ಎಲ್ಲೆಡೆ ಸಂಚಲನ ಮೂಡಿಸಿದ “ಸಂಚಲನ” ಕಿರುಚಿತ್ರ
Team Udayavani, Sep 4, 2017, 1:48 PM IST
ಎರಡು ದಿನದಲ್ಲೇ 11k+ ಯೌಟ್ಯೂಬ್ ವೀಕ್ಷಣೆಗಳು
ಅಕ್ರಮ ಮರಳುಗಾರಿಕೆ ಕುರಿತು ಕುಂದಾಪುರದ ಯುವಕರ ತಂಡ ನಿರ್ಮಿಸಿದ 30 ನಿಮಿಷಗಳ ‘ಸಂಚಲನ’ ಎಂಬ ಶೀರ್ಷಿಕೆಯ ಕಿರುಚಿತ್ರವನ್ನು ಶನಿವಾರ ಸೆಪ್ಟೆಂಬರ್ 2 ರಂದು ಕುಂದಾಪುರದ ಭಂಡಾರ್ಕರ್ ಕಾಲೇಜ್ ಆಡಿಟೋರಿಯಂನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಕಿರುಚಿತ್ರದ ನಾಯಕಿ ಮಂಗಳೂರಿನ “ಶ್ರೀನಿಧಿ ಶೆಟ್ಟಿ” ಹಾಗು ಕುಂದಾಪುರದ “ರಥಿಕ್ ಮುರುಡೇಶ್ವರ್”, ಶ್ರದ್ಧಾ ಹಾಗು ಕರ್ಣಾ ಎನ್ನುವ ಪಾತ್ರವನ್ನು ಮಾಡಿದ್ದಾರೆ. ಉಡುಪಿ-ಕುಂದಾಪುರ ಸುತ್ತಮುತ್ತಲಿನ ಮರಳು ಸಮಸ್ಯೆ ಹಾಗು ಅಕ್ರಮ ಮರಳುಗಾರಿಕೆ ಕುರಿತು ಈ ಕಿರುಚಿತ್ರದ ಕಥೆಯನ್ನು ರಚಿಸಲಾಗಿದೆ. ಇಡೀ ಚಿತ್ರವನ್ನ ಕರಾವಳಿಯಲ್ಲಿ ಕಳೆದ ಒಂದು ವರ್ಷದಿಂದ ಅನುಭವಿಸಿಕೊಂಡು ಬಂದಿರುವ ಮರಳುಗಾರಿಕೆ ಸಮಸ್ಯೆ, ಮರಳು ಸಿಗುವ ವ್ಯವಸ್ಥೆ, ದುಬಾರಿ ಮರಳಿನ ಸಮಸ್ಯೆ ಈ ಎಲ್ಲಾ ಸತ್ಯ ಘಟನೆಯ ಸುತ್ತ ಈ ಚಿತ್ರದ ಕಥೆಯನ್ನು ರಚಿಸಲಾಗಿದೆ.
ಚಿತ್ರದ ನಾಯಕಿ ಒರ್ವ ಪತ್ರಕರ್ತ ವಿದ್ಯಾರ್ಥಿನಿಯಾಗಿ ಹೇಗೆ ಮರಳು ಮಾಫಿಯಾದ ಬಲೆಗೆ ಸಿಲುಕಿ ಸಾವನಪ್ಪುತ್ತಾಳೆ, ನಾಯಕ “ಕರ್ಣಾ” ಅವಳ ಸಾವಿನ ರಹಸ್ಯ ಹೇಗೆ ಬಯಲು ಮಾಡುತ್ತಾನೆ ಎನ್ನುವ ಈ ಕಿರುಚಿತ್ರ ಎಲ್ಲೆಡೆ ಮನೆ ಮಾತಾಗಿದೆ.
ಕುಂದಾಪುರದ ಜನರ ಮೆಚ್ಚುಗೆಗೆ ಪ್ರತ್ರರಾದ “ಸಂಚಲನ” ಕಿರುಚಿತ್ರ ಬಿಡುಗಡೆಯಾದ ಎರಡು ದಿನದಲ್ಲೇ 11k ಯೌಟ್ಯೂಬ್ ವೀಕ್ಷಣೆಗಳನ್ನು ಪಡೆದಿದೆ ಹಾಗು ಸೆಪ್ಟೆಂಬರ್ ೪ ರಂದು ಯೌಟ್ಯೂಬ್ #48 ಟ್ರೆಂಡಿಂಗ್ ವಿಡಿಯೋಆಗಿದೆ.
“ಸಂಚಲನ” ಕಿರುಚಿತ್ರವು ರಾಘವೇಂದ್ರ ಶೇರಿಗಾರ್ ನೇತೃತ್ವದ ಇಂಪನಾ ಪ್ರೋಡಕ್ಷನ್ ಮೂಲಕ ನಿರ್ಮಾಣಗೊಂಡಿದ್ದು, ರಥಿಕ್ ಮುರ್ಡೇಶ್ವರ ನಾಯಕ ನಟನಾಗಿ, ಶ್ರೀನಿಧಿ ಶೆಟ್ಟಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ, ಸಂಭಾಷಣೆ, ಚಿತ್ರಕಥೆಯನ್ನು ಅರ್ಜುನ್ ದಾಸ್ ಮಾಡಿದ್ದು, ಸುನಿಲ್, ನಾಗರಾಜ್ ಆಚಾರ್ಯ, ರಾಘವ್ ಸಹನಿರ್ದೇಶನ ನೀಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಸಂದೇಶ್ ಮಂಗಳೂರು ಮತ್ತು ಜಯಂತ್ ಐತಾಳ್ ನೀಡಿದ್ದು, ಧ್ವನಿಯನ್ನು ಡ್ಯಾನಿ ಶೆಲ್ ಡನ್ ಒದಗಿಸಿದ್ದಾರೆ. ಧ್ವನಿಗ್ರಹಣವನ್ನು ರಿದ್ದಿ ಕ್ರಿಯೇಶನ್ನಸ್ ಉಡುಪಿ, ಸಂಕಲನ ವಿನಾಯಕ್ ಮಲ್ಯ, ಕಲೆ ಮತ್ತು ವಿನ್ಯಾಸವನ್ನು, ಸಿರಾಜ್ ಕೋಟೆಶ್ವರ್, ರಾಧಾಕೃಷ್ಣ, ಛಾಯಗ್ರಹಣ ಅಕ್ಷಯ್ ಕುಮಾರ್ ಮಾಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕರಾಗಿ ಜ್ಯೋತಿ ಕಾಮತ್ ಕುಂಭಾಶಿ, ದೀಪಿಕಾ ರಾಘವೇಂದ್ರ, ಸಾಹಸದಲ್ಲಿ ಮಂಜುನಾಥ ಕೋಟೇಶ್ವರ ಸಹಕರಸಿದ್ದಾರೆ. ಹಾಗೂ ಕುಂದಾಪುರದ ಗೌತಮ್ ನಾವಡ ನೇತೃತ್ವದ “ಫೋರ್ಥ್ ಫೋಕಸ್ ಗ್ರೂಪ್” ಈ ಚಿತ್ರದ ಆನ್ಲೈನ್ ಪಾಲುದಾರರಾಗಿ ಸಹಕರಿಸಿದೆ.