ಹೊಂಡಮಯ ಹಾಲಾಡಿ-ಗೋಳಿಯಂಗಡಿ ರಾಜ್ಯ ಹೆದ್ದಾರಿ
Team Udayavani, Nov 14, 2021, 3:30 AM IST
ಹಾಲಾಡಿ: ಬೈಂದೂರು – ವಿರಾಜ ಪೇಟೆ ರಾಜ್ಯ ಹೆದ್ದಾರಿ-90ರ ಹಾಲಾಡಿ – ಗೋಳಿಯಂಗಡಿಯ ಮಧ್ಯದ ಹಾಲಾಡಿಯಿಂದ ಕಾಸಾಡಿಯವರೆಗಿನ ಸುಮಾರು 3 ಕಿ.ಮೀ. ದೂರದ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ. ಈ ಮಾರ್ಗದಲ್ಲಿ ವಾಹನ ಸವಾರರು ನಿತ್ಯ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಪ್ರತಿದಿನ ಸಾವಿರಾರು ವಾಹನ ಸಂಚರಿಸುವ ಈ ಮಾರ್ಗವು ಈಗ ಕಳೆದ 5-6 ತಿಂಗಳುಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರ ಗೊಂಡಿದೆ. ಈಗಲಾದರೂ ಎಚ್ಚೆತ್ತುಕೊಂಡು ಈ ಹಾಲಾಡಿಯಿಂದ ಕಾಸಾಡಿಯವರೆಗಿನ ಸುಮಾರು 3 ಕಿ.ಮೀ. ವರೆಗಿನ ರಸ್ತೆಗೆ ಮರು ಡಾಮರು ಕಾಮ ಗಾ ರಿ ಮಾಡಬೇಕು ಎನ್ನುವ ಬೇಡಿಕೆ ಈ ಸಾರ್ವಜನಿಕರದ್ದಾಗಿದೆ.
ಇದೇ ರಾಜ್ಯ ಹೆದ್ದಾರಿಯ ಬೆಳ್ವೆ, ಗೋಳಿಯಂಗಡಿ ವ್ಯಾಪ್ತಿಯಲ್ಲಿ ಈಗಾಗಲೇ ಸರ್ಕಲ್, ತಿರುವಿನ ವಿಸ್ತರಣೆ, ಮರು ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಲ್ಲಿಂದ ಈಚೆಗೆ ಹಾಲಾಡಿಯವರೆಗಿನ ರಸ್ತೆ ಮಳೆಯಿಂದಾಗಿ ಮತ್ತಷ್ಟು ಜರ್ಜರಿತವಾಗಿದೆ.
ಸಾರ್ವಜನಿಕರ ಆಕ್ರೋಶ :
ಹಾಲಾಡಿಯಿಂದ ಕಾಸಾಡಿಯವರೆಗಿನ 3 ಕಿ.ಮೀ. ವ್ಯಾಪ್ತಿಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಬೈಕ್ ಸವಾರರ ಪಾಡಂತೂ ಹೇಳತೀರ ದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿ ಈ ರೀತಿ ಹದಗೆಟ್ಟಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಹೆದ್ದಾರಿ :
ಈ ಭಾಗದ ಎರಡು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಶೃಂಗೇರಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಇದಲ್ಲದೆ ಕುಂದಾಪುರದಿಂದ ಹೆಬ್ರಿ, ಸೋಮೇಶ್ವರ, ಆಗುಂಬೆಗೆ ಹೋಗಬೇಕಾದರೂ ಇದು ಮುಖ್ಯ ರಸ್ತೆಯಾಗಿದೆ. ಇನ್ನೂ ಹಾಲಾಡಿಯಿಂದ ಬೆಳ್ವೆ, ಗೋಳಿಯಂಗಡಿ ಕಡೆಗೂ ಇದೇ ಮಾರ್ಗವಾಗಿ ನಿತ್ಯ ಸಹಸ್ರಾರು ಮಂದಿ ಸಂಚರಿಸುತ್ತಾರೆ. ಪ್ರತಿನಿತ್ಯ ಹತ್ತಾರು ಬಸ್‌ಗಳು ಈ ಮಾರ್ಗವಾಗಿ ಸಂಚರಿಸುತ್ತವೆ.
ಕಳೆದ ಬಾರಿ ಈ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯ ಗೋಳಿಯಂಗಡಿ, ಬೆಳ್ವೆಯಲ್ಲಿ ವಿಸ್ತ ರ ಣೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಹಾಲಾಡಿಯಿಂದ ಕಾಸಾಡಿ ಶಾಲೆಯವರೆಗಿನ ರಸ್ತೆಯ ಅಗಲೀಕರಣ ಕಾಮಗಾರಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಟೆಂಡರ್ ಆಗಿದೆ. ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇನ್ನೀಗ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. – ಹರ್ಷವರ್ಧನ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.