ಅಳ್ವೆಗದ್ದೆ ರೈಲ್ವೇ ಸೇತುವೆ: ತ್ಯಾಜ್ಯ ರಾಶಿ
Team Udayavani, Jun 20, 2020, 5:22 AM IST
ಬೈಂದೂರು: ಸಾರ್ವಜನಿ ಕರ ನಿಷ್ಕಾಳಜಿಯಿಂದಾಗಿ ಶಿರೂರು ಅಳ್ವೆಗದ್ದೆ ರಸ್ತೆಯ ರೈಲ್ವೇ ಸೇತುವೆ ಕೆಳಭಾಗ ಕಸ ವಿಲೇವಾರಿ ಸ್ಥಳದಂತಾಗಿದೆ. ಈಗಾಗಲೇ ಹಲವು ಬಾರಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಲಾಗಿದೆ. ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಕಸ ಎಸೆಯುವುದು ಪುನರಾವರ್ತನೆಯಾಗುತ್ತಿದೆ.
ಗ್ರಾಮ ಪಂಚಾಯತ್ ಕೂಡ ಸ್ವಚ್ಚತೆಗಾಗಿ ಹಲವು ಕ್ರಮ ಕೈಗೊಂಡಿದೆ.ಆದರೆ ವ್ಯಾಪ್ತಿ ದೊಡ್ಡದಾಗಿರುವ ಕಾರಣ ಒಂದು ಕಸದ ವಾಹನದಲ್ಲಿ ಕಸ ಸಂಗ್ರಹಿಸುವುದು ದುಸ್ತರವಾಗಿದೆ.
ಈಗಾಗಲೇ ಒಂದು ವಾಹನವನ್ನು ದಾನಿಗಳಾದ ಎಂ.ಎಂ. ಹೌಸ್ ವತಿಯಿಂದ ನೀಡಿದ್ದು ಪಂಚಾಯತ್ ಜಿಲ್ಲಾಡಳಿತಕ್ಕೆ ಮನವಿ ಮಾಡುವ ಮೂಲಕ ಸರಕಾರದಿಂದ ಸರಕಾರದಿಂದ ಇನ್ನೊಂದು ವಾಹನ ವ್ಯವಸ್ಥೆ ಮಾಡಬೇಕಿದೆ.
ಫಲಕ ಕಿತ್ತೆಸೆಯಲಾಗಿದೆ
ಈಗಾಗಲೇ ಅಳ್ವೆಗದ್ದೆ ರೈಲ್ವೇ ಸೇತುವೆ ಬಳಿ ಎರಡೆರೆಡು ಬಾರಿ ಸ್ವಚ್ಚತಾ ಕಾರ್ಯ ನಡೆಸಲಾಗಿದೆ.ಮಾತ್ರವಲ್ಲದೆ ಕಸ ಎಸೆಯದಂತೆ ಫಲಕ ಅಳವಡಿಸಲಾಗಿದೆ. ಆದರೆ ಕಿಡಿಗೇಡಿಗಳು ಫಲಕವನ್ನು ತೆಗೆದು ಕಸ ಹಾಕುತ್ತಿದ್ದಾರೆ.ಈ ಬಗ್ಗೆ ಪಂ. ಗಮನಕ್ಕೆ ಬಂದಿದೆ.ಈಗಿರುವ ಕಸವನ್ನು ಪಂ. ವತಿಯಿಂದ ವಿಲೇವಾರಿ ಮಾಡುವ ಬಗ್ಗೆ ತಿಳಿಸುತ್ತೇನೆ. ಸಾರ್ವಜನಿಕರು ಕೂಡ ಜವಬ್ದಾರಿ ವಹಿಸಿಕೊಳ್ಳಬೇಕಾಗಿದೆ.
-ನಾಗೇಶ್ ಮೊಗೇರ್, ಉಪಾಧ್ಯಕ್ಷರು,ಗ್ರಾ.ಪಂ. ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.