ್ಡ್ಫಾರೆಸ್ಟ್ ಸಮಸ್ಯೆಗೆ ಪರಿಹಾರ, ಇಲಾಖೆಗಳಿಂದ ಜನರಿಗೆ ತಲುಪಬೇಕಾದ ಯೋಜನೆಗಳು ಸಮರ್ಪಕವಾಗಿ ನೀಡಲು ದಣಿವರಿಯದೆ ಸೇವಕನಾಗಿ ದುಡಿಯುತ್ತೇನೆ ಇದು ನನ್ನ ಸಂಕಲ್ಪ ಎಂದರು.
ದೇಶ, ರಾಜ್ಯದಲ್ಲಿ ಸೇವಾ ಚಟುವಟಿಕೆಯಲ್ಲಿ ತೋಡಗಿಸಿಕೊಂಡಿರುವ ಬಜರಂಗದಳವನ್ನು ನಿಷೇಧ ಮಾಡುವುದು ಬಿಡಿ, ನಮ್ಮ ಕ್ಷೇತ್ರದಲ್ಲಿ ಒಬ್ಬ ಕಾರ್ಯಕರ್ತರನ್ನು, ಹಿಂದೂಗಳನ್ನು ಮುಟ್ಟಲು ಸಾಧ್ಯವೇ ನೋಡಿ. ಕ್ಷೇತ್ರದ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿರುವೆ ಕ್ಷೇತ್ರ ಪಾಲಕನಾಗಿ ಸೇವೆಗೈಯುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.