ಉಡುಪಿಗನ ನೆರವು; ಶಿರಸಿಯಲ್ಲಿ ಮಳೆ ಕೊಯ್ಲು ಪ್ರಯೋಗ
Team Udayavani, Aug 22, 2019, 5:27 AM IST
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಉಡುಪಿ ಮೂಲದ ರೋಟರಿ ಮುಂದಾಳುವಿನ ದೂರದೃಷ್ಟಿ, ಇಚ್ಛಾಶಕ್ತಿಯಿಂದ ಮಳೆ ನೀರು ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಶಿರಸಿ ಎಂಇಎಸ್ ವಿದ್ಯಾಸಂಸ್ಥೆಯ ವಸತಿ ನಿಲಯಗಳ ವಿದ್ಯಾರ್ಥಿನಿಯರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ನೆರವಾಗಲು ಶಿರಸಿ ರೋಟರಿ ಕ್ಲಬ್ ನೇತೃತ್ವದಲ್ಲಿ ನೀರುಳಿಕೆ ಹಾಗೂ ನೀರಿಂಗಿಸುವ ಮಾದರಿ ನಿರ್ಮಾಣ ಮಾಡಲಾಗಿದ್ದು, ಆರು ಲಕ್ಷಕ್ಕೂ ಅಧಿಕ ಲೀಟರ್ ನೀರನ್ನು ಹಿಡಿದಿಟ್ಟು ಮರು ಬಳಕೆ ಮಾಡಲಾಗುತ್ತಿದೆ.
ನಾಲ್ಕು ಹಾಸ್ಟೆಲ್ಗಳಲ್ಲಿ 5 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಪ್ರತೀ ಹಾಸ್ಟೆಲ್ನಲ್ಲಿನ ಮೇಲ್ಛಾವಣಿಯ ನೀರು ಬೇರೆಲ್ಲೂ ಹರಿದು ಹೋಗದಂತೆ ಅದನ್ನು ಸೋಸಿ ಸ್ವಚ್ಛಗೊಳಿಸಿ 30ಕ್ಕೂಅಧಿಕ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ಬಟ್ಟೆ ತೊಳೆಯಲು, ಸ್ವಚ್ಛಗೊಳಿಸಲು, ಸ್ನಾನಕ್ಕೆ ಬಳಸಲು ಪಂಪ್ ಮಾಡಿಕೊಳ್ಳುತ್ತಿದ್ದಾರೆ. ಮಿಕ್ಕಿದ ಮಳೆ ನೀರನ್ನು ಭೂಮಿಯಲ್ಲಿ ಇಂಗುವ ವ್ಯವಸ್ಥೆ ಮಾಡಲಾಗಿದೆ.
58 ಲಕ್ಷ ರೂ. ವೆಚ್ಚ
ಯೋಜನೆಗೆ ಸುಮಾರು 58 ಲಕ್ಷ ರೂ. ತಗುಲಿದ್ದು ಎಂಇಎಸ್ ಶಿಕ್ಷಣ ಸಂಸ್ಥೆ ಮತ್ತು ರೋಟರಿ ಸಂಸ್ಥೆ ದೇಣಿಗೆಯನ್ನು ನೀಡಿವೆ.
ಉಡುಪಿ ಮೂಲದ ಅಮೆರಿಕದ ಪೆನ್ಸಿಲ್ವೇನಿಯಾದ ರೋಟರಿ ಸೆಂಟ್ರಲ್ ಚೆಸ್ಟರ್ ಕೌಂಟಿಯ ಸಕ್ರಿಯ ಸದಸ್ಯರಾದ ಡಾ| ವಸಂತ ಪ್ರಭು ಅವರು ರೋಟರಿ ನಿಧಿಯಿಂದ ಧನಸಹಾಯ ಒದಗಿಸಿದ್ದಾರೆ. ಭೂ ವಿಜ್ಞಾನಿ ಡಾ| ಜಿ.ವಿ. ಹೆಗಡೆ, ಅರುಣ ನಾಯಕ, ರೋಟರಿ ಮುಂದಾಳುಗಳಾದ ಅಧ್ಯಕ್ಷ ಪ್ರವೀಣ ಕಾಮತ್, ನೂತನ ಅಧ್ಯಕ್ಷ ಡಾ| ಶಿವರಾಮ ಕೆ.ವಿ., ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಶ್ಯಾಂಸುಂದರ ಭಟ್ಟ, ಪಾಂಡುರಂಗ ಪೈ ಸೇರಿದಂತೆ ಇತರರ ಸಹಕಾರ ಇದೆ.
ಡಾ| ವಸಂತ ಪ್ರಭು ನಮ್ಮ ಸಾಕಷ್ಟು ಯೋಜನೆಗಳಿಗೆ ನೆರವಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಅವರ ಕೊಡುಗೆ ಅನುಕರಣೀಯ. ಕೊಟ್ಟ ನೆರವಿನ ಯೋಜನೆ ಏನಾಯ್ತು ಎಂದೂ ಪರಿಶೀಲಿಸಿ ಫಲಾನುಭವಿಗಳಿಗೆ ಯೋಜನೆ ತಲುಪುವ ವರೆಗೆ ಅವರು ಆಸಕ್ತಿ ವಹಿಸುತ್ತಾರೆ ಎಂಬುದು ವಿಶೇಷ ಎಂದು ಶಿರಸಿ ಕ್ಲಬ್‌ನ ಮಾಜಿ ಅಧ್ಯಕ್ಷ ರಾಮಚಂದ್ರ ಪ್ರಭು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.