ಅಡಿಕೆ ಕಳ್ಳಸಾಗಣೆ ತಡೆಯೇ ಮೊದಲ ಆದ್ಯತೆ; ಕ್ಯಾಂಪ್ಕೊ ನೂತನ ಅಧ್ಯಕ್ಷ ಕೊಡ್ಗಿ


Team Udayavani, Dec 15, 2020, 5:31 AM IST

KISHOR-KODGI

ಕುಂದಾಪುರ: ಅಡಿಕೆ ಬೆಳೆಗಾರರ ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಕಿಶೋರ್‌ ಕುಮಾರ್‌ ಕೊಡ್ಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂರು ಅವಧಿಗೆ ನಿರ್ದೇಶಕ ರಾಗಿದ್ದ ಅವರು ನಾಲ್ಕನೇ ಅವಧಿಗೂ ನಿರ್ದೇಶಕರಾಗಿದ್ದಾರೆ. ಕ್ಯಾಂಪ್ಕೊದ ಅಧ್ಯಕ್ಷರಾಗುತ್ತಿ ರುವ ಉಡುಪಿ ಜಿಲ್ಲೆಯ ಮೊದಲಿಗರು. ಕ್ಯಾಂಪ್ಕೊ ಮಂಡಳಿಗೆ ಆಯ್ಕೆಯಾದ ಜಿಲ್ಲೆಯ ಮೊದಲ ಪ್ರತಿನಿಧಿಯೂ ಹೌದು. ಪ್ರಸ್ತುತ ಕಿಶೋರ್‌ ಕೊಡ್ಗಿ ಮತ್ತು ಕಾರ್ಕಳದ ದಯಾನಂದ ಹೆಗಡೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಕಿಶೋರ್‌ ಮುತ್ಸದ್ದಿ ರಾಜಕಾರಣಿ, ಹಿರಿಯ ಸಹಕಾರಿ, 3ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ಪುತ್ರ.

ವಿದೇಶಗಳಿಂದ ಅಡಿಕೆ ಕಳ್ಳ ಆಮದು, ಗುಟ್ಕಾ ನಿಷೇಧದ ತೂಗು ಗತ್ತಿ, ಅಡಿಕೆ ಖರೀದಿ ಸಂಬಂಧ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪ – ಹೀಗೆ ಅಡಿಕೆ ಬೆಳೆಗಾರರ ಹಿತ ಕಾಯಬೇಕಾದ ಹತ್ತು ಹಲವು ಸವಾಲುಗಳು ಕಿಶೋರ್‌ ಅವರ ಮುಂದಿವೆ. ಈ ಹಿನ್ನೆಲೆಯಲ್ಲಿ ಕಿಶೋರ್‌ ಕೊಡ್ಗಿ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಅಧ್ಯಕ್ಷರಾಗುವ ನಿರೀಕ್ಷೆ ಇತ್ತೇ?
ಇರಲಿಲ್ಲ; ಆಪೇಕ್ಷೆಯೂ ಇರಲಿಲ್ಲ. ಹಿರಿಯರೆಲ್ಲರ ಒತ್ತಾಯದ ಮೇರೆಗೆ ಈ ಹುದ್ದೆ ಯನ್ನು ಒಪ್ಪಿಕೊಂಡಿದ್ದೇನೆ. ಅವಕಾಶ ಕೊಟ್ಟಿದ್ದಾರೆ; ಬೆಳೆಗಾರರಿಗೆ ಒಳಿತಾಗುವ ಕಾರ್ಯವನ್ನು ಮಾಡುವೆ.

