ಮಳೆಹಾನಿ: ತುರ್ತು ಪರಿಹಾರ ಕ್ರಮಕ್ಕೆ ಸೂಚನೆ
Team Udayavani, Jun 21, 2019, 12:03 PM IST
ಕುಂದಾಪುರ, ಜೂ. 20: ಮಳೆಗಾಲದ ಸಂದರ್ಭದಲ್ಲಿ ಮಳೆಗಾಳಿ ಪ್ರವಾಹದಿಂದ ಯಾವುದೇ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗಬಹುದಾದ ಹಾನಿ ನಷ್ಟ್ಟ ಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮುನ್ನೆಚ್ಚರಿಕೆ ನೀಡಲು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಾಕೃತಿಕ ವಿಕೋಪದದಿಂದ ಸಂಭವಿಸಬಹುದಾದ ಘಟನೆಗಳನ್ನು ಎದುರಿಸಲು ತಾಲೂಕು ಆಡಳಿತವು ಸರ್ವಸನ್ನದ್ಧವಾಗಿರುವುದಾಗಿ ಸಹಾಯಕ ಕಮಿಷನರ್ ಡಾ| ಎಸ್.ಎಸ್. ಮಧುಕೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಷ್ಟ್ರೀಯ ಹೆದ್ದಾರಿ ಅಪೂರ್ಣ ಕಾಮಗಾರಿ ಆಗುತ್ತಿರುವ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೊಳ್ಳದೆ ಸರಾಗವಾಗಿ ಹರಿದು ಹೋಗಲು ಕ್ರಮವಹಿಸುವಂತೆ, ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಡ್ರೈನೇಜ್ ಕಲ್ಪಿಸಬೇಕು ಎಂದು ಮುಖ್ಯಾಧಿಕಾರಿ ಹಾಗೂ ಪಿಡಿಓಗಳ ಸಹಕರಾರದೊಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನವಯುಗ ಕನ್‌ಸ್ಟ್ರಕ್ಷನ್ಸ್ ಹಾಗೂ ಐಆರ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗುಂಡಿ ಮುಚ್ಚಿಸಿ
ಸರಕಾರಿ ಸ್ಥಳದಲ್ಲಿರುವ ತೆರೆದ ಕೊಳವೆ ಬಾವಿ ಹಾಗೂ ಇಂಗುಗುಂಡಿ, ಕೊಜೆಹೊಂಡ, ಕಲ್ಲುಕೋರೆ ಹೊಂಡ ಇರುವಲ್ಲಿ ರೇಡಿಯಂನಿಂದ ಕೂಡಿರುವ ಫಲಕಗಳನ್ನು ಅಳವಡಿಸಬೇಕು. ಖಾಸಗಿ ಸ್ಥಳಗಳಲ್ಲಿರುವ ಅಪಾಯಕಾರಿ ಹೊಂಡಗಳನ್ನು ಸಂಬಂಧಪಟ್ಟ ಜಾಗದ ಮಾಲೀಕರಿಂದ ಮುಚ್ಚಿಸಬೇಕು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲು ಗ್ರಾಮ ಪಂಚಾಯತ್ ಅಭಿ ವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನಾದುರಸ್ತಿಯಲ್ಲಿರುವ ರಸ್ತೆ ಹಾಗೂ ಕಿರು ಸೇತುವೆಗಳ ರಿಪೇರಿ ಬಗ್ಗೆ ಕ್ರಮವಹಿಸುವಂತೆ, ಪ್ರಾಕೃತಿಕ ವಿಕೋಪದಡಿ ವಾಸ್ತವ್ಯದ ಮನೆ ಇತರ ಕಟ್ಟಡಗಳು ಹಾನಿಯಾದ ಬಗ್ಗೆ ಹಾನಿಯ ಶೇಕಡಾವಾರು ವರದಿ ಮತ್ತು ಅಂದಾಜು ನಷrವನ್ನು ಜರೂರು ವರದಿ ಮಾಡುವಂತೆ ತಿಳಿಸಲಾಯಿತು. ಎಲ್ಲೆಲ್ಲಿ ಕಾಲು ಸಂಕದಿಂದ ಮಕ್ಕಳು ಶಾಲೆಗೆ ಬರುತ್ತಾರೆ ಎಂಬುದರ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ.
ಶಾಲೆಗಳ ದುರಸ್ತಿ
ತೀರ ನಾದುರಸ್ತಿಯಲ್ಲಿರುವ ಅಪಾಯವುಂಟಾಗುವ ಸಾಧ್ಯತೆ ಇರುವ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ದುರಸ್ತಿಗಾಗಿ ಜಿ. ಪಂ.ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸ ಲಾಯಿತು. ಶಾಲಾ ವಠಾರವನ್ನು ಶುಚಿತ್ವದಿಂದ ಇರಿಸಿಕೊಂಡು ನೆರೆಪೀಡಿತ ಪ್ರದೇಶಗಳು, ಸಂತ್ರಸ್ತರ ತಾತ್ಕಾಲಿಕ ವಸತಿ ಹಾಗೂ ಗಂಜಿಕೇಂದ್ರ ನಿರ್ಮಿಸಲು ಶಾಲಾ ಕಟ್ಟಡಗಳನ್ನು ಒದಗಿಸಲು ಹಾಗೂ ತುರ್ತು ಸಂದರ್ಭದಲ್ಲಿ ಶಾಲಾ ಶಿಕ್ಷಕರನ್ನು ನೆರೆ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ಸೂಚಿಸಲಾಯಿತು.
ಗಂಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಊಟದ ವ್ಯವಸ್ಥೆ
ಬಗ್ಗೆ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ. ಶಾಲೆಗಳು ಪ್ರಾರಂಭವಾದ ಅನಂತರ ಪ್ರತಿದಿನ ಪ್ರಾರ್ಥನೆ ಮುಗಿದ ಅನಂತರ ಪ್ರಾಕೃತಿಕ ವಿಕೋಪದ ಬಗ್ಗೆ ತಿಳಿವಳಿಕೆ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು.
ನದಿ ಉಪನದಿ ಹರಿಯುವ ಪ್ರದೇಶಗಳಲ್ಲಿ ನಿಗಾ ವಹಿಸುವುದು ಹಾಗೂ ನದಿಪಾತ್ರದಲ್ಲಿ ವಾಸಿಸುವ ಗ್ರಾಮಸ್ಥರ ಬಗ್ಗೆ ತೀವ್ರ ನಿಗಾವಹಿಸಬೇಕು. ಮುಂಜಾಗ್ರತೆಯಾಗಿ ನೀರಿನ ಒಳಹರಿವು ಹಾಗೂ ಹೊರ ಹರಿವಿನ ಮಟ್ಟದ ಮಾಹಿತಿಯನ್ನು ನೀರಾವರಿ ಇಲಾಖೆಯವರು ನೀಡುವಂತೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.