ಸಾಸ್ತಾನ ಟೋಲ್: ತಿಂಗಳಿನಿಂದ ಸೇವೆಗಿಲ್ಲ ಆ್ಯಂಬುಲೆನ್ಸ್
ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಸಂದರ್ಭ ಗಾಯಾಳುವಿನ ಜೀವಕ್ಕೆ ಆಪತ್ತು
Team Udayavani, Jul 30, 2020, 3:18 PM IST
ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನಿಯೋಜನೆಗೊಂಡ ಸಾಸ್ತಾನ ಟೋಲ್‌ನ
ಆ್ಯಂಬುಲೆನ್ಸ್ ಒಂದು ತಿಂಗಳಿನಿಂದ ದುರಸ್ತಿ ಯಲ್ಲಿದ್ದು ಇದುವರೆಗೂ ಸೇವೆಗೆ ಮರಳಿಲ್ಲ ಹಾಗೂ ಬದಲಿ ವಾಹನದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಕುಂದಾಪುರದಿಂದ-ಉದ್ಯಾವರದ ವರೆಗಿನ 40 ಕಿ.ಮೀ. ವ್ಯಾಪ್ತಿಯನ್ನು ಸಾಸ್ತಾನ ಟೋಲ್ ಹೊಂದಿದ್ದು, ಈ ಪ್ರದೇಶದಲ್ಲಿ ಯಾವುದೇ ಅಪಘಾತವಾದರೆ ಇವರು ತುರ್ತಾಗಿ ನೆರವಿಗೆ ಧಾವಿಸಬೇಕು. ಪ್ರಸ್ತುತ ಇವರಿಂದ ಈ ಪ್ರದೇಶಕ್ಕೆ ತುರ್ತು ಸೇವೆ ಲಭ್ಯವಾಗುವುದಿಲ್ಲ.
ಅಪಘಾತವಾದರೆ ಸಮಸ್ಯೆ
ಹೆದ್ದಾರಿಯಲ್ಲಿ ಅಪಘಾತವಾದಾಗ ಟೋಲ್‌ನ ಆ್ಯಂಬುಲೆನ್ಸ್ ಅಥವಾ ಸರಕಾರಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗುತ್ತದೆ. ಇದೀಗ 108 ವಾಹನವನ್ನು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಬಳಸುವುದರಿಂದ ಇತರ ಸೇವೆಗೆ ಇವರು ಬರುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲು ಖಾಸಗಿ ವಾಹನ ಅವಲಂಬಿಸಬೇಕಿದೆ. ಇತ್ತೀಚೆಗೆ ಕೆಲವು ಕಡೆ ಅಪಘಾತವಾದಾಗ ಖಾಸಗಿ ಆ್ಯಂಬುಲೆನ್ಸ್ ಸಿಗದೆ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲು ಸಾಕಷ್ಟು ಸಮಸ್ಯೆಯಾಗಿತ್ತು. ಗಾಯಾಳು ವಿನ ಸ್ಥಿತಿ ಗಂಭೀರವಾಗಿದ್ದಾಗಲೂ ಇದಕ್ಕೆ ಬದಲಿ ವ್ಯವಸ್ಥೆ ಮಾಡಿರಲಿಲ್ಲ.
ಟೋಲ್ ನಿಯಮದ ಪ್ರಕಾರ ತುರ್ತು ಸೇವೆಗಾಗಿ ನಿಯೋಜನೆಗೊಂಡ ಯಾವುದೇ ವಾಹನ ಕೆಟ್ಟು ನಿಂತಾಗ ಇದಕ್ಕೆ ಬದಲಿ ವ್ಯವಸ್ಥೆ ಮಾಡಿ ಜನರಿಗೆ ಸೇವೆ ನೀಡಬೇಕು. ಆದರೆ ಇಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಸದಾ ದುರಸ್ತಿಯಲ್ಲಿರುವ ಆ್ಯಂಬುಲೆನ್ಸ್ ಇಲ್ಲಿನ ಆ್ಯಂಬುಲೆನ್ಸ್ ಅಫಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವು ದಕ್ಕಿಂತ ಹೆಚ್ಚಾಗಿ ಟೋಲ್‌ನ ಕಾರ್ಮಿಕರನ್ನು ಕೆಲಸಕ್ಕೆ ಕರೆತರಲು, ದಾರಿದೀಪ ರಿಪೇರಿ ಮಾಡುವವರನ್ನು ಕರೆದೊಯ್ಯಲು, ಬ್ಯಾಂಕ್‌ಗೆ ಹಣ ಜಮೆ ಮಾಡಲು, ಮುಂತಾದ ಕೆಲಸಕ್ಕೆ ಉಪಯೋಗಿಸ ಲಾಗುತ್ತಿದೆ ಪ್ರಾಥಮಿಕ ಚಿಕಿತ್ಸೆ ನೀಡಲು ಸೂಕ್ತ ಸಲಕರಣೆಗಳಿಲ್ಲದ ಕಾರಣ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಿಬಂದಿ ಗಳು ಹರಸಾಹಸಪಡುತ್ತಾರೆ.
ಶೀಘ್ರ ದುರಸ್ತಿ
ಚಿಕ್ಕ ಅಪಘಾತದಿಂದ ಆ್ಯಂಬುಲೆನ್ಸ್ ಹಾಳಾಗಿದ್ದು ಇದೀಗ ದುರಸ್ತಿ ನಡೆಯುತ್ತಿದೆ. ಬದಲಿ ವ್ಯವಸ್ಥೆಯ ಕುರಿತು ಕಂಪೆನಿ ಯಾವುದೇ ಸೂಚನೆ ನೀಡಿಲ್ಲ. ಈಗಿರುವ ಆ್ಯಂಬುಲೆನ್ಸ್ ಶೀಘ್ರ ದುರಸ್ತಿಗೊಂಡು ಸೇವೆಗೆ ಲಭ್ಯವಾಗಲಿದೆ.
-ಬಶೀರ್, ಟೋಲ್ ಮ್ಯಾನೇಜರ್
ಬದಲಿ ವ್ಯವಸ್ಥೆ ಮಾಡಿ
ಆ್ಯಂಬುಲೆನ್ಸ್ ಹಾಳಾಗಿ ಒಂದು ತಿಂಗಳು ಕಳೆದರೂ ಬದಲಿ ವ್ಯವಸ್ಥೆ ಯಾಗದೆ ಹೆದ್ದಾರಿ ಬಳಕೆದಾರರಿಗೆ ಸಮಸ್ಯೆಯಾಗಿದೆ. ಇದಕ್ಕೆ ಆದಷ್ಟು ಶೀಘ್ರ
ಬದಲಿ ವ್ಯವಸ್ಥೆ ಯಾಗಬೇಕು ಇಲ್ಲವೇ ಸುಸ್ಥಿತಿಯಲ್ಲಿರುವ ಆ್ಯಂಬುಲೆನ್ಸ್‌ವೊಂದನ್ನು ಇಲ್ಲಿಗೆ ಶೀಘ್ರ ನಿಯೋಜಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
-ಅಲ್ವಿನ್ ಅಂದ್ರಾದೆ, ಕಾರ್ಯದಶಿ, ಹೆದ್ದಾರಿ ಜಾಗೃತಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.