ಮೂಡುಗಿಳಿಯಾರಿನಲ್ಲಿ ಜಗತ್ತಿನ ಅಪರೂಪದ ಸರ್ವಕ್ಷೇಮ ಆಸ್ಪತ್ರೆ ಉದ್ಘಾಟನೆ
Team Udayavani, Feb 1, 2020, 7:35 PM IST
ಕೋಟ: ಕೋಟ ಸಮೀಪದ ಮೂಡುಗಿಳಿಯಾರಿನ ಯೋಗಬನದಲ್ಲಿ ಸಾಲಿಗ್ರಾಮದ ಡಿವೈನ್ ಪಾರ್ಕ್ನ ಅಂಗಸಂಸ್ಥೆಯಾಗಿ ನಿರ್ಮಾಣಗೊಂಡ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮಿಕ ಕೇಂದ್ರದ ಉದ್ಘಾಟನೆ ಫೆ.1ರಂದು ಜರಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಇಂದು ಭಾರತೀಯ ಆರೋಗ್ಯ ಪದ್ಧತಿಗಳಾದ ಯೋಗ, ಆಯುರ್ವೇದ,ಪ್ರಕೃತಿ ಚಿಕಿತ್ಸೆಗೆ ವಿಶ್ವ ಮಾನ್ಯತೆ ದೊರಕಿದೆ ಹಾಗೂ ಭವಿಷ್ಯದಲ್ಲಿ ವಿದೇಶಿಯರು ತಮ್ಮ ಆರೋಗ್ಯಕ್ಕಾಗಿ ಭಾರತೀಯ ಈ ಪದ್ಧತಿಯ ಕಡೆಗೆ ಮುಖ ಮಾಡಲಿದ್ದಾರೆ ಹಾಗೂ ವಿವೇಕಾನಂದರ ಆದರ್ಶವನ್ನು ಹೊಂದಿದ ಸರ್ವಕ್ಷೇಮ ಆಸ್ಪತ್ರೆ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಎಲ್ಲಾ ಅರ್ಹತೆ ಹೊಂದಿದೆ ಎಂದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ವಕ್ಷೇಮ ಆಸ್ಪತ್ರೆ ನಮ್ಮೂರು ಕೋಟದ ಹೆಮ್ಮೆಯಾಗಿದೆ ಹಾಗೂ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಡಾ.ವಿವೇಕರಲ್ಲಿ ವಿನಯತೆ ಇದೆ. ಈ ಹಿನ್ನಲೆಯಲ್ಲಿ ಈ ಆಸ್ಪತ್ರೆ ಅತ್ಯಂತ ಪ್ರಸಿದ್ದ ಆಸ್ಪತ್ರೆಯಾಗಿ ಬೆಳೆಯಲಿದೆ ಎಂದರು.
ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಡಾ.ಎ.ವಿವೇಕ ಉಡುಪ ಪ್ರಾಸ್ತಾವಿಕ ಮಾತನಾಡಿ, ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೊದ್ಧಾರದ ಚಿಂತನೆ ಇರಿಸಿಕೊಂಡು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಂಪೂರ್ಣವಾಗಿ ಕರಾವಳಿಯ ಪ್ರಾಚೀನ ವಾಸ್ತುಶೈಲಿಯಲ್ಲಿ 12 ಎಕ್ರೆ ವಿಸ್ತಾರವಾದ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದ್ದು ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆಯ ಸೌಲಭ್ಯವಿದೆ. ಗ್ರೀನ್ ಕ್ಯಾಂಪಸ್, ಸುಮಾರು 1.5ಕಿ.ಮೀ. ವಾಕಿಂಗ್ ಪಾಥ್ ಹಾಗೂ ಸೈಕ್ಲಿಂಗ್ ಪಾಥ್ ಮತ್ತಿತರ ಸೌಲಭ್ಯವಿದೆ ಎಂದರು.
ಸಾಲಿಗ್ರಾಮದ ಡಿವೈನ್ಪಾರ್ಕ್ ಟ್ರಸ್ಟ್ನ ಆಡಳಿತ ನಿರ್ದೇಶಕ ಡಾ.ಎ.ಚಂದ್ರಶೇಖರ ಉಡುಪ (ಡಾಕ್ಟರ್ಜೀ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸ್ವಾಮಿ ವಿವೇಕಾನಂದರ ಜಗತ್ತಿನ ಅತೀ ಎತ್ತರದ ಪ್ರತಿಮೆಯನ್ನು ಬೆಂಗಳೂರು ಜಿಗಣಿ ಸ್ವಾಮಿ ವಿವೇಕಾನಂದ ಯೋಗ ವಿವಿಯ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಜೀ ಅವರು ಅನಾವರಣಗೊಳಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯುಎಸ್ಎ ಯೋಗಭಾರತಿ ಛೇರ್ಮನ್ ರಘುರಾಮ್ ಜೀ, ಮಂಗಳೂರು ಕರ್ಣಾಟಕ ಬ್ಯಾಂಕ್ನ ಜನರಲ್ ಮೇನೆಜರ್ ನಾಗರಾಜ್ ರಾವ್ , ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್.ಯಡಪಡಿತ್ತಾಯ, ಬೆಂಗಳೂರಿನ ಆರೋಗ್ಯಧಾಮ ವೆಲ್ನೆಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಡಾ.ವೈ.ರುದ್ರಪ್ಪ, ಉಜರೆ ಶ್ರೀಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಮಣಿಪಾಲ ವಿವಿಯ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನಲ್ಸ್ ಡೀನ್ ಡಾ.ಜಿ.ಅರುಣ್ ಮಯ್ಯ, ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಪದವೀಧರರ ಸಂಘದ ಅಧ್ಯಕ್ಷ ಡಾ.ನವೀನ್ ಕೆ.ವಿ., ನವದೆಹಲಿಯ ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಘವೇಂದ್ರ ರಾವ್ ಎಂ., ಸ್ವಾಮಿ ವಿವೇಕಾನಂದ ಯೋಗ ವಿವಿಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಮಂಜುನಾಥ ಎನ್.ಕೆ., ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಡಾ.ಎ.ವಿವೇಕ ಉಡುಪ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.