ನಿಗದಿತ ದಿನ ಕಳೆದರೂ ದೊರೆಯದ ಮರಳು
ಮರಳುಗಾರಿಕೆ ಕರ್ನಾಟಕ ಮಿನರಲ್ಸ್‌ಗೆ ; ಅ. 16ರಿಂದ ಆರಂಭವಾಗಬೇಕಿತ್ತು
Team Udayavani, Nov 21, 2020, 4:35 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಹೊಸ ಮರಳು ನೀತಿಯನ್ವಯವೂ ಮರಳುಗಾರಿಕೆ ಆರಂಭಗೊಂಡಿಲ್ಲ. ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ನೀಡಿದ ಅನುಮತಿಯಂತೆ ಅ. 16ರಿಂದ ಆರಂಭವಾಗಬೇಕಿದ್ದರೂ ಆರಂಭ ವಾಗಿಲ್ಲ. ಕೊರೊನಾ ಲಾಕ್‌ಡೌನ್ ಹಂತಹಂತದಲ್ಲಿ ಅಂತ್ಯಗೊಳ್ಳುತ್ತಿದ್ದು ಬಹುತೇಕ ಚಟುವಟಿಕೆ ಗಳು ಹಳಿಗೆ ಬಂದಿವೆ. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಸ್ಥಳೀಯ ಮರಳು ದೊರೆಯುತ್ತಿಲ್ಲ.
ಅನುಮತಿ
ಕಳೆದ ವರ್ಷ ಕಂಡಲೂರು, ಬಸ್ರೂರಿನಲ್ಲಿ ಸಿಹಿನೀರ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಈ ಪೈಕಿ ಗುಲ್ವಾಡಿ, ಕಂಡಲೂರು, ಹಳ್ನಾಡು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಜಪ್ತಿ, ಬಸ್ರೂರು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ. ಇಲ್ಲಿ 1 ಟನ್‌ಗೆ 7 ಸಾವಿರ ರೂ.ಗಳಂತೆ ಮರಳನ್ನು ನೀಡಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಸೇರಿಲ್ಲ.
ಆ್ಯಪ್ ಗೊಂದಲ
ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ತೆಗೆಯುವ ಮರಳು ಧಕ್ಕೆಯಲ್ಲಿ ಒಂದು ಮೆಟ್ರಿಕ್ ಟನ್‌ಗೆ 550 ರೂ. ದರ ನಿಗದಿಪಡಿಸಲಾಗಿದೆ. ಅದೇ ರೀತಿ ಮೂರು ಯುನಿಟ್ (10 ಮೆಟ್ರಿಕ್ ಟನ್) ಮರಳು 5,500 ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗ ಬೇಕು. ಇದರಲ್ಲಿ ಸರಕಾರದ ರಾಜಸ್ವವೂ ಸೇರಿದೆ. ಲಾರಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ 2,500 ರೂ. ದರ ನಿಗದಿಗೊಳಿಸಲಾಗಿದೆ. ಅನಂತರದ ಪ್ರತೀ ಕಿ.ಮೀ.ಗೆ 50 ರೂ. ಹೆಚ್ಚುವರಿ ದರ ನಿಗದಿಯಾಗಿದೆ.
ಮರಳು ಬುಕ್ಕಿಂಗ್ ಆ್ಯಪ್ ಗೊಂದಲಮಯ ವಾಗಿದ್ದು, ಸರ್ವರ್ ತೊಂದರೆ, ಒಟಿಪಿ ಸರಿಯಾಗಿ ಬರದೇ ಇರುವುದು ಅನೇಕ ತಾಂತ್ರಿಕ ಸಮಸ್ಯೆ ಗಳಿದ್ದವು. ಆ್ಯಪ್ ಮೂಲಕ ಬುಕ್ಕಿಂಗ್ ಮಾಡಿದರೆ ಮರಳಿನ ದರ 5,500 ರೂ., ಲಾರಿ ಬಾಡಿಗೆ, ಜಿಎಸ್‌ಟಿ ಇತ್ಯಾದಿ ಸೇರಿ 9 ಸಾವಿರ ರೂ. ಬರಬೇಕು. ಆದರೆ ಬುಕ್ಕಿಂಗ್ ಮಾಡುತ್ತಾ ಹೋದಂತೆ ಅದು 13, 149 ರೂ.ಗೆ ತಲುಪುತ್ತಿತ್ತು. ಜತೆಯಲ್ಲಿ ಆ್ಯಪ್ ಶುಲ್ಕ ಮತ್ತು ಇತರ ಶುಲ್ಕದ ಜತೆ 10 ಮೆ.ಟ. ಮರಳಿಗೆ ಸರಿ ಸುಮಾರು 13,000ದಿಂದ 16,000 ರೂ.ಗಳನ್ನು ಖರೀದಿದಾರ ಭರಿಸುವ ಸ್ಥಿತಿ ಬಂದಿತ್ತು. ಜತೆಗೆ ಅವ್ಯವಹಾರದ ದೂರುಗಳೂ ಇದ್ದವು. ಈ ಬಾರಿಯಾದರೂ ಇದನ್ನು ಸರಿಪಡಿಸಿದರೆ ಗ್ರಾಹಕರು ದರ ಹೊರೆಯಿಂದ ಪಾರಾಗಬಹುದು.