ಬೆಲೆ ಏರಿಕೆಯಿಂದಾಗಿ ಅಡಿಕೆ ಬೆಳೆಗಾರರು ಹೆಚ್ಚುತ್ತಿದ್ದಾರೆ. ಇದು ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದೇ?
ಧಾರಣೆ ಏರಿಕೆಯಿಂದಾಗಿ ಮಲೆನಾಡು, ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಬಯಲು ಸೀಮೆ ಯಲ್ಲೂ ಅಡಿಕೆ ಬೆಳೆಯು ವವರ ಸಂಖ್ಯೆ ಹೆಚ್ಚುತ್ತಿದೆ. ಗದ್ದೆ, ಗುಡ್ಡಗಳು ಅಡಿಕೆ ತೋಟಗಳಾಗಿ ಬದಲಾಗುತ್ತಿವೆ. ಇದು ಭವಿಷ್ಯದ ದೃಷ್ಟಿಯಿಂದ ಆತಂಕವೂ ಹೌದು. ಯಾಕೆಂದರೆ ಅಡಿಕೆಗೆ ಈಗಿರುವ ಬೆಲೆ ಸ್ಥಿರವಾಗಿರುತ್ತದೆ ಎನ್ನಲಾಗದು. ಹಾಗಾಗಿ ಅಡಿಕೆ ಬೆಳೆಗಾರರು ಕೊಕ್ಕೊ, ಕಾಳುಮೆಣಸಿನಂತಹ ಪರ್ಯಾಯ ಬೆಳೆಗಳತ್ತಲೂ ಯೋಚನೆ ಮಾಡಬೇಕಿದೆ. ಹಿಂದೆ ರಬ್ಬರ್‌ ಬೆಲೆ ಏರಿಕೆಯಾದಾಗಲೂ ಹೀಗೆ ಆಗಿತ್ತು. ಈಗ ರಬ್ಬರ್‌ ಬೆಳೆ ಪಾತಾಳಕ್ಕೆ ಕುಸಿದಿದ್ದು, ಮತ್ತೆ ಅಡಿಕೆಯತ್ತ ಮನಸ್ಸು ಮಾಡಿದ್ದಾರೆ. ಹಾಗಾಗಿ ರೈತರು ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸಬೇಕಿದೆ.

ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರಕ್ಕೆ ಬೇಡಿಕೆ ಇದೆಯೆ?
ಕುಂದಾಪುರದಲ್ಲಿ ಕುಂದಾಪುರ, ಸಿದ್ದಾಪುರ, ಕಾರ್ಕಳದಲ್ಲಿ ಕಾರ್ಕಳ ಮತ್ತು ಹೆಬ್ರಿ ಸಹಿತ ಜಿಲ್ಲೆಯಲ್ಲಿ ನಾಲ್ಕು ಅಡಿಕೆ ಖರೀದಿ ಕೇಂದ್ರಗಳಿವೆ. ಕ್ಯಾಂಪ್ಕೊ ಸಂಸ್ಥೆಯಡಿ ಒಟ್ಟಾರೆ 74 ಖರೀದಿ ಕೇಂದ್ರಗಳಿವೆ. ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರದ ಬೇಡಿಕೆಯನ್ನು ಶಾಸಕರು ಮುಂದಿರಿಸಿದ್ದಾರೆ. ಆದರೆ ಅಲ್ಲಿ ಮಾಡಿದರೆ ಅಷ್ಟೇನು ಪ್ರಯೋಜನಕ್ಕೆ ಬಾರದು. ಹಾಗಾಗಿ ಬ್ರಹ್ಮಾವರದಲ್ಲಿ ಖರೀದಿ ಕೇಂದ್ರ ಆರಂಭಿಸುವ ಚಿಂತನೆಯಿದೆ.

ಖಾಸಗಿ ಮಾರುಕಟ್ಟೆಯ ಬೆಲೆ ಇಳಿಸುವ ತಂತ್ರಕ್ಕೆ ಕ್ಯಾಂಪ್ಕೊದಿಂದ ಕಡಿವಾಣ ಸಾಧ್ಯವೇ?
ಖಾಸಗಿ ಮಾರುಕಟ್ಟೆಗಳಲ್ಲಿ ಆಗಾಗ ಬೆಲೆ ಕಡಿಮೆ ಮಾಡುವ ತಂತ್ರಗಳು ನಡೆಯುತ್ತವೆ. ಇದನ್ನು ಬೆಳೆಗಾರರು ಅರಿತು ಅಡಿಕೆ ಯನ್ನು ಕ್ಯಾಂಪ್ಕೊಗೆ ಹೆಚ್ಚೆಚ್ಚು ಮಾರಿದರೆ ಸಂಸ್ಥೆಯ ಸ್ಥಿರ ಆದಾಯವು ಹೆಚ್ಚಲಿದೆ. ಇದರಿಂದ ಬೆಲೆ ನಿಯಂತ್ರಣಕ್ಕೂ ಪ್ರಯತ್ನಿಸಬಹುದು.

 ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?
ಸಂಸ್ಥೆಯಲ್ಲಿ 1.20 ಲಕ್ಷ ಅಡಿಕೆ ಬೆಳೆಗಾರ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರ ಮೃತಪಟ್ಟರೆ ಆ ಕುಟುಂಬಕ್ಕೆ ಕನಿಷ್ಠ 3 ಲಕ್ಷ ರೂ. ವಿಮೆ ಕೊಡುವ ಮಹತ್ವದ ಕನಸಿದೆ. ಅಡಿಕೆ ಕೃಷಿಗೆ ಹೆಚ್ಚೆಚ್ಚು ಯಂತ್ರೋಪಕರಣ ಬಳಸುವ ನಿಟ್ಟಿನಲ್ಲಿ ರೈತರಿಗೆ ಕಾರ್ಯಾಗಾರ ನಡೆಸಲಾಗುವುದು. ಪುತ್ತೂರು ಬಳಿ ಕಾವು ಎನ್ನುವಲ್ಲಿ 25 ಕೋ.ರೂ. ವೆಚ್ಚದ ಸುಸಜ್ಜಿತ ಗೋದಾಮು ಆರಂಭವಾಗಲಿದೆ.

ಆಮದು ಅಲ್ಲವೇ ಅಲ್ಲ
ಅಡಿಕೆ ಆಮದು ಅಲ್ಲ. ಒಂದು ರೀತಿಯಲ್ಲಿ ಅಡಿಕೆ ಸ್ಮಗ್ಲಿಂಗ್‌ ನಡೆಯುತ್ತಿದೆ. ಮ್ಯಾನ್ಮಾರ್‌ ಮತ್ತಿತರ ದೇಶಗಳಿಂದ ಹೆಚ್ಚೆಚ್ಚು ಅಡಿಕೆಯನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ಪ್ರಯತ್ನಿಸುವುದೇ ನಮ್ಮ ಮೊದಲ ಆದ್ಯತೆ. ಅದಕ್ಕೆ ಪ್ರಸ್ತುತ ಇರುವ 251 ರೂ. ಕನಿಷ್ಠ ದರವನ್ನು 300 ರೂ.ಗೆ ಏರಿಸಿದರೆ, ಶೇ. 33ರಷ್ಟು ತೆರಿಗೆ ಸೇರಿ, 390 ರೂ.ವರೆಗೂ ಬೆಲೆ ಏರುತ್ತದೆ. ಇದರಿಂದ ನಮ್ಮ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರ ಮೂಲಕ ಕೇಂದ್ರಕ್ಕೆ ಒತ್ತಡ ತರಲಾಗುವುದು. ಅಡಿಕೆ ಆಮದು ನಿಷೇಧಕ್ಕೂ ಕ್ಯಾಂಪ್ಕೊ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ.

ತನಿಖೆಯಿಂದ ಸತ್ಯಾಂಶ ಬಯಲು
ಮೂವರು ನಿರ್ದೇಶಕರಿಂದ ಮಾರುಕಟ್ಟೆಗಿಂತ ಹೆಚ್ಚು ದರಕ್ಕೆ ಅಡಿಕೆಯನ್ನು ಖರೀದಿಸಲಾಗಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದಾಗಿಯೂ ಸಂಶಯ ನಿವಾರಣೆಯ ಸಲುವಾಗಿ ಹಿಂದಿನಅಧ್ಯಕ್ಷರೇ ಸಭೆಯಲ್ಲಿ ತಿಳಿಸಿದಂತೆ, ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ. ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ.

 ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.