![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, May 11, 2020, 5:30 AM IST
ಸಿದ್ದಾಪುರ: ಲಾಕ್ ಡೌನ್‌ನಿಂದ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಜನರು ಲಾಕ್‌ಡೌನ್ ಸಡಿಲಿಕೆಯಿಂದ ಉಡುಪಿ ಜಿಲ್ಲೆಗೆ ಸುಮಾರು 50 ಸಾವಿರ ಜನರು ಬರುವ ನಿರೀಕ್ಷೆ ಇದ್ದರೂ ಉಡುಪಿ ಜಿಲ್ಲೆಯ ಹೊಸಂಗಡಿ ಗಡಿಯೊಂದರಲ್ಲೇ ಮೇ 4ರಿಂದ ಮೇ 10ರ ಸಂಜೆ 5 ಗಂಟೆ ತನಕ ಹೊಸಂಗಡಿ ಚೆಕ್‌ಪೋಸ್ಟ್ ಮೂಲಕ ಜಿಲ್ಲೆಯ ಒಳ ಭಾಗಕ್ಕೆ 1,927 ಮಂದಿ ಬಂದಿದ್ದಾರೆ. ಇದರಲ್ಲಿ ಹೊರ ರಾಜ್ಯದಿಂದ 80 ಮಂದಿ ಹಾಗೂ ಹೊರ ಜಿಲ್ಲೆಯಿಂದ 1,847 ಮಂದಿ ಗಡಿಯ ಮೂಲಕ ಜಿಲ್ಲೆಯ ಒಳ ಭಾಗಕ್ಕೆ ಬಂದಿದ್ದಾರೆ. ಹೊರ ಜಿಲ್ಲೆಗಳಿಂದ ಬಂದ ವ್ಯಕ್ತಿಗಳಿಗೆ ಕ್ವಾರೆಂಟೈನ್ ಇಲ್ಲದಿರುವುದು ಹಾಗೂ ಕ್ವಾರೆಂಟೈನ್ ಸೀಲ್ ಕೂಡ ಹಾಕದಿರುದರಿಂದ ಕೋವಿಡ್-19 ಸೋಂಕಿತರಿಂದ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ.
ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಜತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ಹಗಲು ರಾತ್ರಿ ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಗಡಿಯಲ್ಲಿ 19 ಸಿಬಂದಿಗಳ ಕರ್ತವ್ಯ
ಚೆಕ್ ಪೋಸ್ಟ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಸೇರಿದಂತೆ 19 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್, ಆರೋಗ್ಯ, ಕಂದಾಯ, ಅರಣ್ಯ, ಪಂಚಾಯತ್, ತೋಟಗಾರಿಕೆ, ಶಿಕ್ಷಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಸರತಿಯ ಪ್ರಕಾರ ಚೆಕ್ ಪೋಸ್ಟ್‌ನಲ್ಲಿ ಪ್ರಮುಖವಾಗಿ ಇಬ್ಬರು ಸರಕಾರಿ ವೈದ್ಯರು, ಇಬ್ಬರು ಪೊಲೀಸ್ ಉಪನಿರೀಕ್ಷರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕ ಅನಿಲ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಯಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕ ಶ್ರೀಧರ್ ನಾಯ್ಕ ಹಾಗೂ ಕಂಡ್ಲೂರು ಪೊಲೀಸ್ ಠಾಣೆಯ ಸಿಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಕಡೆಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು , ಆರೋಗ್ಯ ಸಹಾಯಕಿಯರು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಒಳ ಬರುವವರ ಸ್ಕ್ರೀನಿಂಗ್ ನಡೆಸುತ್ತಿದ್ದಾರೆ.
ಕಾಲು ನಡಿಗೆಯವರಿಂದ ತೊಂದರೆ
ಹೊಸಂಗಡಿ ಚೆಕ್ ಪೋಸ್ಟ್‌ನಲ್ಲಿ ಹೊರ ಜಿಲ್ಲೆಯವರನ್ನು ಪರವಾಗಿಗೆ ಇಲ್ಲದೆ ಜಿಲ್ಲೆಯ ಒಳ ಭಾಗಕ್ಕೆ ಬಿಡದೆ ಇರುವುದರಿಂದ, ಚೆಕ್ ಪೋಸ್ಟ್‌ನ ಅನತಿ ದೂರದಲ್ಲಿ ಬಾಳೆಬರೆ ಘಾಟಿಯ ಬದಿಯಲ್ಲಿ ಕಾಲು ನಡಿಗೆಯಿಂದ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಬಾಳೆಬರೆ ಘಾಟಿಯಲ್ಲಿರುವ ಕಾಲು ದಾರಿಗಳನ್ನು ಬಂದ್ ಮಾಡಿದರೂ ಕೂಡ, ಆಗಾಗ ಒಂದೊಂದು ಘಟನೆ ನಡೆಯುತ್ತಿರುತ್ತದೆ. ಕಾಲು ನಡಿಗೆಯಿಂದ ಹೊಸಂಗಡಿ ಪೇಟೆಗೆ ಬಂದವರನ್ನು ಸಂಬಂಧಿಕರು ತಮ್ಮ ವಾಹನಗಳ ಮೂಲಕ ತಮ್ಮ ಊರುಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕಾಲುನಡಿಗೆಯಿಂದ ಹೊರ ರಾಜ್ಯ ಹಾಗೂ ಬೆಂಗಳೂರಿನಿಂದ ಹೀಗೆ ಬರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಾಮಿಸುತ್ತಿವೆ. ಇದರ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಗಡಿಯಲ್ಲಿ 2ಚೆಕ್ ಪೋಸ್ಟ್
ಜಿಲ್ಲೆಗೆ 50ಸಾವಿರ ಜನರು ಬರುವ ನಿರೀಕ್ಷೆ ಇರುವುದರಿಂದ ಗಡಿಯಲ್ಲಿ ಜನರ ಸಂದಣಿಯಾಗ ಬಾರದೆಂದು ಇರುವ ಚೆಕ್ ಪೋಸ್ಟ್‌ನೊಂದಿಗೆ ಮತ್ತೊಂದು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಸದ್ಯ ಬರುವವ ಸಂಖ್ಯೆ ಕಡಿಮೆಯಾದುದರಿಂದ ಒಂದು ಚೆಕ್ ಪೋಸ್ಟ್ ಮಾತ್ರ ಕಾರ್ಯಚರಿಸುತ್ತಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಿ, ಗಡಿಯ ಒಳ ಭಾಗಗಕ್ಕೆ ಬಿಡಲಾ ಗುತ್ತಿದೆ. ಇದರಿಂದ ಸಹಜವಾಗಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಮತ್ತು ಜನರ ಸಂದಣಿ ಹೆಚ್ಚಾಗುವ ಸಾಧ್ಯತೆ ಇರುದರಿಂದ ಜನರಿಗೆ ತೊಂದರೆಯಾಗುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಡಿಯಲ್ಲಿ ಇರುವ ಚೆಕ್ ಪೋಸ್ಟ್‌ನೊಂದಿಗೆ ಮತ್ತೊಂದು ಚೆಕ್ ಪೋಸ್ಟ್ ವ್ಯವಸ್ಥೆ ಮಾಡಿದೆ.
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.