ವಾಹನ ಸಂಚಾರ ಬಿಡಿ; ನಡೆದುಕೊಂಡು ಹೋಗುವುದೇ ದೊಡ್ಡ ಸವಾಲು
ವಂಡ್ಸೆ - ಅಡಿಕೆಕೊಡ್ಲು ಸಂಪರ್ಕಿಸುವ ರಸ್ತೆ ಅವ್ಯವಸ್ಥೆ
Team Udayavani, Dec 6, 2021, 6:01 PM IST
ವಂಡ್ಸೆ: ಇಲ್ಲಿನ ಪೇಟೆಯಿಂದ ತುಸು ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ಮತ್ತು ಅಡಿಕೆಕೊಡ್ಲುವಿಗೆ ಸಂಧಿಸುವ ರಸ್ತೆಯು ಕೆಸರುಗದ್ದೆಯಂತಾಗಿದ್ದು, ವಾಹನ ಸಂಚಾರ ಬಿಡಿ, ನಡೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಂಡ್ಸೆ ಪೇಟೆಯಿಂದ ಈ ಮಾರ್ಗವು ಸುಮಾರು 2 ಕಿ.ಮೀ. ದೂರವಿದ್ದು, ಒಟ್ಟಾರೆ ಇಲ್ಲಿ 100 ಮನೆಗಳಿವೆ. ಅದರಲ್ಲೂ ವಂಡ್ಸೆ ಕಡೆಯಿಂದ ಆರಂಭದಲ್ಲಿ ಸುಮಾರು 100 ಮೀಟರ್ ವರೆಗೆ ರಸ್ತೆ ಗದ್ದೆಯಂತಾಗಿದೆ. ಅನೇಕ
ವರ್ಷದಿಂದ ಇಲ್ಲಿನ ಜನ ಈ ರಸ್ತೆಯ ಅಭಿವೃದ್ಧಿಗೆ ಒತ್ತಾಯಿಸು ತ್ತಿದ್ದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇದರಿಂದಾಗಿ ಈ ಮಾರ್ಗವನ್ನು ಆಶ್ರಯಿಸಿರುವವರು, ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುತ್ತ ಸಂಚರಿಸುತ್ತಿದ್ದಾರೆ.
ಭರವಸೆ ಮಾತ್ರ
ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ಭರವಸೆ ನೀಡಿ ತೆರಳುತ್ತಾರೆ. ಮಹಿಳೆಯರು, ಶಾಲೆಗೆ ಹೋಗುವ ಮಕ್ಕಳ ಸಂಕಷ್ಟ ಹೇಳತೀರದಾಗಿದೆ. ಗ್ರಾಮ ಸಭೆಯಲ್ಲೂ ಪ್ರತಿ ವರ್ಷ ಈ ರಸ್ತೆಯ ವಿಚಾರ ಪ್ರಸ್ತಾವವಾಗುತ್ತದೆ. ಮತ್ತೆ ನನೆಗುದಿಗೆ ಬೀಳುತ್ತದೆ. ಈ ರಸ್ತೆಗಾಗಿ ಕೆಲವರು ತಮ್ಮ ಸ್ವಂತ ಜಾಗವನ್ನು ಬಿಟ್ಟು ಕೊಟ್ಟಿದ್ದರು. ಇವರಿಗೂ ಈಗ ಮನೆ ತಲುಪಲು ಪ್ರಯಾಸಪಡಬೇಕಾದ ಪರಿಸ್ಥಿತಿ ಇಲ್ಲಿನಜನರದ್ದಾಗಿದೆ.
ಶಾಸಕ, ಸಂಸದರಿಗೆ ಪ್ರಸ್ತಾವನೆ
10 ವರ್ಷಗಳ ಹಿಂದೆ ಈ ಊರಿಗೆ ಸಂಪರ್ಕ ರಸ್ತೆಯನ್ನು ಪಂಚಾಯತ್ ವತಿಯಿಂದ ಮಾಡಲಾಗಿತ್ತು. ಆದರೆ ಸುಮಾರು 2 ಕಿ.ಮೀ. ದೂರದ ಈ ರಸ್ತೆಯ ಅಭಿವೃದ್ಧಿ ಪಂಚಾಯತ್ ಅನುದಾನದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪಂಚಾಯತ್‌ನಿಂದ ಈಗಾಗಲೇ ಶಾಸಕರು ಹಾಗೂ ಸಂಸದರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದಲ್ಲಿ ಕಾಂಕ್ರೀಟ್ ರಸ್ತೆ ಮಾಡಬಹುದು.
-ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.