ಪಾರಂಪಳ್ಳಿ ಪಡುಕರೆ ರೈತರಿಗೆ ಉಪ್ಪು ನೀರಿನ ಕಂಟಕ
Team Udayavani, Jan 15, 2021, 3:50 AM IST
ಕೋಟ: ಸಾಲಿಗ್ರಾಮ ಪ.ಪಂ.ನ ಪಾರಂಪಳ್ಳಿ-ಪಡುಕರೆಯ ಹತ್ತಾರು ಎಕ್ರೆ ಕೃಷಿ ಭೂಮಿಗೆ ಈಗ ಉಪ್ಪು ನೀರಿನ ಕಂಟಕ ಎದುರಾಗಿದೆ. ಪಕ್ಕದ ಹೊಳೆಯಿಂದ ಗದ್ದೆಗೆ ನಿರಂತರ ಉಪ್ಪು ನೀರು ಹರಿದು ಬರುತ್ತಿದ್ದು ಇದ ರಿಂದ ಬೆಳೆಗಳು ನಾಶವಾಗಿವೆ.
ಈ ಬಾರಿ ಉದ್ದು, ಹುರುಳಿ ಮುಂತಾದ ಧಾನ್ಯಗಳನ್ನು ಬೆಳೆಯ ಲಾಗಿದ್ದುª ಇವೆಲ್ಲವೂ ಉಪ್ಪು ನೀರಿನಂದ ಕೊಳೆತು ಹೋಗಿವೆ. ಪರಿಹಾರ ಕ್ರಮದ ಅನಂತರಹೆಚ್ಚಿದ ಸಮಸ್ಯೆ ಈ ಹಿಂದೆ ತಿಂಗಳಲ್ಲಿ ಒಂದೆರಡು ದಿನ ಮಾತ್ರ ಉಪ್ಪು ನೀರು ಗದ್ದೆಗಳಿಗೆ ನುಗ್ಗುತ್ತಿತ್ತು ಹಾಗೂ ಇದನ್ನು ತಡೆ ಗಟ್ಟುವ ಸಲುವಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಹೊಳೆಗೆ ತಡೆಗೋಡೆ ನಿರ್ಮಿಸಿ ರಿಂಗ್ ರೋಡ್ ಮಾದರಿಯಲ್ಲಿ ರಸ್ತೆ ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಗದ್ದೆ ಯಿಂದ ನೀರು ಹರಿದು ಹೋಗಲು ತಡೆಗೋಡೆ ನಡುವೆ ಅಳವಡಿಸಿದ ಪೈಪ್‌ನಲ್ಲಿ ಹೊಳೆಯ ನೀರು ನುಗ್ಗಿ ಬರುತ್ತಿದೆ.
ವಿನ್ಯಾಸದಲ್ಲಿ ದೋಷ :
ಸ್ಥಳೀಯ ರೈತರ ಅಭಿಪ್ರಾಯದಂತೆ ತಡೆಗೋಡೆಯ ನಿರ್ಮಾಣ ಹಾಗೂ ಇಲ್ಲಿ ಅಳವಡಿಸಲಾದ ಪೈಪ್‌ನ ವಿನ್ಯಾಸದಲ್ಲಿ ದೋಷವಿದೆ. ಈ ಕಾರಣಕ್ಕೆ ನೀರಿನಲ್ಲಿ ಸ್ವಲ್ಪ ಏರಿಳಿತ ಉಂಟಾದರೂ ಉಪ್ಪು ನೀರು ನುಗ್ಗುತ್ತಿದೆ. ಅದೇ ರೀತಿ ಪಕ್ಕದಲ್ಲಿನ ಕಾಂಡ್ಲಾ ವನ ಕೂಡ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿವೆ ಎನ್ನುವ ಅಭಿಪ್ರಾಯವಿದೆ.
ಸಮಸ್ಯೆ ಸರಿಪಡಿಸಲು ಆಗ್ರಹ :
ಸಂಬಂಧಪಟ್ಟ ಇಲಾಖೆಯವರು ತಡೆಗೋಡೆ ಪರಿಶೀಲನೆ ನಡೆಸಿ ಇದರ ದೋಷವನ್ನು ಸರಿಪಡಿಸಬೇಕು. ಈ ಮೂಲಕ ಕೃಷಿ ಭೂಮಿ ಉಪ್ಪು ನೀರಿನಿಂದ ಹಾನಿಯಾಗುವುದನ್ನು ತಪ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಸಮಸ್ಯೆ ಪರಿಶೀಲಿಸಿ ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಲಾಗುವುದು -ಅರುಣ್ ಕುಮಾರ್, ಮುಖ್ಯಾಧಿಕಾರಿಗಳು, ಸಾಲಿಗ್ರಾಮ ಪ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.