ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ ಗೆ ಸೆಲ್ಯೂಟ್
Team Udayavani, May 15, 2020, 5:24 AM IST
ಕೊಲ್ಲೂರು: ಕೋವಿಡ್-19 ವಾರಿಯರ್ಸ್ ಆಗಿ ಕಳೆದ 50 ದಿನಗಳಿಂದ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಗಡಿ ಪ್ರದೇಶದ ಭದ್ರತಾ ವ್ಯವಸ್ಥೆ ನಿಜಕ್ಕೂ ಇತರರಿಗೆ ಮಾದರಿ ಹಾಗೂ ಹೊಸ ಚೆ„ತನ್ಯ ತುಂಬಿದೆ ಅನ್ನುವುದಕ್ಕೆ ಕೊಲ್ಲೂರಿನ ದಳಿ ಎಂಬಲ್ಲಿನ ಗಡಿ ಪ್ರದೇಶ ಸಾಕ್ಷಿಯಾಗಿದೆ.
ಪೊಲೀಸ್ ಸಿಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು, ಆಶಾ ಕಾರ್ಯಕರ್ತೆಯರು ಅವರೆಲ್ಲರಿಗೂ ಮಾರ್ಗದರ್ಶಿಯಾಗಿ ವೈದ್ಯಾಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರು ಮಾದರಿಯಾಗಿದ್ದಾರೆ. ಗಡಿ ಪ್ರದೇಶದಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಯಾವುದೇ ವಾಹನ ನುಸುಳದಂತೆ ವಿಶೇಷ ನಿಗಾ ವಹಿಸಿ ಕೋವಿಡ್-19 ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸುತ್ತಿರುವ ಪರಿ ನಿಸ್ವಾರ್ಥ ಸೇವೆಗೆ ಹಿಡಿದ ಕನ್ನಡಿಯಾಗಿದೆ.
ಕೋವಿಡ್-19ರ ವಿರುದ್ದ ಹೋರಾಡಲು ಪಣತೊಟ್ಟ ಈ ಮಂದಿ ಹಲವಾರು ಒತ್ತಡ, ಟೀಕೆ ಟಿಪ್ಪಣಿ ನಡುವೆ ಸ್ವಸ್ಥ ಸಮಾಜ ನಿರ್ಮಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯದ ಲಾಕ್‌ಡೌನ್ ಆದೇಶವನ್ನು ಪಾಲಿಸುತ್ತಾ ವಿಶೇಷ ಸಾಧನೆ ಮಾಡಿರುತ್ತಾರೆ. ಉರಿ ಬಿಸಿಲಿನ ತಾಪದಲ್ಲಿ ನಿರ್ಮಿಸಲಾದ ಶ್ಯಾಮಿಯಾನದ ನಡುವೆ ಕುಡಿಯುವ ನೀರಿಲ್ಲದೆ ಆಹಾರಕ್ಕಾಗಿ ಸ್ಥಳೀಯರ ಸಹಕಾರ ಕೋರುತ್ತಾ ವಾಹನ ತಪಾಸಣೆ ಅಲ್ಲದೆ ಪ್ರಯಾಣಿಕರಲ್ಲಿ ಜ್ವರದ ಬಾಧೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹಗಲಿರುಳು ಸೇವಾ ಕೈಂಕರ್ಯಕ್ಕೆ ಒತ್ತು ಕೊಟ್ಟು ನಾಗರಿಕರಿಗೆ ಕೋವಿಡ್-19 ಬಗ್ಗೆ ಜಾಗೃತೆ ಮೂಡಿಸುವ ಅವರ ಕಳಕಳಿ ಜಿಲ್ಲೆಯನ್ನು ಕ್ಷೇಮವಾಗಿರಿಸಿದೆ. ಈ ಕಟ್ಟು ನಿಟ್ಟಾದ ಕ್ರಮವು ಮುಂದುವರಿಯಲಿದ್ದು ಅದಕ್ಕಾಗಿ ಶ್ರಮಿಸುತ್ತಿರುವ ಮಂದಿಗೆ ಭೇಷ್ ಎನ್ನಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.