ಮರಳು, ವಿಜಯ ಬ್ಯಾಂಕ್, ಫ್ಲೈಓವರ್!
Team Udayavani, Apr 3, 2019, 11:05 AM IST
ಕುಂದಾಪುರ: ಕರಾವಳಿಯ ಚುನಾವಣ ಪ್ರಚಾರದಲ್ಲಿ ಈಗ ಮುಖ್ಯ ಸದ್ದು ಮರಳು, ಫ್ಲೈಓವರ್ ಮತ್ತು ವಿಜಯ ಬ್ಯಾಂಕ್! ಕ್ಷೀಣವಾದ ಧ್ವನಿ ಎತ್ತಿನಹೊಳೆಯದು.
ಫ್ಲೈಓವರ್
ಮಂಗಳೂರಿನ ಪಂಪ್‌ವೆಲ್, ಕುಂದಾಪುರದ ಶಾಸಿŒ ಸರ್ಕಲ್ ಫ್ಲೈಓವರ್ ಅರ್ಧಕ್ಕೆ ಬಾಕಿ ಯಾಗಿವೆ. ಈ ಕುರಿತು ಕಾಂಗ್ರೆಸ್- ಬಿಜೆಪಿ ಆರೋಪ -ಪ್ರತ್ಯಾರೋಪ ಮಾಡುತ್ತಿವೆ. ನಳಿನ್ ಅಂತೂ ಚುನಾವಣೆಗೆ ಮುನ್ನ ಹೇಗಾದರೂ ಲೋಕಾರ್ಪಣೆ ಮಾಡಬೇಕೆಂಬ ಹಠ ತೊಟ್ಟಿ ದ್ದರು. ಜಾಲತಾಣದಲ್ಲಿ ಫ್ಲೈಓವರ್ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಕಾಂಗ್ರೆಸ್ ಇದನ್ನೇ ಪದೇಪದೇ ಕೆಣಕಿತ್ತು. ಫ್ಲೈಓವರ್ ಆಗದೇ ಇರಲು ಲೋಬೋ, ಐವನ್, ಮನಪಾ ಆಯುಕ್ತರಾಗಿದ್ದ ಇಬ್ರಾಹಿಂ ಕಾರಣ ಎಂದು ನಳಿನ್ ಪ್ರತ್ಯಸ್ತ್ರ ಹೂಡಿದ್ದರು. ಕುಂದಾಪುರದ ಫ್ಲೈಓವರ್ ಕೂಡ ಸಾಕಷ್ಟು ಟೀಕೆ, ಟ್ರೋಲ್‌ಗೆ ಆಹಾರವಾಯಿತು. ಶೋಭಾ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಫ್ಲೈಓವರ್ ಕಾಂಗ್ರೆಸ್ ಸಂಸದರ ಕಾಲದ್ದು ಎಂದು ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಜಾಲತಾಣಿಗರು ಟೀಕಿಸುವುದು ಬಿಡಲೇ ಇಲ್ಲ.
ಬ್ಯಾಂಕ್ ವಿಲೀನ
ವಿಜಯ ಬ್ಯಾಂಕ್ ಅವಿಭಜಿತ ದ.ಕ. ಜಿಲ್ಲೆ ಯೊಂದಿಗೆ ಬಂಧ ಹೊಂದಿದ್ದರೂ ಚುನಾವಣ ಅಸ್ತ್ರವಾಗಿಸುತ್ತಿರುವುದು ದ. ಕನ್ನಡದವರು ಮಾತ್ರ. ಸಂಸದ ನಳಿನ್ ಮೌನವೇ ವಿಲೀನಕ್ಕೆ ಕಾರಣ, ಅವರು ವಿಜಯ ಬ್ಯಾಂಕ್‌ನ್ನು ಗುಜರಾತಿ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ ವಾಸ್ತವ ಹೇಳುವಲ್ಲಿ ಸೋತ ಬಿಜೆಪಿಯವರು ಸುಂದರ ರಾಮ ಶೆಟ್ಟರ ಹೆಸರನ್ನು ರಸ್ತೆಗೆ ಇರಿಸಲು ಲೋಬೋ ಬಿಡಲಿಲ್ಲ, ಐವನ್ ಬಿಡಲಿಲ್ಲ ಎನ್ನುತ್ತಿದ್ದಾರೆ.
ಮರಳು ಮರುಳು
ಮರಳು ದೊರೆಯದ ಕಾರಣ ಕಾಮಗಾರಿ ವಿಳಂಬ, ಉದ್ಯೋಗ ಕಡಿಮೆ, ವಹಿವಾಟಿನ ಮೇಲೆ ಗಂಭೀರ ಪರಿಣಾಮಗಳಾಗಿವೆ. ಮರಳು ಚಿನ್ನದ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿದೆ. ಉಡುಪಿಯಲ್ಲಿ ಮರಳು ಸಮಸ್ಯೆಗೆ ಸಚಿವರಾಗಿದ್ದ ಪ್ರಮೋದ್ ಕಾರಣ ಎಂದು ಶೋಭಾ ಹೇಳಿಕೆ ಕೊಟ್ಟರೆ, ಶೋಭಾರಿಂದಾಗಿಯೇ ಮರಳು ಹೊರೆಯಾಗಿದೆ ಎಂದು ಪ್ರಮೋದ್ ಹೇಳುತ್ತಾರೆ.
ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ಚುನಾವಣೆ ಸಂದರ್ಭ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಪಾದಯಾತ್ರೆ, ರಥಯಾತ್ರೆ, ಕರಸೇವೆ ಮಾಡುತ್ತೇವೆ, ಅಣೆಕಟ್ಟು ಒಡೆಯುತ್ತೇವೆ ಎಂದಿದ್ದವರು ಈ ಬಾರಿ ಅದರ ತಂಟೆಗೆ ಹೋಗಿಲ್ಲ. ಕರಾವಳಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕಾಮಗಾರಿ ಒದಗಿಸುತ್ತೇವೆ ಎಂದ ಕಾಂಗ್ರೆಸಿಗರೂ ತಾವು ಹೇಳಿದ್ದನ್ನು ಮರೆತಿದ್ದಾರೆ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.