![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 16, 2022, 12:19 PM IST
ತೆಕಟ್ಟೆ: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರದಿಂದ ಉಡುಪಿಯ ಕೆಲ ರಸ್ತೆಗಳಲ್ಲಿ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.
ಶನಿವಾರ ರಸ್ತೆ ಮಧ್ಯ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ತುಂಬಿದ್ದರಿಂದ ಬಸ್ಸೂಂದು ಹೊಂಡದಲ್ಲಿ ಹೋಗಿ ಡಿವೈಡರ್ ಏರಿ ನಿಂತ ಘಟನೆ ತಾಲೂಕಿನ ಕುಂಭಾಶಿ ಕೊರವಡಿ ಕ್ರಾಸ್ ಸಮೀಪದಲ್ಲಿ ನಡೆದಿದೆ. ಇದರೊಂದಿಗೆ ಒಂದು ಒಮ್ನೀ ವಾಹನ ಸಹ ಹೊಂಡಕ್ಕೆ ಹಾರಿ ಟೈಯರ್ ಪಂಚರ್ ಆಗಿದೆ.
ಹೊಂಡದಲ್ಲಿನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ಗೋಚರವಾಗದೆ ಇಂತಹ ಅವಘಡಗಳಿಗೆ ಕಾರಣವಾಗಿದೆ.
ರಾ.ಹೆ.66 ರ ಹೊಂಡ ಗುಂಡಿಯ ಬಗ್ಗೆ ಉದಯವಾಣಿ ಜನಪರ ಕಾಳಜಿವಹಿಸಿ ಇತ್ತೀಚೆಗಷ್ಟೇ ವಿಸ್ತೃತವಾದ ವರದಿ ಪ್ರಕಟಿಸಿತ್ತು.
You seem to have an Ad Blocker on.
To continue reading, please turn it off or whitelist Udayavani.