3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ


Team Udayavani, Sep 19, 2021, 8:30 AM IST

3 ತಿಂಗಳಿಂದ ಸಿಕ್ಕಿಲ್ಲ ವೇತನ! :  ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ

ಕುಂದಾಪುರ: ಗ್ರಾಮೀಣ ಗ್ರಂಥಾಲಯಗಳ ಗ್ರಂಥಪಾಲಕರು ತಮ್ಮ ಮಾಸಿಕ ವೇತನ ಹೆಚ್ಚಾಯಿತೆಂದು ಸಂಭ್ರಮಿಸಬೇಕಾದ ಹೊತ್ತಿನಲ್ಲೇ ಹಳೇ ಸಂಬಳವೂ ಬಾರದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿದ್ದ ಗ್ರಾ.ಪಂ.ಗಳ ಗ್ರಂಥಾಲಯಗಳನ್ನು 2019ರಲ್ಲಿ ಪಂಚಾಯತ್‌ ರಾಜ್‌ ಇಲಾಖೆಗೆ ವರ್ಗಾಯಿಸಲಾಗಿತ್ತು. ಇಲಾಖೆ ಬದಲಾದರೂ ವೇತನ ಮಾತ್ರ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಮೂರು ತಿಂಗಳಿನಿಂದಂತೂ ಹಿಂದೆ ಸಿಗುತ್ತಿದ್ದ ವೇತನ ಬಂದಿಲ್ಲ.

ಉಡುಪಿ ಹಾಗೂ ದ.ಕ. ಜಿಲ್ಲೆಗಳ 345 ಸೇರಿದಂತೆ ರಾಜ್ಯದಲ್ಲಿರುವ ಗ್ರಾ.ಪಂ.ಗಳ ಅಧೀನದ ಗ್ರಂಥಾಲಯಗಳಲ್ಲಿ ಒಟ್ಟು 5,623 ಮಂದಿ ಗ್ರಂಥಪಾಲಕರಿದ್ದಾರೆ.

ಗ್ರಾಮೀಣ ಗ್ರಂಥಪಾಲಕರಿಗೆ ಮಾಸಿಕ 7 ಸಾವಿರ ರೂ. ನೀಡು ತ್ತಿದ್ದು, ಜೂನ್‌ನಿಂದ 12 ಸಾವಿರ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಗ್ರಂಥಾಲಯದ ಅವಧಿಯನ್ನೂ ಹೆಚ್ಚಿಸಲಾಗಿದೆ. ಹಿಂದೆ ದಿನಕ್ಕೆ 4 ಗಂಟೆ ಮಾತ್ರವಿದ್ದರೆ ಈಗ ಬೆಳಗ್ಗೆ 9ರಿಂದ 1ರ ವರೆಗೆ ಅಪರಾಹ್ನ 3ರಿಂದ 5ರ ವರೆಗೆ ತೆರೆದಿಡಬೇಕಿದೆ.

345 ಗ್ರಾಮೀಣ ಗ್ರಂಥಾಲಯ:

ಉಡುಪಿಯಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ ಒಟ್ಟು 155 ಸಾರ್ವಜನಿಕ ಹಾಗೂ 8 ನಗರ ಕೇಂದ್ರಗಳಲ್ಲಿ ಗ್ರಂಥಾಲಯಗಳಿವೆ. ಅವುಗಳಲ್ಲಿ ಗ್ರಾಮೀಣ ಗ್ರಂಥಾಯಲಗಳ ಸಂಖ್ಯೆಯೇ 141. ದ.ಕ.ದಲ್ಲಿ 204 ಗ್ರಾಮೀಣ ಗ್ರಂಥಾಲಯಗಳಿದ್ದು, 7 ಸಾರ್ವಜನಿಕ, 4 ಕೊಳಚೆಗೇರಿ ಪ್ರದೇಶ ಹಾಗೂ 2 ಅಲೆಮಾರಿ ಪ್ರದೇಶದಲ್ಲಿ ಸೇರಿ ಒಟ್ಟು 217 ಗ್ರಂಥಾಲಯಗಳಿವೆ.

ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರು ಅಥವಾ ಗ್ರಂಥಪಾಲಕರ ಬದುಕು ಸಂಕಷ್ಟದಲ್ಲಿದೆ. ಜೂನ್‌ನಿಂದ ಮಾಸಿಕ ವೇತನ ಏರಿಕೆಯಾಗಿದ್ದರೂ ಪಾವತಿಯಾಗಿಲ್ಲ. ಇದನ್ನೇ ನಂಬಿಕೊಂಡು ನಾವು ಜೀವನ ಸಾಗಿಸುತ್ತಿರುವುದರಿಂದ ತುಂಬಾ ಕಷ್ಟವಾಗುತ್ತಿದೆ. ಪ್ರತೀ ತಿಂಗಳ ಕೊನೆಗೆ ಈ ಹಣ ಪಾವತಿಯಾದರೇ ತುಂಬಾ ಅನುಕೂಲವಾಗುತ್ತದೆ.ಸುರೇಶ್‌, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ

ಶೀಘ್ರ ಪಾವತಿಗೆ ಕ್ರಮ:

ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನವನ್ನು ಹೆಚ್ಚಿಸಲಾಗಿದೆ. 3 ತಿಂಗಳಿನಿಂದ ಪಾವತಿಯಾಗದಿರುವ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗನೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವೆ.ಡಾ| ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

11

Kota: ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಂಪೂರ್ಣ ಕ್ಯಾಶ್‌ಲೆಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.