ಸಂಗ್ರಹ
ಒಂದು ಬ್ಲಾಕಿನಲ್ಲಿ 27,218 ಮೆ.ಟ. ಮರಳಿಗೆ ಅನುಮತಿ ನೀಡಿದ್ದು ಅಷ್ಟೂ ವಿತರಿಸಲಾಗಿದೆ. ಇನ್ನೊಂದು ಬ್ಲಾಕ್‌ನಲ್ಲಿ 56,821 ಮೆ.ಟ. ಮರಳು ತೆಗೆಯಲು ಅನುಮತಿ ನೀಡಿದ್ದು 48 ಸಾವಿರ ಮೆ.ಟ. ವಿತರಿಸಲಾಗಿದೆ. ಮಾ. 31ರೊಳಗೆ ವಿತರಣೆಯಾಗದೇ 8,821 ಮೆ.ಟ. ಬಾಕಿಯಾಗಿದೆ. ಇದರ ವಿಲೇ ಹೇಗೆ ಎನ್ನುವುದು ನಿಶ್ಚಯವಾಗಿಲ್ಲ ಈ ವರ್ಷವೂ ಇಷ್ಟೇ ಪ್ರಮಾಣದ ಮರಳು ವಿತರಣೆಯಾಗಬೇಕಿದ್ದು ಮರಳುಗಾರಿಕೆಗೆ ಐದು ವರ್ಷಕ್ಕೆ ಅನುಮತಿ ದೊರೆತಿದೆ. ಆವರೆಗೆ ಆ್ಯಪ್ ಮೂಲಕ ಮರಳು ವಿತರಿಸಬೇಕು.
ಹೊಸ ನಿಯಮ
ರಾಜ್ಯ ಸರಕಾರ ಹೊಸ ಮರಳು ನೀತಿಯನ್ನು ಜೂನ್‌ನಲ್ಲಿ ಜಾರಿಗೆ ತಂದಿದ್ದು ಅದರಂತೆ ರಾಜ್ಯದಲ್ಲಿ ಗಣಿಗಾರಿಕೆಗೆ ಎರಡು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಜನರಿಗೆ ಕಡಿಮೆ ದರದಲ್ಲಿ ಸುಲಭ ಮತ್ತು ಪಾರದರ್ಶಕವಾಗಿ ಮರಳು ದೊರಕುವಂತೆ ರಾಜ್ಯ ಸರಕಾರ ಈ ಹೊಸ ಮರಳು ನೀತಿ ಜಾರಿಗೊಳಿಸಿದೆ. ಇದರನ್ವಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಂಪ್ರ ದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ನದಿ, ಅಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿ ಇರುವ ಮರಳು ನಿಕ್ಷೇಪಗಳ ನಿರ್ವಹಣೆಯನ್ನು ಸರಕಾರಿ ಸ್ವಾಮ್ಯದ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಶನ್ (ಕೆಎಸ್‌ಎಂಸಿ)ನಡೆಸಲಿದೆ.
ಅಕ್ರಮ ಮರಳುಗಾರಿಕೆ
ಪ್ರಸ್ತುತ ಕಾನೂನುಬದ್ಧ ಮರಳು ದೊರೆಯದ ಕಾರಣ ವಿವಿಧ ನದಿ ತೀರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ದೂರುಗಳಿವೆ. 18 ಸಾವಿರ ರೂ.ವರೆಗೆ ದರ ವಿಧಿಸಿ ಮರಳು ತಂದು ಹಾಕಲಾಗುತ್ತಿದೆ.
ಜಿಲ್ಲಾಡಳಿತದ ಪಾತ್ರವಿಲ್ಲ
ಮರಳುಗಾರಿಕೆಯಲ್ಲಿ ಇನ್ನು ಜಿಲ್ಲಾಡಳಿತದ ಪಾತ್ರವಿಲ್ಲ. ಕರಾವಳಿಯಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ನಿಗಮ ಮರಳುಗಾರಿಕೆ ಮಾಡಲಿದ್ದು ಕಂದಾಯ ಇಲಾಖೆ ಮರಳುದಿಬ್ಬಗಳನ್ನು ಗುರುತಿಸಿ ಹಸ್ತಾಂತರಿಸಿದೆ. ಜಿಲ್ಲಾ ಮರಳು ಸಮಿತಿಯ ತೀರ್ಮಾನದ ಬಳಿಕ ಈಗಾಗಲೇ ಮರಳುಗಾರಿಕೆ ಅನುಮತಿ ಪಡೆದವರು ಮರು ಆರಂಭಿಸಬಹುದು.
-ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ
ದರ ವ್ಯತ್ಯಾಸ ಬೇಡ
ಸರಕಾರ ವಿಧಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಮರಳು ಮಾರಾಟ ನಡೆಸಬಾರದು. ಅದು ದಂಧೆಯಾಗಬಾರದು. ಬಡವರಿಗೆ ಮರಳು ಸುಲಭವಾಗಿ, ಕಡಿಮೆ ದರದಲ್ಲಿ ದೊರೆಯಬೇಕೆನ್ನುವುದು ನಮ್ಮ ಆಶಯ. ಗ್ರಾಮ ಗ್ರಾಮಗಳಲ್ಲಿ ಮರಳು ದೊರೆಯಲು ಹೊಸ ಮರಳು ನೀತಿ ಬಂದಿದ್ದು ಅನುಷ್ಠಾನ ಹಂತದಲ್ಲಿದೆ.
-ಬಿ.ಎಂ. ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.