ಜನಹಿತವೇ ನನ್ನ ದೌರ್ಬಲ್ಯ: ಮಧ್ವರಾಜ್
Team Udayavani, Apr 3, 2019, 10:40 AM IST
ಕುಂದಾಪುರ: ಶಾಸಕನಾಗಿದ್ದಾಗ ನನ್ನ ಕ್ಷೇತ್ರದ ಮತದಾರರ ಹಿತ ಕಾಯುವ ಸ್ವಾರ್ಥಿಯಾಗಿದ್ದೆ. ಅದು ನನ್ನ ದೌರ್ಬಲ್ಯ ಎಂದು ಅಪಪ್ರಚಾರಕ್ಕೆ ಕಾರಣ ವಾಯಿತು. ಈಗ ನನ್ನ ಸ್ವಾರ್ಥ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ವ್ಯಾಪಿಸಲಿದೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಮಂಗಳವಾರ ಆರ್.ಎನ್. ಶೆಟ್ಟಿ ಹಾಲ್‌ನ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕಾರ್ಯಕರ್ತರು ಮನಸ್ಸು ಮಾಡಿದರೆ ಅಭ್ಯರ್ಥಿ ಯನ್ನು ಗೆಲ್ಲಿಸಬಹುದು, ಸೋಲಿಸಬಹುದು. ಮರಳು ಗಾರಿಕೆ, ರಾಷ್ಟ್ರೀಯ ಹೆದ್ದಾರಿ, ಮೀನುಗಾರರ ನಾಪತ್ತೆ, ಕಸ್ತೂರಿ ರಂಗನ್ ವರದಿ, ಮೀನುಗಾರಿಕೆಗೆ ಸಬ್ಸಿಡಿ ಹೀಗೆ ಯಾವುದಕ್ಕೂ ಸ್ಪಂದಿಸದ ಶೋಭಾ ಈಗ ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ ಎಂದರು.
ಸಚಿವೆ ಡಾ| ಜಯಮಾಲಾ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಾಯಕರು ಆತ್ಮ, ಕಾರ್ಯಕರ್ತರು ಉಸಿರು. ಮೋದಿ ಕುರಿತು ಹುಚ್ಚೆದ್ದು ಕುಣಿವ ಯುವಜನತೆಗೆ ಅವರ ಸರಕಾರ ದ್ರೋಹ ಮಾಡಿದ್ದು ತಿಳಿದಿಲ್ಲ. ಶೋಭಾ ಈ ಜಿಲ್ಲೆಯ ಭತ್ತದ ಬೆಳೆಗಾರರಿಗೆ, ಮೀನುಗಾರರಿಗೆ, ಮರಳಿನ ಸಮಸ್ಯೆ ನಿವಾರಣೆಗೆ ಕೊಟ್ಟ ಕೊಡುಗೆ ಏನು? ಕ್ಷೇತ್ರದ ಜನತೆಗೆ ಸಿಗದೆ ಮೋಸ ಮಾಡುವ ಅವರ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎ. ಗಫೂರ್ ಮತ್ತು ಪ್ರಮುಖ ನಾಯಕರು ಇದ್ದರು.
ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ, ನಾರಾಯಣ ಆಚಾರ್ ನಿರ್ವಹಿಸಿ, ಹಿರಿಯಣ್ಣ ವಂದಿಸಿದರು.
ಸಭೆಯಲ್ಲಿ ಗೊಂದಲ
ಕೆಪಿಸಿಸಿ ಪದಾಧಿಕಾರಿ ಎಂ.ಎ. ಗಫೂರ್ ಭಾಷಣ ಮಾಡುವಾಗ ಕಾರ್ಯಕರ್ತರು ಅಡ್ಡಿ ಮಾಡಿ ಧಿಕ್ಕಾರ ಕೂಗಿದರು. ಉಡುಪಿಯ ಪಕ್ಷದ ಸಭೆಯಲ್ಲಿ ವಿ.ಪ. ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವನ್ನು ಗಫೂರ್ ಅವಮಾನಿಸಿದ್ದು, ಇಲ್ಲಿ ಅವರಿಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು. ಬಳಿಕ ಸಚಿವೆ ಡಾ| ಜಯಮಾಲಾ ಸಮಾಧಾನ ಪಡಿಸಿ, ಶೆಟ್ಟರನ್ನು ಅವಮಾನಿಸಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ ಎಂದರು. ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.